8ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಭರ್ಜರಿ ಸುದ್ದಿ ಸಾಧ್ಯತೆ... 8th Pay Commission
8ನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರಿ ನೌಕರರು ಸಿಹಿಸುದ್ದಿ ಸಿಗಲಿದೆ ಎಂದು ಕಾಯುತ್ತಿದ್ದಾರೆ. ಅದರಲ್ಲೂ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈ ವಿಚಾರದಲ್ಲಿ ತಮಗೆ ಸರ್ಕಾರದ ನಿರ್ಧಾರ ದೊಡ್ಡ ರಿಲ್ಯಾಕ್ಸ್ ನೀಡಬಹುದು ಎಂದು ಚಿಂತಿಸುತ್ತಿದ್ದರು. ಇಂತಹ ಸಮಯದಲ್ಲಿ 2026ರ ಜನವರಿ 1 ರಿಂದ ಅನ್ವಯ ಆಗುವಂತೆ 8ನೇ ಕೇಂದ್ರ ವೇತನ ಆಯೋಗ ಜಾರಿಗೆ ಬಂದಿತ್ತು, ಆದರೆ ಹೊಸ ವೇತನ ರಚನೆಗೆ ಅಧಿಕೃತ ಅನುಮೋದನೆ ಮತ್ತು ಅಧಿಸೂಚನೆ ಹೊರಬರುವ ತನಕ ಸರ್ಕಾರಿ ನೌಕರರಿಗೆ ಹೊಸ ಸೌಲಭ್ಯ ಸಿಗುವುದಿಲ್ಲ. ಹೀಗಿದ್ದಾಗಲೇ 2026 ಮಾರ್ಚ್ ತಿಂಗಳು ಅಂದ್ರೆ ಮುಂದಿನ ತಿಂಗಳೇ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ಸಿಗುವ ಮುನ್ಸೂಚನೆ ಸಿಕ್ಕಿದೆ.
ಅಂದಹಾಗೆ ಹೊಸ ವೇತನ ರಚನೆಗೆ ಅಧಿಕೃತ ಅನುಮೋದನೆ ಮತ್ತು ಅಧಿಸೂಚನೆ ಹೊರಬರುವ ತನಕ ಕೂಡ ಸುಮಾರು 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು & ಪಿಂಚಣಿದಾರರು 7ನೇ ವೇತನ ಆಯೋಗದ ವ್ಯವಸ್ಥೆಯಲ್ಲೇ ಮುಂದುವರಿಯಲಿದ್ದಾರೆ. ಇಂತಹ ಸಮಯದಲ್ಲೇ ಕಾರ್ಮಿಕ & ಉದ್ಯೋಗ ಸಚಿವಾಲಯವು, ಡಿಸೆಂಬರ್‌ಗೆ ಆಲ್ ಇಂಡಿಯಾ ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ ಫಾರ್ ಇಂಡಸ್ಟ್ರಿಯಲ್ ವರ್ಕರ್ಸ್ ಅನ್ನು 148.2ರಲ್ಲೇ ಸ್ಥಿರವಾಗಿರಿಸಿದೆ. ಹೀಗಿದ್ದಾಗ ಇದೇ ಸೂಚ್ಯಂಕವನ್ನು ಬಳಸಿ ಡಿಎ ಅನ್ನ ನಿರ್ಧಾರ ಮಾಡುವ ಕಾರಣ, ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಡಿಎ (Dearness Allowance) ಹೆಚ್ಚಳ ಮಾಡುವ ಸಾಧ್ಯತೆ ಇದೀಗ ದಟ್ಟವಾಗಿದೆ.

ಹೋಳಿ ಹಬ್ಬಕ್ಕೆ ಭರ್ಜರಿ ಉಡುಗೊರೆ?
ಕೇಂದ್ರ ಸರ್ಕಾರಿ ನೌಕರರು & ಪಿಂಚಣಿದಾರರ ತುಟ್ಟಿಭತ್ಯೆ ಅಥವಾ ಡಿಎ ಮೊತ್ತವನ್ನು ಶೇಕಡಾ 5 ರಷ್ಟು ಏರಿಕೆ ಮಾಡುವ ಸಾಧ್ಯತೆ ಇದ್ದು, ಮಾರ್ಚ್ ವೇಳೆಗೆ ಡಿಎ ಮೊತ್ತ ಇಷ್ಟು ಏರಿಕೆ ಕಂಡರೆ ಅದು ಆಗ ನೌಕರರಿಗೆ ದೊಡ್ಡ ಲಾಭ ತರಲಿದೆ. ಮತ್ತೊಂದೆಡೆ ಆಲ್ ಇಂಡಿಯಾ ಎನ್‌ಪಿಎಸ್ ನೌಕರರ ಫೆಡರೇಶನ್ ಅಧ್ಯಕ್ಷ ಮಂಜೀತ್ ಸಿಂಗ್ ಪಟೇಲ್ ಅವರು ಹೇಳುವ ಪ್ರಕಾರ, ಬಣ್ಣದ ಹಬ್ಬ ಹೋಳಿಯ ಸಂದರ್ಭಕ್ಕೆ ಈ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಮಾರ್ಚ್ ಆರಂಭದಲ್ಲೇ ಡಿಎ ಹೆಚ್ಚಳವನ್ನು ಕೇಂದ್ರ ಸರ್ಕಾರ ಪ್ರಕಟಿಸಬಹುದಾಗಿದ್ದು, ಕೋಟಿ ಮೀರಿದ ಸರ್ಕಾರಿ ನೌಕರರು & ಅವರ ಜೊತೆಗೇ ಪಿಂಚಣಿದಾರರಿಗು ಕೂಡ ದೊಡ್ಡ ಬೆಂಬಲ ಸಿಕ್ಕಂತೆ ಆಗಲಿದೆ.
ಸರ್ಕಾರಿ ನೌಕರರ ಮಹತ್ವದ ಸಭೆ
ಇನ್ನು 2026 ಏಪ್ರಿಲ್ ತಿಂಗಳಲ್ಲೇ ಸರ್ಕಾರಿ ನೌಕರರಿಗೆ ಸಂಬಳದ ಜೊತೆಗೆ ಹಾಗೂ ಪಿಂಚಣಿದಾರರಿಗೆ ಪಿಂಚಣಿ ಜೊತೆಗೆ ಡಿಎ ಹೆಚ್ಚಳದ ಲಾಭ ಸಿಗುವ ನಿರೀಕ್ಷೆ ಇದೆ. ಮತ್ತೊಂದು ಕಡೆ 2026 ರಿಂದ ಬಾಕಿ ಇರುವ ಮೊತ್ತವೂ ಸೇರಿ ಬರುವ ನಿರೀಕ್ಷೆ ಇದ್ದು, ಡಿಎ ಪರಿಷ್ಕರಣೆಯು ದ್ವೈವಾರ್ಷಿಕ ಭಾಗವಾಗಿ ಇದೇ ಜನವರಿ ತಿಂಗಳಲ್ಲಿ ನಡೆಯಬೇಕಾಗಿತ್ತು. ಜುಲೈನಲ್ಲಿ ಈ ಭತ್ಯೆಯನ್ನು ಶೇಕಡಾ 54 ರಿಂದ 58ಕ್ಕೆ ಏರಿಕೆ ಮಾಡಲಾಗಿತ್ತು. ಈ ಸಮಯದಲ್ಲೇ, ಸರ್ಕಾರಿ ನೌಕರರು ಮಹತ್ವದ ಸಭೆಯನ್ನ ಇದೀಗ ಆಯೋಜನೆ ಮಾಡಿರುವುದು ಕೂಡ ಗಮನ ಸೆಳೆಯುತ್ತಿದೆ.
ಫೆಬ್ರವರಿ 25 ಬುಧವಾರ ನೌಕರರ ಸಂಘಗಳ ಸಭೆ ನಡೆಯಲಿದೆ. ಅಂದಹಾಗೆ 8ನೇ ವೇತನ ಆಯೋಗದ ಕಚೇರಿಯನ್ನ ನವದೆಹಲಿಯಲ್ಲಿ ಸ್ಥಾಪಿಸಲಾಗಿದೆ, ಹೊಸ ವೇತನ ಆಯೋಗಕ್ಕೆ ಸಂಬಂಧಿಸಿದ ಪ್ರಸ್ತಾವನೆ ಚರ್ಚಿಸಲು ಕೇಂದ್ರ ಸರ್ಕಾರದ ಪ್ರಮುಖ ನೌಕರರು & ನಿವೃತ್ತ ನೌಕರರ ಸಂಘಗಳ ಸದಸ್ಯರು ಸಭೆಯನ್ನು ನಡೆಸಲಿದ್ದಾರೆ. ರೈಲ್ವೆ, ರಕ್ಷಣಾ ಇಲಾಖೆ, ಅಂಚೆ, ಆದಾಯ ತೆರಿಗೆ ಸೇರಿ ವಿವಿಧ ಇಲಾಖೆ ಪ್ರತಿನಿಧಿಗಳು ವೇತನ ಪರಿಷ್ಕರಣೆ, ಫಿಟ್‌ಮೆಂಟ್ ಫ್ಯಾಕ್ಟರ್, ಕನಿಷ್ಠ ವೇತನ, ಭತ್ಯೆಗಳು ಹಾಗೂ ಸೇವಾ ನಿಯಮ ಬಗ್ಗೆ ಚರ್ಚೆ ನಡೆಸಲಿದ್ದಾರೆ.












Click it and Unblock the Notifications