ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಲರ್‌ಗೆ 80 ರು. ತಲುಪಿದ ಕರೆನ್ಸಿ: ಸರ್ಕಾರ ಏನು ಮಾಡುತ್ತಿದೆ?

|
Google Oneindia Kannada News

ನವದೆಹಲಿ, ಜುಲೈ.16: ಡಾಲರ್ ವಿರುದ್ಧ ರೂಪಾಯಿ ಐತಿಹಾಸಿಕ ಕುಸಿತ ಕಂಡು 80 ರುಪಾಯಿಗಳಿಗೆ ಹತ್ತಿರವಾಗುತ್ತಿದ್ದಂತೆ ರುಪಾಯಿ ಅಪಮೌಲ್ಯಕ್ಕೆ ಕಾರಣವಾದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

2014ರ ಮೊದಲು ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಯುಪಿಎ ಸರ್ಕಾರವನ್ನು ಕುಸಿಯುತ್ತಿರುವ ರೂಪಾಯಿಯ ಬಗ್ಗೆ ತರಾಟೆಗೆ ತೆಗೆದುಕೊಂಡಂತೆ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಸರಣಿ ಟ್ವಿಟ್‌ಗಳ ಮೂಲಕ ಆರೋಪಗಳ ಸುರಿಮಳೆಗರೆದಿದ್ದಾರೆ.

ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ, ರೂಪಾಯಿ 40: ರಿಫ್ರೆಶ್, 50: ಬಿಕ್ಕಟ್ಟಿನಲ್ಲಿ ಭಾರ, 60: ICU. 70: ಆತ್ಮನಿರ್ಭರ್, 80: ಅಮೃತಕಾಲ್ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ರೂಪಾಯಿಯ ಮುಕ್ತ ಕುಸಿತವನ್ನು ತಡೆಯಲು ಸರ್ಕಾರವು ಎನ್ನ ಅಸಮರ್ಥತೆಯಿಂದ ಎಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.

ಈಗ ರೂಪಾಯಿಯು ಮಾರ್ಗದರ್ಶಕ್ ಮಂಡಲದ ವಯಸ್ಸನ್ನು ದಾಟಿದೆ. ಅದು ಇನ್ನೂ ಎಷ್ಟು ಕುಸಿಯುತ್ತದೆ. ಸರ್ಕಾರದ ವಿಶ್ವಾಸಾರ್ಹತೆ ಇನ್ನೂ ಎಷ್ಟು ಕುಸಿಯುತ್ತದೆ. ವಾಹ್ ಮೋದಿ ಜೀ "#FallingRupeeDestroyingEconomy" ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಮಾರ್ಗದರ್ಶಕ್ ಮಂಡಲ್ ಎಂದರೆ ಬಿಜೆಪಿಯ ಹಿರಿಯರನ್ನು ಒಳಗೊಂಡ ಮಾರ್ಗದರ್ಶಕರ ಗುಂಪಾಗಿದೆ.

2013ರಲ್ಲಿ ಯುಪಿಎ ಸರ್ಕಾರವು ನಾಲ್ಕು ತಿಂಗಳೊಳಗೆ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯವನ್ನು 69ರಿಂದ 58ಕ್ಕೆ ತಂದಿತ್ತು. ಇದೆಲ್ಲವೂ ಇತ್ತೀಚಿನ ಇತಿಹಾಸದ ಭಾಗವಾಗಿದೆ. ಇದು ಬಿಜೆಪಿ ಸರ್ಕಾರ ಜನರಿಗೆ ಮೀಸಲಿಟ್ಟ ಕಾಣಿಕೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಟೀಕಿಸಿದ್ದಾರೆ.

 2013-14 ರಲ್ಲಿ 6.9% ಕ್ಕೆ ಜಿಡಿಪಿ ಏರಿಕೆ

2013-14 ರಲ್ಲಿ 6.9% ಕ್ಕೆ ಜಿಡಿಪಿ ಏರಿಕೆ

2013 ರಲ್ಲಿ ಯುಪಿಎ ಸರ್ಕಾರವಿತ್ತುಆಗ ರೂಪಾಯಿ ಮೌಲ್ಯವನ್ನು 4 ತಿಂಗಳುಗಳಲ್ಲಿ 69 ರೂಪಾಯಿಯಿಂದ 58 ರೂಪಾಯಿಗೆ ಇಳಿದು ಮತ್ತು ಜಿಡಿಪಿ ಬೆಳವಣಿಗೆ ದರವು 2012-13ರಲ್ಲಿ 5.1% ರಿಂದ 2013-14 ರಲ್ಲಿ 6.9% ಕ್ಕೆ ಏರಿತು. ಈ ಮೇಲಿನ ಎಲ್ಲಾ ಏರಿಕೆ ಇತ್ತೀಚಿನ ಇತಿಹಾಸ. ಇದು ಬಿಜೆಪಿ ಸರ್ಕಾರಕ್ಕೆ ಅವಮಾನಕಾರಿಯಾಗಿದೆ ಎಂದು ಚಿದಂಬರಂ ಹೇಳಿದರು.

 ಇದು ನಿಮ್ಮದೇ ಸ್ವಂತ ಮಾತುಗಳು ಮೋದಿ

ಇದು ನಿಮ್ಮದೇ ಸ್ವಂತ ಮಾತುಗಳು ಮೋದಿ

ಮತ್ತೊಂದು ಟ್ವೀಟ್‌ನಲ್ಲಿ ರಾಹುಲ್ ಗಾಂಧಿ, ದೇಶವು ಇಂದು ಹತಾಶೆಯ ಸುಳಿಯಲ್ಲಿದೆ. ಇದು ನಿಮ್ಮದೇ ಸ್ವಂತ ಮಾತುಗಳು ಅಲ್ಲವೇ, ಪ್ರಧಾನಿ ಜೀ? ಆ ಸಮಯದಲ್ಲಿ ನೀವು ಎಷ್ಟು ಸದ್ದು ಮಾಡುತ್ತಿದ್ದೀರಿ, ಇಂದು ನೀವು ರೂಪಾಯಿಯ ಮೌಲ್ಯವು ವೇಗವಾಗಿ ಕುಸಿಯುತ್ತಿರುವುದನ್ನು ನೋಡಿ 'ಮೌನ್' (ಮೌನ) ಆಗಿದ್ದೀರಿ ಎಂದು ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಕರೆನ್ಸಿ ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿರುವಾಗ ಪ್ರಧಾನ ಮಂತ್ರಿ ಅವರು ತಮ್ಮ ಸ್ವಂತ ಹೇಳಿಕೆಗಳ ಬಗ್ಗೆ ಏನು ಹೇಳುತ್ತಾರೆಂದು ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನಾಟೆ ಪ್ರಶ್ನಿಸಿದ್ದಾರೆ.

 ಯುಪಿಎ ಸರ್ಕಾರ ಗುರಿಯಾಗಿಸಿ ಟೀಕೆ

ಯುಪಿಎ ಸರ್ಕಾರ ಗುರಿಯಾಗಿಸಿ ಟೀಕೆ

ಗುಜರಾತಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಪಿಎಂ ನರೇಂದ್ರ ಮೋದಿ ಅವರು ಗ್ರೀನ್‌ಬ್ಯಾಕ್ ವಿರುದ್ಧ ರೂಪಾಯಿ ಮೌಲ್ಯ ಕುಸಿದಾಗಲೆಲ್ಲಾ ಯುಪಿಎ ಸರ್ಕಾರವನ್ನು ಗುರಿಯಾಗಿಸಿ ಟೀಕೆ ಮಾಡಿಕೊಂಡಿದ್ದರು. ಒಂದು ಸಂದರ್ಭದಲ್ಲಿ ಪ್ರಧಾನಿಯವರ ಪ್ರತಿಷ್ಠೆಯು ರೂಪಾಯಿಗೆ ಅಂಟಿಕೊಂಡಿದ್ದು, ಅದೂ ಕುಸಿಯುತ್ತದೆ. ಪ್ರಧಾನಿಯ ಹೆಚ್ಚು ವಿಶ್ವಾಸಾರ್ಹತೆ ಮತ್ತು ಘನತೆ ಕುಸಿಯುತ್ತದೆ ಎಂದು ಹೇಳಿದರು.

 ಪ್ರಧಾನಿ ಮತ್ತು ರುಪಾಯಿ ಇಬ್ಬರೂ ಮೂಕರಾಗಿದ್ದಾರೆ

ಪ್ರಧಾನಿ ಮತ್ತು ರುಪಾಯಿ ಇಬ್ಬರೂ ಮೂಕರಾಗಿದ್ದಾರೆ

ಜುಲೈ 2013 ರಲ್ಲಿ ಪಿಎಂ ಮೋದಿ ಟ್ವೀಟ್‌ನಲ್ಲಿ, ಯುಪಿಎ ಸರ್ಕಾರ ಮತ್ತು ರೂಪಾಯಿ ಪರಸ್ಪರ ಪೈಪೋಟಿಯಲ್ಲಿರುವಂತೆ ತೋರುತ್ತಿದೆ. ಯಾರು ಹೆಚ್ಚು ಕುಸಿಯುತ್ತಾರೆ ನೋಡೋಣ ಎಂದು ಮೋದಿ ಹೇಳಿದ್ದರು. ನಂತರ ಅದೇ ವರ್ಷದ ಆಗಸ್ಟ್‌ನಲ್ಲಿ, ಕುಸಿಯುತ್ತಿರುವ ದೇಶೀಯ ಕರೆನ್ಸಿಯ ಬಗ್ಗೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು, ಭಾರತೀಯ ರೂಪಾಯಿ ಬಹಳಷ್ಟು ಸದ್ದು ಮಾಡುತ್ತಿದ್ದ ಸಮಯವಿತ್ತು. ಆದರೆ ಇಂದು ಅದು ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಅದೇ ರೀತಿ ನಮ್ಮ ಪ್ರಧಾನಿಯವರ ಧ್ವನಿಯನ್ನು ನಾವು ಕೇಳಲು ಸಾಧ್ಯವಾಗುತ್ತಿಲ್ಲ. ಇಬ್ಬರೂ ಮೂಕರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

English summary
The Congress-led opposition has expressed outrage at the central government for devaluing the rupee as the rupee has seen a historic fall against the dollar and is nearing 80 rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X