Get Updates
Get notified of breaking news, exclusive insights, and must-see stories!

Government Employees: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; 8ನೇ ವೇತನ ಆಯೋಗದ ಕುರಿತು ಬಿಗ್‌ ಅಪ್ಡೇಟ್‌

ನವಹೆದಲಿ, ಡಿಸೆಂಬರ್‌ 04: 8ನೇ ವೇತನ ಆಯೋಗ ಜಾರಿ ಕುರಿತು ಕಾದು ಕುಳಿತಿದ್ದ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕೇಂದ್ರ ಸರ್ಕಾರವು 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಮಹತ್ವದ ಸ್ಪಷ್ಟೀಕರಣ ನೀಡಿದೆ. ಕೇಂದ್ರ ನೌಕರರ ಮೂಲ ವೇತನಕ್ಕೆ ದರ ಏರಿಕೆ ಭತ್ಯೆ (DA) ವಿಲೀನ ಮಾಡುವ ಯಾವುದೇ ಪ್ರಸ್ತಾಪವನ್ನು ಸರ್ಕಾರ ಈ ಕ್ಷಣಕ್ಕೆ ಪರಿಗಣಿಸುತ್ತಿಲ್ಲ ಎಂದು ಸರ್ಕಾರ ತಿಳಿಸಿದೆ.

8ನೇ ವೇತನ ಆಯೋಗದ ಸ್ಯಾಲರಿ ಹೆಚ್ಚಳ ಪ್ರಕ್ರಿಯೆ ಶುರು, 2026ರ ಆರಂಭದಿಂದಲೇ 8ನೇ ವೇತನ ಆಯೋಗ ಜಾರಿಯಾಗಲಿದೆ. ಇತ್ತೀಚೆಗೆ 8ನೇ ವೇತನ ಆಯೋಗದ Terms of Reference (ToR) ಪ್ರಕಟವಾದ ಹಿನ್ನೆಲೆಯಲ್ಲಿ, ಈ ವಿಚಾರದಲ್ಲಿ ನೌಕರರ ಸಂಘಗಳಿಂದ ಸಾಕಷ್ಟು ಬೇಡಿಕೆಗಳು ಕೇಳಿಬಂದಿದ್ದರೂ, ಸರ್ಕಾರದ ನಿಲುವು ಸ್ಪಷ್ಟವಾಗಿದೆ.

8th Pay Commission Centre breaks silence on basic pay dearness allowance merger

ಸೋಮವಾರ ಲೋಕಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಹಣಕಾಸು ಸಚಿವೆ ಪಂಕಜ್ ಚೌಧರಿ, ಪ್ರಸ್ತುತ DA ಅನ್ನು ಮೂಲ ವೇತನಕ್ಕೆ ವಿಲೀನ ಮಾಡುವಂತಹ ಯಾವುದೇ ಸೂಚನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ದರ ಏರಿಕೆಯಿಂದ ನೌಕರರ ಮೂಲ ವೇತನದ ನಿಜವಾದ ಮೌಲ್ಯ ನೋಡಿಕೊಳ್ಳಲು, DA ಮತ್ತು DR ದರಗಳನ್ನು ಪ್ರತಿ ಆರು ತಿಂಗಳಿಗೆ ಒಮ್ಮೆ All India Consumer Price Index (AICPI-IW) ಆಧಾರದ ಮೇಲೆ ಪರಿಷ್ಕರಿಸಲಾಗುತ್ತಿದೆ ಎಂದು ತಿಳಿಸಿದರು. ಈ ಕ್ರಮ ನೌಕರರ ಬದುಕಿನ ವೆಚ್ಚದ ಏರಿಕೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಹಣದುಬ್ಬರವನ್ನು ಸರಿದೂಗಿಸಲು ಸರ್ಕಾರವು ನಿಯತಕಾಲಿಕವಾಗಿ ಪ್ರತಿ ಆರು ತಿಂಗಳಿಗೊಮ್ಮೆ ಡಿಎ/ಡಿಆರ್ ಅನ್ನು ಪರಿಷ್ಕರಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹೆಚ್ಚುತ್ತಿರುವ ಹಣದುಬ್ಬರವನ್ನು ಸರಿದೂಗಿಸಲು ಮೂಲ ವೇತನದೊಂದಿಗೆ 50% ಡಿಎಯನ್ನು ತಕ್ಷಣ ವಿಲೀನಗೊಳಿಸುವಂತೆ ಕೋರಿ ನೌಕರರ ಸಂಘಗಳಿಂದ ಹೆಚ್ಚುತ್ತಿರುವ ಬೇಡಿಕೆಗಳ ಮಧ್ಯೆ ಈ ಸ್ಪಷ್ಟೀಕರಣ ಬಂದಿದೆ. ಇತ್ತೀಚಿನ ತಿಂಗಳಲ್ಲಿ ಹಲವಾರು ನೌಕರರ ಸಂಘಗಳು ಕನಿಷ್ಠ 50% DA ಅನ್ನು ತಕ್ಷಣವೇ ಮೂಲ ವೇತನಕ್ಕೆ ಸೇರಿಸುವಂತೆ ಬೇಡಿಕೆ ಇಟ್ಟಿವೆ.

8ನೇ ವೇತನ ಆಯೋಗದ ಶಿಫಾರಸುಗಳು ಮತ್ತು ಹೊಸ ವೇತನ ರಚನೆ 2027 ನಂತರದ ಅವಧಿಯಲ್ಲಿ ಜಾರಿಗೆ ಬರಬಹುದಾದ ಕಾರಣ, DA ವಿಲೀನವಾದರೆ ಮೂಲ ವೇತನ ಹೆಚ್ಚಾಗಿ ಮುಂದಿನ DA ಲೆಕ್ಕಾಚಾರವೂ ಅದನ್ನೇ ಆಧಾರವಾಗುತ್ತದೆ. ಇದರಿಂದ ನೌಕರರಿಗೆ ದೀರ್ಘಾವಧಿಯಲ್ಲಿ ಹಣಕಾಸಿನ ಲಾಭ ದೊರೆಯುತ್ತದೆ ಎಂದು ಸಂಘಗಳು ಹೇಳುತ್ತಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು ಕಳೆದ ವಾರ 8ನೇ ಕೇಂದ್ರ ವೇತನ ಆಯೋಗವನ್ನು ನಿಯಂತ್ರಿಸುವ ನಿಯಮಗಳಿಗೆ ಅನುಮೋದನೆ ನೀಡಿದೆ.

ಈ ಆಯೋಗವು ಕೇಂದ್ರ ಸರ್ಕಾರಿ ಸಿಬ್ಬಂದಿ ಮತ್ತು ಪಿಂಚಣಿದಾರರಿಗೆ ಹೊಸ ವೇತನ ರಚನೆಗಳು ಮತ್ತು ನಿವೃತ್ತಿಯ ನಂತರದ ಪ್ರಯೋಜನಗಳನ್ನು ನಿರ್ಣಯಿಸುತ್ತದೆ. ಆಯೋಗದ ಸಮಗ್ರ ಪರಿಶೀಲನೆಯು ತನ್ನ ಸಂಶೋಧನೆಗಳನ್ನು ಪೂರ್ಣಗೊಳಿಸಲು ಮತ್ತು ಸಲ್ಲಿಸಲು 12 ರಿಂದ 18 ತಿಂಗಳುಗಳವರೆಗೆ ಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರ ವೇತನಗಳನ್ನು ಮತ್ತು ಸುಮಾರು 65 ಲಕ್ಷ ಪಿಂಚಣಿದಾರರ ಪಿಂಚಣಿಗಳನ್ನು ಪರಿಷ್ಕರಿಸುತ್ತದೆ.

ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, 8ನೇ ವೇತನ ಆಯೋಗವು ತನ್ನ ಶಿಫಾರಸುಗಳನ್ನು 18 ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಿದೆ ಮತ್ತು ಹೊಸ ವೇತನ ರಚನೆ 2026ರ ಜನವರಿ 1ರಿಂದ ಜಾರಿಗೆ ಬರಲಿದೆಯೆಂದು ನಿರೀಕ್ಷಿಸಲಾಗಿದೆ. ಜನವರಿ 2025ರಲ್ಲಿ ಈ ಆಯೋಗದ ರಚನೆಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+