12 ಮಹಿಳೆಯರಿಗೆ ಡೈವೋರ್ಸ್ ನೀಡಿ 13ನೇ ಪತ್ನಿಯನ್ನು ಸಾಯಿಸಿದ
ಮೊಹಮ್ಮದ್ ಮುಸ್ತಕೀಮ್ ಎನ್ನುವ ಉತ್ತರಪ್ರದೇಶದ ವ್ಯಕ್ತಿಯೊಬ್ಬ ಇದುವರೆಗೆ 12ಮಹಿಳೆಯರನ್ನು ಮದುವೆಯಾಗಿ, ಅಷ್ಟೂ ಜನರಿಗೆ ವಿಚ್ಛೇದನ ನೀಡಿ, ತನ್ನ ಜೊತೆ 4ವರ್ಷ ಸಂಸಾರ ನಡೆಸುತ್ತಿದ್ದ 13ನೇ ಪತ್ನಿಯನ್ನು ಕೊಲೆಗೈದಿದ್ದಾನೆ. ಇಷ್ಟು ಸಾಲದಂತೆ, 14ನೇ
ರಾಯಬರೇಲಿ (ಉ.ಪ್ರ), ಅ 7: ಈ ಲೇಖನದ ಕಥಾನಾಯಕನ ಹೆಸರು ಮೊಹಮ್ಮದ್ ಮುಸ್ತಕೀಮ್, ಊರು ಉತ್ತರಪ್ರದೇಶದ ರಾಜಧಾನಿ ಲಕ್ನೋ ನಗರದಿಂದ ಆಗ್ನೇಯಕ್ಕೆ 85 ಕಿ.ಮೀ ದೂರದಲ್ಲಿರುವ ರಾಯಬರೇಲಿ ಜಿಲ್ಲೆಯ ಕಾಲೇ ಖಾನ್ ಗ್ರಾಮದವನು. ಈತನಿಗೆ ಮದುವೆಯ ಹುಚ್ಚೋ ಅಥವಾ ತೆವಲೋ..
ಈತ ಇದುವರೆಗೆ ಹನ್ನೆರಡು ಮಹಿಳೆಯರನ್ನು ಮದುವೆಯಾಗಿ, ಅಷ್ಟೂ ಜನರಿಗೆ ವಿಚ್ಛೇದನ ನೀಡಿ, ತನ್ನ ಜೊತೆ ನಾಲ್ಕು ವರ್ಷ ಸಂಸಾರ ನಡೆಸುತ್ತಿದ್ದ ಹದಿಮೂರನೇ ಪತ್ನಿಯನ್ನು ಕೊಲೆಗೈದಿದ್ದಾನೆ. ಇಷ್ಟು ಸಾಲದಂತೆ, ಹದಿನಾಲ್ಕನೇ ಮದುವೆಯಾಗಲು ಮಹಿಳೆಯನ್ನೂ ಆಯ್ಕೆ ಮಾಡಿಕೊಂಡಿದ್ದ.

ಗಂಡನಿಂದ ಅಮಾನುಷವಾಗಿ ಹತ್ಯೆಯಾದ ಮಹಿಳೆ ಸಮೀಪದ ಅಮೇಥಿ ನಗರದವಳು, ಈಕೆಯ ಜೊತೆಗಿನ ನಾಲ್ಕು ವರ್ಷದ ಸಂಸಾದರಲ್ಲಿ ಇವರಿಗೆ ಮೂರು ತಿಂಗಳ ಮಗುಬೇರೆಯಿದೆ. ತನ್ನ ಹದಿಮೂರನೇ ಪತ್ನಿಯನ್ನು ಹತ್ಯೆಗೈದ ಮುಸ್ತಕೀಮ್ ಈಗ ಕಂಬಿ ಎಣಿಸುತ್ತಿದ್ದಾನೆ.
ನಿಮ್ಮ ಮಗಳು ಕಾಲುಕರೆದು ಜಗಳಕ್ಕೆ ಬರುತ್ತಲೇ ಇರುತ್ತಾಳೆ, ಇವಳ ಜೊತೆ ನನಗೆ ಸಂಸಾರ ನಡೆಸಲು ಸಾಧ್ಯವಿಲ್ಲ, ಅವಳಿಗೆ ಡೈವೋರ್ಸ್ ನೀಡುತ್ತಿದ್ದೇನೆಂದು ಕೆಲವೇ ದಿನಗಳ ಹಿಂದೆ ಮಾವನಿಗೆ ಹೇಳಿ ಬಂದಿದ್ದ ಅಳಿಯ, ವಿಚ್ಚೇದನ ನೀಡುವ ಬದಲು ಪತ್ನಿಯನ್ನು ಇಹಲೋಕದಿಂದಲೇ ಕಳುಹಿಸಿಬಿಟ್ಟಿದ್ದಾನೆ.
ವಾರದಿಂದ ಈತನ ಪತ್ನಿ ಊರಿನಲ್ಲಿ ಕಾಣಿಸದೇ ಇದ್ದಾಗ, ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮುಸ್ತಕೀನ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಮಹಿಳೆಯ ಶವ ಪಕ್ಕದ ಗ್ರಾಮದ ಮೈದಾನವೊಂದರಲ್ಲಿ ಗಾಯದ ಗುರುತಿನೊಂದಿಗೆ ಸಿಕ್ಕಿದೆ.
ನಾಲ್ಕು ವರ್ಷಗಳ ಹಿಂದೆ ಪರಿಪರಿಯಾಗಿ ನನ್ನನ್ನು ಬೇಡಿಕೊಂಡು, ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಮಾತುಕೊಟ್ಟ ಮೇಲೆ ಮಗಳನ್ನು ಮದುವೆ ಮಾಡಿಕೊಟ್ಟಿದೆ.
ಈಗ ಡೈವೋರ್ಸ್ ಕೊಟ್ಟಿದ್ದರೂ ಪರವಾಗಿರಲಿಲ್ಲ, ಮಗಳನ್ನು ನಾನು ನೋಡಿಕೊಳ್ಳುತ್ತಿದ್ದೆ, ಪಾಪಿ ಸಾಯಿಸಿಯೇ ಬಿಟ್ಟಿದ್ದಾನೆಂದು ಮಹಿಳೆಯ ತಂದೆ, ಮೂರು ತಿಂಗಳ ಹಸುಳೆಯನ್ನು ಕೈಯಲ್ಲಿ ಹಿಡಿದುಕೊಂಡು ರೋದನೆ ಪಡುತ್ತಿದ್ದಾರೆ.












Click it and Unblock the Notifications