8th Pay Commission: ಕೇಂದ್ರ ಬಜೆಟ್‌ನಲ್ಲಿ ಜಾರಿಯ ಅಧಿಕೃತ ಘೋಷಣೆ, ವೇತನ ದುಪ್ಪಟ್ಟು ನಿರೀಕ್ಷೆ
ನವದೆಹಲಿ, ಅಕ್ಟೋಬರ್ 22: ಕೇಂದ್ರ ಸರ್ಕಾರಿ ನೌಕರರು ಈ ವರ್ಷದ ಎರಡನೇ ಜುಲೈ ತುಟ್ಟಿಭತ್ಯೆ ಪಡೆದುಕೊಂಡು ದೀಪಾವಳಿ ಸಂಭ್ರಮದಲ್ಲಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರಿ ನೌಕರರ ಬಹುನಿರೀಕ್ಷೆಯ 8ನೇ ವೇತನ ಆಯೋಗ ಮುಂದಿನ ವರ್ಷವೇ ಜಾರಿಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಇದರಿಂದ ನೌಕರರಲ್ಲಿ ಮೂಲ ವೇತನ ಹೆಚ್ಚಳ, ಇತರ ಭತ್ಯೆಗಳ ಪರಿಷ್ಕರಣೆ ಲೆಕ್ಕಚಾರ ಮತ್ತೆ ಜೋರಾಗಿದೆ.
ಈ ವರ್ಷ ಕೇಂದ್ರವು ಜುಲೈ-ಡಿಸೆಂಬರ್ ಮಧ್ಯದ ಅವಧಿಯಲ್ಲಿ ತುಟ್ಟಿಭತ್ಯೆ (DA Hike) ಮತ್ತು ತುಟ್ಟಿ ಪರಿಹಾರ (DR Hike) ಶೆ. 3ರಷ್ಟು ಹೆಚ್ಚಿಸಿದೆ. ಮುಂದಿನ ವರ್ಷ ಜನವರಿಗೆ ಮತ್ತೆ ಡಿಎ ಹೆಚ್ಚಿಸಬೇಕಿದೆ. ಇದರ ನಡುವೆ ಮುಂದಿನ ಹೊಸ ವೇತನ ಆಯೋಗವನ್ನು (8th Pay Commission) ಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರವು 2025ರಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಮುಂದಿನ ವರ್ಷ 2025ರಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಹೊರ ಬೀಳಲಿದೆ. ಇದರ ಘೋಷಣೆ ಕುರಿತು ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಕಾಯುತ್ತಿದ್ದಾರೆ. ಏಕೆಂದರೆ ವಿವಿಧ ಆರ್ಥಿಕ ಸೂಚಕಗಳನ್ನು, ವಿಶೇಷವಾಗಿ ಹಣದುಬ್ಬರದ ಪ್ರವೃತ್ತಿ ಸರಿದೂಗಿಸಲು, ನೌಕರರಿಗೆ ಆರ್ಥಿಕ ಬೆಂಬಲ ನೀಡಲು ಕೇಂದ್ರ ಸರ್ಕಾರ 10 ವರ್ಷಗಳಿಗೆ ಒಮ್ಮೆ ಈ ವೇತನ ಆಯೋಗ ಜಾರಿಗೆ ತರುತ್ತದೆ.
18 ತಿಂಗಳು ಮೊದಲೇ ಪ್ರಕ್ರಿಯೆ ಆರಂಭ
ಕಳೆದ ಬಾರಿ 7ನೇ ವೇತನ ಆಯೋಗ ಜಾರಿ ಪ್ರಕ್ರಿಯೆಯನ್ನು ಬರೋಬ್ಬರಿ 18 ತಿಂಗಳು ಮೊದಲೇ ಆರಂಭಿಸಿತ್ತು. ಶಿಫಾರಸುಗಳನ್ನು ಒಪ್ಪಿ ಅನುಮೋದನೇ ಕೊಟ್ಟು ಜಾರಿಗೆ ಸಮಯ ಹಿಡಿಯುತ್ತದೆ. ಈ ಬಾರಿಯು 2026ರ ಜನವರಿಗೆ ಎಂಟನೇ ವೇತನ ಆಯೋಗ ಜಾರಿಗೆ ಆಗಬಹುದು ಎಂದು ಅಂದಾಜಿಸಲಾಗಿದೆ. ಅದರ ಶಿಫಾರಸುಗಳನ್ನು ಪರಿಗಣನೆ, ಚರ್ಚೆಯು ಮುಂದಿನ ಮೂರು ತಿಂಗಳಿನ ನಂತರ ಶುರುವಾಗಲಿದೆ ಎಂದು ನೌಕರರು ಊಹಿಸಿದ್ದಾರೆ. ಹೀಗಾಗಿಯೇ ವೇತನ ಹೆಚ್ಚಳದ ಲೆಕ್ಕಾಚಾರ ಶುರುವಾಗಿದೆ. ಹೊಸ ವೇತನ ಆಯೋಗದಿಂದ ವೇತನ ದುಪ್ಪಟ್ಟಾಗಬಹುದೆಂಬ ನಿರೀಕ್ಷೆ ಇದೆ.

2025ರಲ್ಲಿ ಆರಂಭದಲ್ಲಿ 8ನೇ ವೇತನ ಆಯೋಗ ಘೋಷಣೆ?
2024 ಕಳೆಯಲು ಎರಡು ತಿಂಗಳಷ್ಟೇ ಬಾಕಿದೆ. ಮುಂದಿನ ವರ್ಷದ 2025ರ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಈ ವೇಳೆ ಕೇಂದ್ರ ಸರ್ಕಾರುವ ಹೊಸ ವೇತನ ಆಯೋಗ ಜಾರಿ ಬಗ್ಗೆ ಅಧಿಕೃತವಾಗಿ ಘೋಷಿಸುವ ನಿರೀಕ್ಷೆಗಳು ಇಮ್ಮಡಿಯಾಗಿವೆ. ಆಯೋಗವು ರಚಿಸಿದ ಬಳಿಕ ಅದರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವ ಮೊದಲು ಈಗಾಗಲೇ ಬಂದ ಶಿಫಾರಸುಗಳನ್ನು ಅಂತಿಮಗೊಳಿಸಬೇಕಾಗುತ್ತದೆ. ಅದಕ್ಕೆ ಹೆಚ್ಚು ಸಮಯ ಹಿಡಿಯವು ಕಾರಣ, ಎಂಟನೇ ವೇತನ ಆಯೋಗ ಜಾರಿಗೆ ಪ್ರಕ್ರಿಯೆ ಮುಂದಿನ ಫೆಬ್ರವರಿಯಿಂದಲೇ ಶುರುವಾಗಲಿದೆ ಅಂತಲೂ ಹೇಳಲಾಗುತ್ತಿದೆ.
ಈ ಹಿಂದೆ 7ನೇ ವೇತನ ಆಯೋಗ ಕುರಿತ ವರದಿಯನ್ನು ಅಂತಿಮಗೊಳಿಸಲು ಕೇಂದ್ರ ಸರ್ಕಾರ ಭರ್ತಿ ಒಂದೂವರೆಗೆ ವರ್ಷ (18 ತಿಂಗಳು) ಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತ್ತು. ತದನಂತರ 2016ರ ಮೊದಲ ತಿಂಗಳೇ ಆಯೋಗವನ್ನು ಅನುಷ್ಠಾನಕ್ಕೆ ತರಲಾಯಿತು. ಈಗಲೂ ಹಾಗೇ ಆಗಲಿದೆ ಎಂದು ನೌಕರರು ಮತ್ತು ಪಿಂಚಣಿದಾರರು ಕಾಯುತ್ತಿದ್ದಾರೆ.
ಹಿಂದಿನ ವೇತನ ಆಯೋಗಗಳಲ್ಲಿ ನೋಡಿದಂತೆ, ನೌಕರರು ಮತ್ತು ಪಿಂಚಣಿದಾರರು ಈ 8ನೇ ವೇತನ ಆಯೋಗವು ತಮ್ಮ ವೇತನದಲ್ಲಿ ಯಾವ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ನೋಡಲು ಉತ್ಸುಕರಾಗಿದ್ದಾರೆ.
6 ಮತ್ತು 7 ನೇ ವೇತನ ಆಯೋಗದಲ್ಲಿ ನೌಕರರ ವೇತನ, ತುಟ್ಟಿಭತ್ಯೆ, ತುಟ್ಟಿಪರಿಹಾರ ಪರಿಷ್ಕರಣೆ ವೇಳೆ 3.68 ರ ಫಿಟ್‌ಮೆಂಟ್ ಅಂಶ ಪರಿಗಣಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಆ ಫಿಟ್‌ಮೆಂಟ್ ಅಂಶ 2.57 ಕ್ಕೆ ನಿಗದಿಪಡಿಸಿತ್ತು. ಈ ಫಿಟ್‌ಮೆಂಟ್ ಅಂಶ ಆಧಾರದಲ್ಲಿ ನೌಕರರ ವೇತನ ಹೆಚ್ಚಳ ನಿರೀಕ್ಷಿಸಬಹುದಾಗಿದೆ. ಈಗ ಎಂಟನೇ ವೇತನ ಆಯೋಗ ಜಾರಿಯಾದರೆ ಪಿಟ್‌ಮೆಂಟ್ ಅಂಶದಲ್ಲೂ ಮಹತ್ವದ ಬಲಾವಣೆ ಆಗಲಿದೆ. ಇದರಿಂದ ಮೂಲ ವೇತನ ಹೆಚ್ಚಾಗಬಹುದು ಎಂದು ನೌಕರರು ಕಾಯುತ್ತಿದ್ದಾರೆ.
ಫಿಟ್‌ಮೆಂಟ್ ಅಂಶದ ಲೆಕ್ಕಾಚಾರ: ವೇತನ ದುಪ್ಪಟ್ಟು?
8ನೇ ವೇತನ ಆಯೋಗದ ನಂತರ ಮ್ಯಾಟ್ರಿಕ್ಸ್ 1.92ರ ಫಿಟ್‌ಮೆಂಟ್ ಅಂಶವನ್ನು ಪರಿಗಣಿಸಿ ವೇತನ ನೀಡುವ ಸಾಧ್ಯತೆ ಇದೆ. ಕನಿಷ್ಠ ವೇತನ 18,000 ರೂ. ಇದ್ದು, ಅದು ಸುಮಾರು 34,560 ರೂ.ಗೆ ಪರಿಷ್ಕರಣೆಗೊಳ್ಳಬಹುದು. ಅದರೊಂದಿಗೆ ಕನಿಷ್ಠ ಪಿಂಚಣಿ ಮೊತ್ತವು 17,280 ರೂಪಾಯಿಗೆ ಏರಬಹುದೆಂದೆಲ್ಲ ಲೆಕ್ಕಚಾರ ನೌಕರರಲ್ಲಿ ಮನೆ ಮಾಡಿದೆ. ಇದಕ್ಕೆಲ್ಲ ಮುಂದಿನ ವರ್ಷವೇ ಉತ್ತರ ಸಿಗಲಿದೆ.
ಸದ್ಯ ನೌಕರರು ಬಹುದಿನಗಳಿಂದ ಕಾಯ್ದಿದ್ದ ತುಟ್ಟಿಭತ್ಯೆ ಪರಿಹಾರ ಮೊನ್ನೆಯಷ್ಟೇ ಏರಿಕೆ ಆಗಿದೆ. ಶೇಕಡಾ 3ರಷ್ಟು ಡಿಎ ಏರಿಕೆಯಿಂದ ಅದರ ಪ್ರಮಾಣ ಶೇಕಡಾ 53 ರಷ್ಟು ಹೆಚ್ಚಳವಾಗಿದೆ. ಈ ಹಣವನ್ನು ಅವರು ದೀಪಾವಳಿಗೆ ಪಡೆಯಲಿದ್ದಾರೆ ಎನ್ನಲಾಗಿದೆ.












Click it and Unblock the Notifications