ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಾಧಿಗೆ ಎರಡು ಜೀವಾವಧಿ ಶಿಕ್ಷೆ ನೀಡುವಂತಿಲ್ಲ : ಸುಪ್ರೀಂ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 19 : ಅಪರಾಧಿಗೆ ಎರಡು ಜೀವಾವಧಿ ಶಿಕ್ಷೆಯನ್ನು ನೀಡಬಾರದು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರ ನೇತೃತ್ವದ ವಿಭಾಗೀಯ ಪೀಠ ಮಹತ್ವದ ತೀರ್ಪನ್ನು ಮಂಗಳವಾರ ನೀಡಿದೆ.

ಬದಲಾಗಿ, ಆರೋಪಿ ಹೀನಾಯ ಅಪರಾಧವೆಸಗಿದಾಗ ಆತನಿಗೆ ನಿಗದಿತ ಅವಧಿಯ ಶಿಕ್ಷೆ ನೀಡಿ ನಂತರ ಜೀವಾವಧಿ ಶಿಕ್ಷೆಯನ್ನು ನೀಡಬಹುದು. ಆದರೆ, ಎರಡು ಜೀವಾವಧಿ ಶಿಕ್ಷೆ ನೀಡುವಂತಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಪರಾಧಿಗೆ ವಿಧಿಸಿದ ಎರಡು ಜೀವಾವಧಿ ಶಿಕ್ಷೆಗಳನ್ನು ಒಟ್ಟಾಗಿಯೇ ಜಾರಿ ಮಾಡಬೇಕಾ ಅಥವಾ ಒಂದಾದ ನಂತರ ಮತ್ತೊಂದು ಜಾರಿಯಾಗುವಂತೆ ಮಾಡಬೇಕಾ ಎಂದು ಪ್ರಶ್ನಿಸಿ ಹೂಡಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿಯೇ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಕಾದಿರಿಸಿತ್ತು.

A convict cannot be handed two life terms, says Supreme Court

ತಮಿಳುನಾಡಿನಲ್ಲಿ ತನ್ನ ಹೆಂಡತಿ ಮತ್ತಿತರ ಏಳು ಸಂಬಂಧಿಗಳನ್ನು ಆಕೆಯ ಗಂಡ ಮುತ್ತುರಾಮಲಿಂಗಂ ಮತ್ತು 16 ಜನರು ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ, ಹತ್ಯೆಗೆ ಷಡ್ಯಂತ್ರ ರಚಿಸಿದ್ದಕ್ಕಾಗಿ ಅವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಎಂಟು ಜೀವಾವಧಿ ಶಿಕ್ಷೆ ನೀಡಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಒಬ್ಬ ವ್ಯಕ್ತಿ 8 ಜೀವಾವಧಿ ಶಿಕ್ಷೆಗಳನ್ನು ಅನುಭವಿಸಲು ಹೇಗೆ ಸಾಧ್ಯ? ಅಷ್ಟೊಂದು ಜೀವವಿರುತ್ತದೆಯೆ ಎಂದು ಆರೋಪಿಗಳ ಪರ ವಕೀಲರು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದರು.

English summary
The Supreme Court of India on Tuesday ruled that a convict cannot be handed two life sentences. A Constitution Bench headed by Chief Justice TS Thakur held that a convict cannot undergo two life sentences. The Bench also held that a convict can be given a term sentence and then followed up with a life sentence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X