ಮಮತಾ ಬ್ಯಾನರ್ಜಿ ಆಡಳಿತದ ವಿರುದ್ಧ ಒಂದಾದ ದೇಶ: ಒನ್ ಇಂಡಿಯಾ ಗ್ರೌಂಡ್ ರಿಪೋರ್ಟ್
ಕೋಲ್ಕತ್ತದ ಆರ್. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯುವ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿವರಗಳು ಬೆಳಕಿಗೆ ಬರುತ್ತಿದ್ದಂತೆಯೇ ಆಕ್ರೋಶ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಆಡಳಿತದತ್ತ ತಿರುಗಿದೆ. ಈ ಘಟನೆ ಕೇವಲ ವೈದ್ಯಕೀಯ ಸಮೂಹ ಬೆಚ್ಚಿ ಬೀಳುವಂತೆ ಮಾಡಿಲ್ಲ, ಬದಲಾಗಿ ದೇಶವೇ ಒಂದಾಗುವಂತೆ ಮಾಡಿದೆ, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪೊಲೀಸರು ಪ್ರಕರಣವನ್ನು ನಿರ್ವಹಿಸಿದ ರೀತಿಯೇ ಟೀಕೆಗೆ ಕಾರಣವಾಗಿದೆ.
ದೇಶಾದ್ಯಂತ ಪ್ರತಿಭಟನೆ: ಒನ್ ಇಂಡಿಯಾ ಜೊತೆ ಮಾತು

ಈ ಘೋರ ಅಪರಾಧದ ಕುರಿತು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನರ ಜೊತೆ ಒನ್ ಇಂಡಿಯಾ ಮಾತುಕತೆ ನಡೆಸಿದೆ. ಪ್ರಕರಣವನ್ನು ನಿರ್ವಹಣೆ ಮಾಡಿದ ರೀತಿಯ ಕುರಿತು ವೈದ್ಯಕೀಯ ಸಮೂಹ ಧ್ವನಿ ಎತ್ತಿದೆ. ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್‌ಗಳು ಮೊದಲು ಧರಣಿ ನಿಲ್ಲಿಸಿದರು, ಬಳಿಕ ಎಲ್ಲರೂ ಒಗ್ಗಟ್ಟಾಗಿ ಸಹೋದ್ಯೋಗಿಗಳ ಜೊತೆ ಸೇರಿ ದೇಶಾದ್ಯಂತ ಹೋರಾಟ ಮಾಡಲು ನಿರ್ಧರಿಸಿದರು. ಈ ಒಗ್ಗಟ್ಟು ವೈದ್ಯರ ಸಮೂಹ ತಮಗೆ ನ್ಯಾಯ ಸಿಗುವ ತನಕ ಒಂದಾಗಿ ನಿಲ್ಲಲಿದೆ ಎಂಬ ಸ್ಪಷ್ಟ ಸಂದೇಶವನ್ನು ಸಾರಿದೆ.
ಬೆಂಗಳೂರಿನ ಡಾ. ಅಶ್ವನಿ ಈ ಘಟನೆ ಬಳಿಕ ಮಹಿಳಾ ವೈದ್ಯರ ಸುರಕ್ಷತೆ ಬಗ್ಗೆ ಭಯ ಮತ್ತು ಗಂಭೀರವಾದ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. "ಪಶ್ಚಿಮ ಬಂಗಾಳದ ಘನಘೋರ ಘಟನೆ ನಮ್ಮನ್ನು ಭಯಭೀತರನ್ನಾಗಿ ಮಾಡಿದೆ. ನಮಗೆ ಸುರಕ್ಷತೆ ಬೇಕು, ಪಶ್ಚಿಮ ಬಂಗಾಳದ ಸಂತ್ರಸ್ತೆಗೆ ನ್ಯಾಯ ಸಿಗಬೇಕು" ಎಂದು ಹೇಳಿದ್ದಾರೆ. ಅವರ ಮಾತು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಮತ್ತು ಕೆಲಸದ ಸ್ಥಳದಲ್ಲಿನ ಅಸುರಕ್ಷಿತ ವಾತಾವರಣದ ಪ್ರತಿಧ್ವನಿಯಾಗಿದೆ.

ಬೆಂಗಳೂರಿನ ಮತ್ತೊಬ್ಬ ವೈದ್ಯೆ ಡಾ. ಸಹನಾ ರಾವ್, "ವೈದ್ಯರುಗಳಿಗೆ ಸುರಕ್ಷತೆ ಇಲ್ಲದಿರುವುದೇ ಮುಖ್ಯ ಸಮಸ್ಯೆಯಾಗಿದೆ. ಈ ಘಟನೆ ಬಳಿಕ ಇಷ್ಟು ದಿನವಾದರೂ ನ್ಯಾಯ ಸಿಕ್ಕಿಲ್ಲ, ಆದ್ದರಿಂದ ನಮ್ಮ ಜ್ಯೂನಿಯರ್‌ಗಳಿಗೆ ನಿರ್ಭೀತಿಯಿಂದ ಕೆಲಸ ಮಾಡಿ ಎಂದು ಹೇಳಲಾಗುತ್ತಿಲ್ಲ" ಎಂದು. ಈ ಆಕ್ರೋಶವನ್ನು ದೇಶಾದ್ಯಂತ ವೈದ್ಯರು ಹೊರ ಹಾಕುತ್ತಿದ್ದು, ಅವರನ್ನು ರಕ್ಷಣೆ ಮಾಡದ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಸುಪ್ರೀಂಕೋರ್ಟ್ ಮಧ್ಯಪ್ರವೇಶ: ಒಂದು ಸಣ್ಣ ಭರವಸೆ
ಘಟನೆಯ ತೀವ್ರತೆಯನ್ನು ಅರಿತ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಎಫ್ಐಆರ್ ದಾಖಲು ಮಾಡುವಲ್ಲಿ ವಿಳಂಬ ಮಾಡಿರುವ ಪಶ್ಚಿಮ ಬಂಗಾಳ ಸರ್ಕಾರ ವಿರುದ್ಧ ಕೋರ್ಟ್‌ನ ಕಠಿಣ ಟೀಕೆಗಳನ್ನು ಮಾಡಿದೆ. ಕೋರ್ಟ್ ದೇಶಾದ್ಯಂತ ವೈದ್ಯರ ಸುರಕ್ಷತೆ ಮತ್ತು ಭದ್ರತೆಗಾಗಿ ರಾಷ್ಟ್ರೀಯ ಮಟ್ಟದ ಮಾರ್ಗಸೂಚಿ ರಚನೆಗೆ 10 ಸದಸ್ಯರ ಟಾಸ್ಕ್ ಫೋರ್ಸ್ ರಚನೆ ಮಾಡಲು ಆದೇಶಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಈ ಟಾಸ್ಕ್‌ಪೋರ್ಸ್ ಮೂರು ವಾರದಲ್ಲಿ ಮಧ್ಯಂತರ ವರದಿ ಮತ್ತು ಎರಡು ತಿಂಗಳಿನಲ್ಲಿ ಅಂತಿಮ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಇದು ಹೊಣೆಗಾರಿಕೆ ಮತ್ತು ಬದಲಾವಣೆ ತರಲಿದೆ ಎಂದು ನಿರೀಕ್ಷಿಸಲಾಗಿದೆ.
ಮಮತಾ ಬ್ಯಾನರ್ಜಿ ಆಡಳಿತದ ಪಾತ್ರ: ಪ್ರಕರಣದಲ್ಲಿ ನಿರ್ಲಕ್ಷ್ಯತನ
ಈ ಪ್ರಕರಣದಲ್ಲಿ ಜನರ ಆಕ್ರೋಶ ಮಮತಾ ಬ್ಯಾನರ್ಜಿ ಸರ್ಕಾರದ ಪ್ರಕರಣವನ್ನು ನಿರ್ವಹಣೆ ಮಾಡಿದ ರೀತಿಯ ಮೇಲಿದೆ. ಎಫ್‌ಐಆರ್ ದಾಖಲಿಸಲು ವಿಳಂಬ, ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸುವ ಆಸ್ಪತ್ರೆ ಆಡಳಿತ ಮಂಡಳಿ ಪ್ರಯತ್ನ, ಆಸ್ಪತ್ರೆಯಲ್ಲಿ ನಡೆದ ದಾಂಧಲೆ ಮುಂತಾದವು ರಾಜ್ಯದ ಆಡಳಿತದ ಪ್ರಾಮುಖ್ಯತೆ ಮತ್ತು ಸಾಮರ್ಥ್ಯವನ್ನು ಪ್ರಶ್ನೆ ಮಾಡುವಂತೆ ಮಾಡಿವೆ.

ಹೈದರಾಬಾದ್ ಮೂಲದವರೊಬ್ಬರು ಒನ್ ಇಂಡಿಯಾ ಜೊತೆ ಮಾತನಾಡಿ, "ಮಮತಾ ಸರ್ಕಾರ ಕೋಲ್ಕತ್ತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಿರ್ವಹಣೆ ಮಾಡುವಲ್ಲ ವಿಫಲವಾಗಿದೆ. ತಕ್ಷಣ ಎಫ್‌ಐಆರ್ ದಾಖಲಿಸಿಲ್ಲ ಮತ್ತು ತನಿಖೆ ವೇಳೆ ಹಲವಾರು ನ್ಯೂನ್ಯತೆ ಕಾಣುತ್ತಿದೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ, ನೀವು ಪರಿಹಾರದ ಹಣದಲ್ಲಿ ಜೀವವನನ್ನು ಲೆಕ್ಕಚಾರ ಹಾಕಬಾರದು" ಎಂದು ಹೇಳಿದ್ದಾರೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಭಾವನೆ ತನಿಖೆ ವೇಳೆ ರಾಜಿ ಮಾಡಿಕೊಳ್ಳಲಾಗಿದೆ, ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಿ, ನ್ಯಾಯ ಸಿಗುವುದಿಲ್ಲ ಎಂಬ ಭಾವನೆ ಮೂಡುವಂತೆ ಮಾಡಿದೆ.
ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕರೆ
ಸ್ವಾತಂತ್ರ್ಯ ದಿನಾಚರಣೆಯಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೋಲ್ಕತ್ತಾ ಘಟನೆಯನ್ನು ಉಲ್ಲೇಖಿಸಿ ಘೋರ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ವೇಗವಾದ ಮತ್ತು ಕಠಿಣ ಕ್ರಮ ಅಗತ್ಯ ಎಂದು ಒತ್ತಿ ಹೇಳಿದರು. ಅವರ ಕರೆ ತನಿಖೆಯನ್ನು ವೇಗವಾಗಿಸಿದೆ ಮತ್ತು ನ್ಯಾಯ ಸಿಗುವ ಭರವಸೆ ಮೂಡಸಿದೆ. ದೇಶದಲ್ಲಿ ಉಂಟಾಗಿರುವ ಅಸಹನೆಗೆ ನ್ಯಾಯ ಸಿಗುವ ನಿರೀಕ್ಷೆ ಹುಟ್ಟಿದೆ.
ಪ್ರಧಾನಿ ಮೋದಿ ಟೀಕೆಗಳು ನೇರವಾಗಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಇದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ವ್ಯವಸ್ಥೆಯ ಮೇಲೆ ನಂಬಿಕೆ ವಾಪಸ್ ಆಗುವಂತೆ ಮಾಡುವಂತೆ ಮಾಡಿದ ಆಗ್ರಹದಂತೆ ಇತ್ತು. ಅವರ ಮಾತುಗಳು ರಾಜ್ಯದ ಆಡಳಿತ ವಿರುದ್ಧ ಜನರ ಭಾವನೆಗಳ ಪ್ರತಿಧ್ವನಿಯಂತೆ ಕಂಡಿತು. ಘಟನೆ ಕುರಿತು ರಾಜಕೀಯ ಮಾಡುವ ಬದಲು ನ್ಯಾಯ ದೊರಕಿಸುವಂತೆ ಆಗ್ರಹಿಸುವಂತಿತ್ತು.
ಹೊಣೆಗಾರಿಕೆಗಾಗಿ ಎಲ್ಲರೂ ಒಗ್ಗಟ್ಟಾಗಬೇಕು ಎಂಬ ದೇಶದ ಕರೆ
ದೇಶಾದ್ಯಂತ ಮಮತಾ ಬ್ಯಾನರ್ಜಿ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಧ್ವನಿ ಎತ್ತಲಾಗುತ್ತಿದೆ. ಕೋಲ್ಕತ್ತದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಪಶ್ಚಿಮ ಬಂಗಾಳ ಸರ್ಕಾರ ಗಡಿಯ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದಕ್ಕೆ ಸಂಕೇತದಂತಿದೆ. ಜನರು ರಾಜ್ಯ ಸರ್ಕಾರದಿಂದ ಉತ್ತರಗಳನ್ನು ಕೇಳುತ್ತಿದ್ದಾರೆ. ವೈದ್ಯಕೀಯ ಸಮೂಹ ಭದ್ರತೆ, ಹೊಣೆಗಾರಿಕೆ ಮತ್ತು ನ್ಯಾಯಕ್ಕಾಗಿ ಕರೆ ನೀಡಿದೆ. ನ್ಯಾಯಕ್ಕಾಗಿ ಕೇಳಿ ಬರುತ್ತಿರುವ ಬೇಡಿಕೆ ಕೇವಲ ಒಂದು ಪ್ರಕರಣಕ್ಕೆ ಸೀಮಿತವಾಗಿಲ್ಲ, ಸಮಗ್ರ ವ್ಯವಸ್ಥೆ ಕುರಿತಾಗಿದೆ. ಭಾರತದ ಜನರು ಬದಲಾವಣೆಗಾಗಿ ಕರೆ ನೀಡಿದ್ದಾರೆ, ಜವಾಬ್ದಾರಿ ಹೊತ್ತಿರುವವರು ಹೊಣೆ ಹೊರುವ ತನಕ ಜನರು ವಿರಮಿಸಲಾರರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications