8th Pay Commission: ನೌಕರರ ಮೂಲ ವೇತನ ಎಷ್ಟು ಹೆಚ್ಚಾಗಲಿದೆ?, ಶೇ.13ರಷ್ಟು 'ರಿಯಲ್ ಪೇ ಹೈಕ್'?
ನವದೆಹಲಿ: 8ನೇ ವೇತನ ಆಯೋಗ (CPC) ಜಾರಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರ ಪ್ರತಿನಿಧಿ ಸಂಘಟನೆಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಅದರಲ್ಲಿ ಫಿಟ್‌ಮೆಂಟ್ ಅಂಶ ಹಾಗೂ ನೌಕರರ ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳ ವರದಿ ಸಿದ್ಧಪಡಿಸುವ ಚರ್ಚೆಗಳು ಆಗಿವೆ. ಇದರ ಬೆನ್ನಲ್ಲೆ ವೇತನ ಎಷ್ಟು ಹೆಚ್ಚಾಗಬಹುದು. ಕೆಲವು ಅಂಶಗಳು ಕಾಗದದ ಮೇಲೆ ನಮೂದಿಸಿದರೂ ಸಹಿತ ನಿಜವಾಗಿಯು ನೌಕರರಿಗೆ ಲಾಭವಾಗಲಿದಿಯೇ ಎಂಬುದರ ಹೊಸ ಚರ್ಚೆ ಶುರುವಾಗಿದೆ. 8ನೇ ವೇತನ ಆಯೋಗ ನೌಕರರಿಗೆ ಏನೆಲ್ಲ ನೀಡಬಹುದೆಂಬ ವಿವರವೂ ಇಲ್ಲಿದೆ.
ಹಣದುಬ್ಬರ ಪರಿಗಣಿಸಿ ವೇತನ ಹೆಚ್ಚಳ ಮಾಡಿದರೆ ಅದು ನೈಜತೆಗೆ ಹತ್ತಿರವಾಗುತ್ತದೆ. ಅದು ನೌಕರರಿಗೆ ಸಿಗುವ ವಾಸ್ತವಿಕ ಲಾಭ ಎನ್ನಬಹುದು. ವೇತನ ಹೆಚ್ಚಾದರೆ ಉದ್ಯೋಗಿಗಳ ಖರೀದಿ ಸಾಮರ್ಥ್ಯ ಸುಧಾರಿಸುತ್ತದೆ. ಹಿಂದಿನ 7ನೇ ವೇತನ ಆಯೋಗದ ಅವಧಿಯಲ್ಲಿ, ಹಣದುಬ್ಬರದ ಪರಿಣಾಮಗಳನ್ನು ಪರಿಗಣಿಸಿದ ನಂತರ ಸರಾಸರಿ ಸುಮಾರು ಶೇ.14ರಷ್ಟು ನಿಜವಾದ ವೇತನ ಹೆಚ್ಚಳವಾಗಿತ್ತೆಂದು ವರದಿಗಳು ಹೇಳುತ್ತವೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಣದುಬ್ಬರದ ಹೊರೆ ಕಡಿಮೆ ಮಾಡಲು ಕ್ರಮವಾಗಿ ತುಟ್ಟಿ ಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ನೀಡಲಾಗುತ್ತದೆ. ಇವು ಪ್ರಮುಖವಾದರೂ ಸಹಿತ ಪ್ರತಿ ವೇತನ ಆಯೋಗದ ಸಮಯದಲ್ಲೇ ಸಿಗುತ್ತವೆ. ವರ್ಷಕ್ಕೆ ಎರಡು ಬಾರಿ ಹೆಚ್ಚಿಸುವ ಭತ್ಯೆಗಳು ಇವಾಗಿವೆ. ಈವರೆಗೆ ನೌಕರರ ವೇತನ ಹೆಚ್ಚಳ ಒಂದೇ ರೀತಿಯಲ್ಲಿ ಹೆಚ್ಚಾಗಿಲ್ಲ.
ಹಿಂದಿನ ಸಿಪಿಸಿ ಅಡಿ ವೇತನ ಹೆಚ್ಚಳದ ಅಂಕಿಸಂಖ್ಯೆ
2ನೇ ವೇತನ ಆಯೋಗದಲ್ಲಿ ಇದು ಶೇ. 14.2ರಷ್ಟು ಆಗಿದ್ದು, 3ನೇ ಆಯೋಗದಲ್ಲಿ 20.6ರಷ್ಟು, 4ನೇಯಲ್ಲಿ 27.6ರಷ್ಟು ಮತ್ತು ಐದನೇ ವೇತನ ಆಯೋಗದಲ್ಲಿ ಸುಮಾರು 31ರಷ್ಟು ಹೆಚ್ಚಾಗಿತ್ತು. 6ನೇ ವೇತನ ಆಯೋಗದಲ್ಲಿ ಗರಿಷ್ಠ ಅಂದರೆ ಶೇಕಡಾ 54ರಷ್ಟು ವೇತನ ಏರಿಕೆ ಆಗಿತ್ತು. ಹಿಂದಿನ 7ನೇ ವೇತನ ಆಯೋಗದಲ್ಲಿ ಇದು ಮತ್ತೆ ಸುಮಾರು ಶೇ.14ಕ್ಕೆ ಇಳಿಯಿತು. ಈ ಹಿನ್ನೆಲೆಯಲ್ಲೇ 8ನೇ ವೇತನ ಆಯೋಗದ ಮೇಲೆ ನೌಕರರ ಅಪಾರ ನಿರೀಕ್ಷೆಗಳು ಇವೆ.
ನೌಕರರಿಗೆ 8ನೇ ವೇತನ ಆಯೋಗವು ಏನು ನೀಡಬಹುದು?
ಜಾರಿ ಆಗಲಿರುವ 8ನೇ ವೇತನ ಆಯೋಗವು ಮುಂದಿನ ಒಂದರಿಂದ ಒಂದೂರವರೆ ವರ್ಷದಲ್ಲಿ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಸಲ್ಲಿಸುವ ಸಾಧ್ಯತೆ ಇದೆ. ಈ ಹಂತದಲ್ಲಿ, ಯಾವುದೇ ಅಂದಾಜು ತಾತ್ಕಾಲಿಕವಾಗಿ ಉಳಿದಿದೆ. ಆದರೂ, ಕೆಲವು ಆರಂಭಿಕ ಮುನ್ಸೂಚನೆಗಳು ಮುಂದೆ ಏನಾಗಬಹುದು ಎಂಬುದನ್ನು ಶಿಫಾರಸಿನಲ್ಲಿ ತಿಳಿಸುತ್ತದೆ.
ಕೋಟಕ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್‌ನ ವಿಶ್ಲೇಷಕರ ಪ್ರಕಾರ, 8ನೇ ವೇತನ ಆಯೋಗದಡಿ ನಿಜವಾದ ವೇತನ ಹೆಚ್ಚಳ ಶೇಕಡಾ 13ರಷ್ಟಕ್ಕೆ ಸಮೀಪವಿರುಬಹುದು, ಇದು 7ನೇ ವೇತನ ಆಯೋಗದಡಿ ನೌಕರರ ಪಡೆದ ಲಾಭಕ್ಕೆ ಅನುಗುಣವಾಗಿರುತ್ತದೆ. ನೋಡಲು ಈ ಹೆಚ್ಚಳವು ದೊಡ್ಡದೆಂಬಂತೆ ಕಾಣಬಹುದು. ಅಂದರೆ ಸುಮಾರು ಶೇಕಡಾ 83 ಎಂದು ಅಂದಾಜಿಸಲಾಗಿದೆ. ಇಲ್ಲಿ ಹಣದುಬ್ಬರವನ್ನು ಪರಿಗಣಿಸಿ ಎಷ್ಟು ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕಿದೆ. ಫಿಟ್‌ಮೆಂಟ್ ಅಂಶವು ಸುಮಾರು 1.8 ಪರಿಗಣಿಸಿದರೆ, ನೌಕರರ ಕನಿಷ್ಠ ಮೂಲ ವೇತನ 18,000 ರೂ.ನಿಂದ ಸುಮಾರು 30,000 ರೂ.ಗಳಿಗೆ ಏರಿಕೆ ಆಗಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
ಸರ್ಕಾರಿ ಹಣಕಾಸಿನ ಮೇಲಿನ ಪರಿಣಾಮ
ಅಂದಾಜಿನ ಪ್ರಕಾರ, ಹಣದುಬ್ಬರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಿಲ್ಲಿ ಕೇಂದ್ರ ಸರ್ಕಾರದ ಭೊಕ್ಕಸಕ್ಕೆ ಹೆಚ್ಚುವರಿಯಾಗಿ 1.8 ಟ್ರಿಲಿಯನ್ ರೂಪಾಯಿ ವೆಚ್ಚವಾಗುತ್ತದೆ. ಈ ವೆಚ್ಚಗಳು ಜಿಎಸ್‌ಡಿಪಿಯ ಕನಿಷ್ಠ 0.5ರಷ್ಟು ಹೆಚ್ಚಾಗುತ್ತದೆ. ಇದರಿಂದ ಆಯಾ ರಾಜ್ಯಗಳು ಇದನ್ನು ಅನುಸರಿಸುವಲ್ಲಿ ವಿಳಂಬ ಮಾಡಬಹುದು ಎಂದು ಆಂಬಿಟ್ ವರದಿ ಮಾಡಿದೆ.
ಈ 8ನೇ ವೇತನ ಆಯೋಗದ ಅಂತಿಮ ಶಿಫಾರಸುಗಳು ಮುಖ್ಯ ವೇತನ ಹೆಚ್ಚಳಕ್ಕೆ ಮಾತ್ರವಲ್ಲದೇ ಕೆಲವು ನೈಜ ಆರ್ಥಿಕ ಪರಿಹಾರವನ್ನು ಒದಗಿಸುತ್ತವೆ. ಹಾಲಿ ಚರ್ಚೆ ಆಗುತ್ತಿರುವ ಅಂಕಿ ಸಂಖ್ಯೆಗಳು, ತಜ್ಞರ ಮುನ್ಸೂಚನೆಗಳು ನಿಜವಾದಲ್ಲಿ ವೇತನ ಪರಿಷ್ಕರಣೆಯ ನಾಟಕೀಯ ಏರಿಕೆಗಳಿಗೆ ಸ್ಥಿರತೆ ನೀಡಲಿವೆ. ಅಂದರೆ ವಾಸ್ತವಕ್ಕಿಂತ ಹೆಚ್ಚಿನ ಪರಿಷ್ಕರಣೆ ಚರ್ಚೆಗಳಿಗೆ ಬ್ರೇಕ್ ಬೀಳಲಿದೆ. ಆಗ ವೇತನ ಹೆಚ್ಚಳ ಕುರಿತು ಅಧಿಕೃತ ಮಾಹಿತಿ ಲಭ್ಯಾಗುತ್ತದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications