ದುಬೈನಿಂದ ಬರುವ ಮಗಳಿಂದ 10 ಕೆಜಿ ಟೊಮೇಟೊ ತರಿಸಿದ ತಾಯಿ!
ಲಕ್ನೋ, ಜುಲೈ 20: ಭಾರತದಲ್ಲಿ ದಿನೇ ದಿನೇ ಟೊಮೇಟೊ ಬೆಲೆ ಏರುತ್ತಲೇ ಇದ್ದ ಹಿನ್ನೆಲೆಯಲ್ಲಿ ದುಬೈನಿಂದ ಬರುತ್ತಿದ್ದ ಮಗಳಿಂದ ತಾಯಿಯೊಬ್ಬರು 10 ಕೆಜಿ ಟೊಮೇಟೊವನ್ನು ದೇಶಕ್ಕೆ ತರಿಸಿರುವ ಸಂಗತಿ ಬೆಳಕಿಗೆ ಬಂದಿದೆ.
My sister is coming to India from Dubai for her children's summer holidays and she asked my mum if she wanted anything from Dubai and my mother said bring 10 kilos of tomatoes. 😑😑 And so now she has packed 10kg tomatoes in a suitcase and sent it.
— Revs :) (@Full_Meals) July 18, 2023
I mean.......
ಟ್ವಿಟರ್ ಬಳಕೆದಾರರೊಬ್ಬರು ತನ್ನ ತಂಗಿ ಭಾರತದಲ್ಲಿರುವ ತಮ್ಮ ತಾಯಿಗೆ ದುಬೈನಿಂದ ಆಕೆ ಈ ಅಸಾಮಾನ್ಯ ಉಡುಗೊರೆಯನ್ನು ಬಹಿರಂಗಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಟೊಮೇಟೊ ಬೆಲೆ ಗಗನಕ್ಕೇರಿದೆ. ದೇಶದ ಕೆಲವು ಭಾಗಗಳಲ್ಲಿ ಸರಾಸರಿ ಕೆಜಿಗೆ 250 ರೂಪಾಯಿವರೆಗೂ ಬೆಲೆಯ ಹೆಚ್ಚಳವಾಗಿದ್ದು, ಭಾರತೀಯ ಪಾಕಪದ್ಧತಿಯ ಪ್ರಮುಖ ತರಕಾರಿಯನ್ನು ಜನರ ಕೈಗೆಟುಕದ ಹಾಗೆ ಮಾಡಿದೆ. ಹೀಗಾಗಿ ಜನರು ತಮ್ಮ NRI ಸಂಬಂಧಿಕರಿಗೆ ಬರುವಾಗ ಉಡುಗೊರೆಗಳ ಬದಲಿಗೆ ಟೊಮೇಟೊಗಳನ್ನು ತರುವಂತೆ ಮನವಿ ಮಾಡುತ್ತಿದ್ದಾರೆ.

ಅಂತಹ ಒಂದು ಉದಾಹರಣೆ ಇಲ್ಲಿದೆ. ದುಬೈ ಮೂಲದ ಮಗಳು ಭಾರತದಲ್ಲಿನ ತನ್ನ ತಾಯಿಗೆ ಐಷಾರಾಮಿ ಶಾಪಿಂಗ್‌ಗೆ ಹೆಸರುವಾಸಿಯಾದ ಯುಎಇ ನಗರದಿಂದ ಏನು ಬೇಕು ಎಂದು ಕೇಳಿದ್ದಕ್ಕೆ ಆ ತಾಯಿ 10 ಕಿಲೋಗ್ರಾಂಗಳಷ್ಟು ಟೊಮೇಟೊಗಳನ್ನು ತರಲು ಹೇಳಿದ್ದಾರೆ.
'ರೆವ್ಸ್' ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಘಟನೆಯ ಬಗ್ಗೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಈ ಪೋಸ್ಟ್ ಮಾಡಿದ್ದಾರೆ. "ದುಬೈನಿಂದ ತನ್ನ ತಂಗಿ ತನ್ನ ಮಕ್ಕಳ ಬೇಸಿಗೆ ರಜೆಗಾಗಿ ದುಬೈನಿಂದ ಭಾರತಕ್ಕೆ ಬರಲಿದ್ದಳು. ಅವಳು ದುಬೈನಿಂದ ಏನಾದರೂ ಬೇಕೇ ಎಂದು ನನ್ನ ಅಮ್ಮನನ್ನು ಕೇಳಿದಳು. ಆಗ ನನ್ನ ತಾಯಿ 10 ಕಿಲೋ ಟೊಮೆಟೊಗಳನ್ನು ತರಲು ಹೇಳಿದರು. ಹಾಗಾಗಿ ಈಗ ಸೂಟ್‌ಕೇಸ್‌ನಲ್ಲಿ 10 ಕೆಜಿ ಟೊಮ್ಯಾಟೊ ಪ್ಯಾಕ್ ಮಾಡಿ ತಂದಿದ್ದಾಳೆ" ಎಂದು ಟ್ವೀಟ್ ಮಾಡಿದ್ದಾರೆ.
ನಂತರದ ಟ್ವೀಟ್‌ನಲ್ಲಿ ಆಕೆಯ ಸಹೋದರಿ ಟೊಮೇಟೊಗಳನ್ನು ಪರ್ಲ್‌ಪೆಟ್ ಶೇಖರಣಾ ಜಾಡಿಗಳಲ್ಲಿ ಪ್ಯಾಕ್ ಮಾಡಿ ಅದನ್ನು ಆಕೆಯ ಸೂಟ್‌ಕೇಸ್‌ಗೆ ಹಾಕಿ ದುಬೈನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದಳು ಎಂದು ಬರೆಯಲಾಗಿದೆ. ನಮ್ಮ ಕುಟುಂಬದವರು ಹೇರಳ ಪ್ರಮಾಣದ ಟೊಮೇಟೊಗಳನ್ನು ಬಳಸುತ್ತೇವೆ. ಆದ್ದರಿಂದ ನನ್ನ ತಾಯಿ ಉಪ್ಪಿನಕಾಯಿ, ಚಟ್ನಿ, ನನಗಾಗಿ ಸ್ವಲ್ಪ ತರುತ್ತಾರೆ ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.
ಏತನ್ಮಧ್ಯೆ, ಟೊಮೇಟೊಗಳ ಗಗನಕ್ಕೇರಿರುವ ಬೆಲೆಯು ಸಾಮಾನ್ಯರ ಜೇಬಿನ್ನು ಸುಡುವುದನ್ನು ಮುಂದುವರೆಸಿದೆ, ಪುಣೆಯ ರೈತರೊಬ್ಬರು ಕೇವಲ ಒಂದು ತಿಂಗಳ ಅವಧಿಯಲ್ಲಿ 3 ಕೋಟಿ ರೂಪಾಯಿಗೆ ಮಾರಾಟ ಮಾಡುವ ಮೂಲಕ ಮಿಲಿಯನೇರ್ ಆಗಿದ್ದಾರೆ. ಆದರೆ ಟೊಮೇಟೊ ಕೊಳ್ಳುವ ಜನರು ಮಾತ್ರ ಬೆಲೆ ಕೈಗೆಟುಕದೆ ಸಂಕಷ್ಟ ಅನುಭವಿಸುತ್ತಿದ್ದಾರೆ.












Click it and Unblock the Notifications