Get Updates
Get notified of breaking news, exclusive insights, and must-see stories!

8th Pay Commission: ಜನವರಿ 25ಕ್ಕೆ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರ ಪ್ರತಿನಿಧಿಗಳ ಸಭೆ, ಬಿಗ್ ಅಪ್ಡೇಟ್

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಕಾತರದಿಂದ ಕಾಯುತ್ತಿರುವ 8ನೇ ವೇತನ ಆಯೋಗ (8th Pay Commission) ಜಾರಿ ಆಗಬೇಕಿದೆ. ಇದೀಗ ನೌಕರರಿಗೆ ಸಮಾಧಾನಕರ ಖುಷಿ ಸುದ್ದಿ ಹೊರ ಬಿದ್ದಿದೆ. ವೇತನ ಪರಿಷ್ಕರಣೆ, ಭತ್ಯೆ ಕುರಿತಂತೆ ನೌಕರರ ಬೇಡಿಕೆಗಳ ಸಾಮಾನ್ಯ ಕರಡು ರೂಪಿಸಲು ಕೇಂದ್ರದೊಂದಿಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಘಟನೆಗಳು ಫೆಬ್ರವರಿ 25 ರಂದು ದೆಹಲಿಯಲ್ಲಿ ಸಭೆ ನಡೆಸಲಿವೆ. ಈ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿದ್ದು, ಸಭೆ ಒಂದು ವಾರದವೆರೆಗೂ ಮುಂದುವರಿಯುವ ನಿರೀಕ್ಷೆ ಇದೆ.

8ನೇ ವೇತನ ಆಯೋಗ ಜಾರಿಗೆ ಕೇಂದ್ರ ಅನುಮೋದನೆ ನೀಡಿದ್ದು, ಇನ್ನೂ ಜಾರಿ ಆಗಿಲ್ಲ. ಕೇಂದ್ರ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಸಂಘಟನೆಯಾದ ಜಂಟಿ ಸಲಹಾ ಯಂತ್ರೋಪಕರಣಗಳ ರಾಷ್ಟ್ರೀಯ ಮಂಡಳಿ (ಸಿಬ್ಬಂದಿ ತಂಡ-NC-JCM) ಅಡಿಯಲ್ಲಿ ಈ ಸಭೆ ಜರುಗಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಈಗಾಗಲೇ 8ನೇ ವೇತನ ಆಯೋಗದ ಕಚೇರಿ ಸ್ಥಾಪಿಸಲಾಗಿದೆ. ಅನೇಕ ನಿರೀಕ್ಷೆಗಳ ಬಳಿಕ ವೇತನ ಪರಿಷ್ಕರಣೆ ಪ್ರಕ್ರಿಯೆಯು ಆರಂಭಿಕ ಹಂತಕ್ಕೆ ಬಂದು ತಲುಪಿದೆ.

8th Pay Commission Meeting in Delhi on Jan 25 to Draft Demands central govt employees- pensioners

ಸಭೆಯಲ್ಲಿ ಚರ್ಚೆಯ ಆದ್ಯತೆ ವಿಷಯಗಳು

ಕೇಂದ್ರ ಸರ್ಕಾರಿ ನೌಕರರು ಎಂಟನೇ ವೇತನ ಆಯೋಗದಡಿ ಸಂಬಳ ಪರಿಷ್ಕರಣೆ, ಸೇವಾ ಸಂಬಂಧಿತ ಸಮಸ್ಯೆಗಳು ಒಳಗೊಂಡ ಬೇಡಿಕೆಗಳ ಕುರಿತು ಏಕೀಕೃತ ಜ್ಞಾಪಕ ಪತ್ರ ರೂಪಿಸುವುದು ಸಭೆಯ ಉದ್ದೇಶವಾಗಿದೆ. ಇದೆಲ್ಲ ಕಾರ್ಯರೂಪಕ್ಕೆ ಬಂದಲ್ಲಿ ವರದಿಯನ್ನು ನೌಕರರ ಸಂಘಟನೆಗಳು ವೇತನ ಆಯೋಗಕ್ಕೆ ಸಲ್ಲಿಸಿಸುತ್ತದೆ. ನಂತರ ಜಾರಿಗೆ ಶಿಫಾರಸು ಮಾಡಲಿದೆ. ಈ ಸಭೆಯಲ್ಲಿ ನೌಕರರ ಪ್ರತಿನಿಧಿಗಳು ಜ್ಞಾಪಕ ಪತ್ರ ಹೇಗೆ ರಚಿಸಬೇಕು, ನೌಕರರ ಭವಿಷ್ಯ, ಆರ್ಥಿಕತೆ ದೃಷ್ಟಿಯಲ್ಲಿಟ್ಟುಕೊಂಡು ವರದಿಯಲ್ಲಿ ಯಾವೆಲ್ಲ ಆದ್ಯತೆಯ ವಿಷಯಗಳನ್ನು ಸೇರಿಸಬೇಕು ಎಂಬುದರ ಮೇಲೆ ಚರ್ಚೆಗಳು ಆಗಲಿವೆ.

ಈ ಸಭೆಯಲ್ಲಿ ಅಂಚೆ ಇಲಾಖೆ, ಆದಾಯ ತೆರಿಗೆ, ರೈಲ್ವೆ, ರಕ್ಷಣಾ ಸೇವೆಗಳು ಹಾಗೂ ಇತರ ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಕೇಂದ್ರ ವ್ಯಾಪ್ತಿಯ ಇತರ ನೌಕರರು, ಪಿಂಚಣಿದಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಭತ್ಯೆ ವಿತರಣೆ ಹಾಗೂ ಇನ್ನಿತ ಸಮಸ್ಯೆಗಳ ಪರಿಹಾರಗಳ ಅಂಶಗಳು ಚರ್ಚೆ ಆಗುವ ಸಾಧ್ಯತೆ ಇದೆ. ಸಭೆಯ ಬಹುತೇಕ ಎಲ್ಲ ವಿಷಯಗಳು ವೇತನ ಪರಿಷ್ಕರಣೆಗೆ ಸಂಬಂಧಿಸಿದ್ದಾರಲಿವೆ. ಕನಿಷ್ಠ ವೇತನ ಮಾನದಂಡಗಳು, ಮೂಲ ವೇತನ ಪುನರ್‌ರಚನೆ, ಫಿಟ್‌ಮೆಂಟ್ ಅಂಶ, ವಿವಿಧ ಭತ್ಯೆಗಳ ಹೆಚ್ಚಳ ಘೋಷಣೆ ಒಳಗೊಂಡಂತೆ ಅನೇಕ ವಿಷಯಗಳ ಮೇಲೆ ಚರ್ಚೆಗಳು ನಡೆಯಲಿವೆ. ಸಭೆಯ ಸದಸ್ಯರು ಒಪ್ಪಿದಂತೆ ಒಂದೊಂದೇ ಅಂಶಗಳು ಬೇಡಿಕೆಗಳ ಸಾಲಿಗೆ ಸಾಲಿಗೆ ಸೇರ್ಪಡೆ ಆಗುತ್ತವೆ.

ಆಯೋಗದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು

ನೌಕರರ ಕರಡು ಜ್ಞಾಪಕ ಪತ್ರ ಸಿದ್ಧಗೊಂಡ ಬಳಿಕ 8 ನೇ ವೇತನ ಆಯೋಗವು ಔಪಚಾರಿಕ ಸಮಾಲೋಚನೆ ನಡೆಸಲಿದೆ. ಇಂತಿಷ್ಟು ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು, ಪಾಲುದಾರರಿಂದ ಸಲಹೆ ಆಹ್ವಾನಿಸುತ್ತದೆ. ಇದೆಲ್ಲ ಪ್ರಕ್ರಿಯೆ ನಂತರ, ಬೇಡಿಕೆಗಳನ್ನು ಮೌಲ್ಯಮಾಪನ ಮಾಡಲು, ಘೋಷಿಸಲು ವೈಯಕ್ತಿಕ ವಿಚಾರಣೆ ನಡೆಯಲಿದೆ. ಇದೆಲ್ಲ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಆಯೋಗವು ಕೇಂದ್ರ ಸರ್ಕಾರಕ್ಕೆ ಅಂತಿಮ ಶಿಫಾರಸುಗಳನ್ನು ಸಲ್ಲಿಸಲಿದೆ. ಇದೆಲ್ಲ ಆಗಲು ಇನ್ನೂ ಕೆಲವು ತಿಂಗಳು ಸಮಯ ಹಿಡಿಯಬಹುದು ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+