ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎ ಫಾರ್ ಅರ್ಜುನ್; ಯುಪಿ ವಕೀಲರಿಂದ ಹಿಂದೂ ಅಲ್ಫಬೆಟ್‌!

|
Google Oneindia Kannada News

ಉಕ್ನೋ, ಅಕ್ಟೋಬರ್‌ 31: ಉತ್ತರ ಪ್ರದೇಶದ ಸೀತಾಪುರದ ವಕೀಲರೊಬ್ಬರು ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಹೊಸ ವಿಧಾನವನ್ನು ಹಿಂದೂ ಪುರಾಣ ಮತ್ತು ಭಾರತೀಯ ಇತಿಹಾಸಕ್ಕೆ ಸಂಬಂಧಿಸಿದ ಪದಗಳೊಂದಿಗೆ ಕಂಡುಹಿಡಿದ್ದಾರೆ.

ಈ ವಕೀಲರು ಇಂಗ್ಲಿಷ್ ವರ್ಣಮಾಲೆಗಳು ಮತ್ತು ಹಿಂದೂ ಪುರಾಣ ಮತ್ತು ಭಾರತೀಯ ಇತಿಹಾಸಕ್ಕೆ ಸಂಬಂಧಿಸಿದ ಪದಗಳೊಂದಿಗೆ ಚಾರ್ಟ್ ಅನ್ನು ಸಿದ್ಧಪಡಿಸಿದ್ದಾರೆ. ಇದನ್ನು ಪ್ರಕಟಿಸಲು ಪ್ರಕಾಶಕರು ಕೂಡ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಮೋದಿ, ಯೋಗಿಯನ್ನು ಮದುವೆಗೆ ಆಹ್ವಾನಿಸಿದ 2.3 ಅಡಿ ಎತ್ತರದ ವ್ಯಕ್ತಿಮೋದಿ, ಯೋಗಿಯನ್ನು ಮದುವೆಗೆ ಆಹ್ವಾನಿಸಿದ 2.3 ಅಡಿ ಎತ್ತರದ ವ್ಯಕ್ತಿ

ವರದಿಗಳ ಪ್ರಕಾರ, ಮಕ್ಕಳಿಗೆ ಇದು ವಿಭಿನ್ನ ಅನುಭವವಾಗಲಿದೆ. ಬಾಲ್ಯದಿಂದಲೂ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕೆಲವು ಶಿಕ್ಷಕರು ತಿಳಿಸಿದ್ದಾರೆ. ಇಂಗ್ಲಿಷ್ ವರ್ಣಮಾಲೆಯ ಪಿಡಿಎಫ್‌ ಫೈಲ್ ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿದೆ.

A for Arjun, not A for Apple Hindu alphabet from UP lawyer

ಈ ಶೈಲಿಯು ಇಂಗ್ಲಿಷ್ ವರ್ಣಮಾಲೆಯ ಶಿಕ್ಷಕರ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ವ್ಯಾಪಕವಾಗಿ ಹರಡಿದೆ. ಇದರಲ್ಲಿ ಎ ಯಿಂದ ಝಡ್‌ ವರೆಗಿನ ಪದಗಳನ್ನು ಭಾರತೀಯ ಪೌರಾಣಿಕ ಸಂಸ್ಕೃತಿ ಮತ್ತು ಇತಿಹಾಸದಿಂದ ಅರ್ಥ ತೆಗೆದುಕೊಳ್ಳಲಾಗಿದೆ. ಇದು ಮಕ್ಕಳಿಗೆ ವಿಭಿನ್ನ ಅನುಭವ ನೀಡುತ್ತದೆ ಮತ್ತು ಚಿಕ್ಕ ವಯಸ್ಸಿನಲ್ಲೇ ಭಾರತೀಯ ಸಂಸ್ಕೃತಿಯ ಪರಿಚಯವನ್ನು ನೀಡುತ್ತದೆ ಎಂದು ಶಿಕ್ಷಕರು ಸಹ ನಂಬುತ್ತಾರೆ.

ಈ ರೀತಿಯ ಇಂಗ್ಲಿಷ್ ವರ್ಣಮಾಲೆಯ ಪಿಡಿಎಫ್ ಫೈಲ್ ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿದೆ. ಇದರಲ್ಲಿ ಪದಗಳಿಗೆ ಸಂಬಂಧಿಸಿದ ಫೋಟೋಗಳೂ ಇವೆ. ಸಂಬಂಧಿತ ಪದದೊಂದಿಗೆ ವಿವರಣೆಯನ್ನು ನೀಡಲಾಗಿದೆ. ಈ ರೀತಿಯ ಇಂಗ್ಲಿಷ್ ವರ್ಣಮಾಲೆಯ ಪಿಡಿಎಫ್ ಫೈಲ್ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಯನ್ನು ಪಡೆಯುತ್ತಿದೆ.

ಇಂಗ್ಲಿಷ್ ವರ್ಣಮಾಲೆಗೆ ಸಂಬಂಧಿಸಿದ ಈ ಶಬ್ದಕೋಶವನ್ನು ಸೀತಾಪುರದ ವಕೀಲ ಅಮೀನಾಬಾದ್ ಇಂಟರ್ ಕಾಲೇಜ್ ಪ್ರಿನ್ಸಿಪಾಲ್ ಎಸ್.ಎಲ್.ಮಿಶ್ರಾ ಅವರು ಸಿದ್ಧಪಡಿಸಿದ್ದಾರೆ. ಏತನ್ಮಧ್ಯೆ ಈ ಪ್ರಕಾಶಕರು ಕೂಡ ಈ ಹೊಸ ಪರಿಕಲ್ಪನೆಯನ್ನು ಇಷ್ಟಪಡುತ್ತಿದ್ದಾರೆ.

A for Arjun, not A for Apple Hindu alphabet from UP lawyer

ಮೀರತ್‌ನ ಪ್ರಕಾಶಕರು ಈ ರೀತಿಯ ಇಂಗ್ಲಿಷ್ ವರ್ಣಮಾಲೆಯನ್ನು ಪ್ರಕಟಿಸಲು ನಿರ್ಧರಿಸಿದ್ದಾರೆ. ಪದಗಳ ವಿವರವಾದ ವಿವರಣೆಯನ್ನು ನೀಡುವುದರಿಂದ ಮಕ್ಕಳಿಗೆ ಸ್ವಲ್ಪ ಹೆಚ್ಚು ಮಾಹಿತಿ ಸಿಗುತ್ತದೆ. ಈ ನೀತಿಯನ್ನು ರೂಪಿಸಿದ ವಕೀಲರೇ ಹಿಂದಿ ವರ್ಣಮಾಲೆಯ ಶಬ್ದಕೋಶವನ್ನೂ ಸಿದ್ಧಪಡಿಸುತ್ತಿದ್ದಾರೆ ಎಂದು ಎಸ್.ಎಲ್.ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

English summary
A lawyer from Sitapur in Uttar Pradesh has come up with a new way of teaching English to children with words related to Hindu mythology and Indian history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X