ಶೇ.80 ರಷ್ಟು ಔಷಧಗಳ ಬೆಲೆ ಶೀಘ್ರ ಇಳಿಕೆ ಸಾಧ್ಯತೆ
Recommended Video
ನವದೆಹಲಿ, ನವೆಂಬರ್ 28: ಶೀಘ್ರದಲ್ಲೇ ಶೇ.80ರಷ್ಟು ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
ಮನಸ್ಸಿಗೆ ಬಂದಂತೆ ಲಾಭಕ್ಕೆ ಔಷಧಗಳನ್ನು ಮಾರಾಟ ಮಾಡುತ್ತಿದ್ದ ಫಾರ್ಮಾ ಕಂಪನಿಗಳ ವ್ಯವಹಾರಕ್ಕೆ ಇನ್ನುಮುಂದೆ ಕಡಿವಾಣ ಬೀಳಲಿದೆ.
ಬೆಲೆ ನಿಯಂತ್ರಣ ಪರಿಧಿಯಿಂದ ಹೊರಗಿರುವ ಔಷಧಗಳ ಗರಿಷ್ಠ ಶೇ.30ರಷ್ಟು ಮಾತ್ರ ಲಾಭ ನಿಗದಿಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ದೇಶೀಯ ಔಷಧ ಉದ್ಯಮ ಒಪ್ಪಿಗೆ ನೀಡಿದೆ.

ಬೆಎಲೆ ನಿಯಂತ್ರಣ ವ್ಯಾಪ್ತಿಯಲ್ಲಿರುವ ಔಷಧ ಸೇರಿದಂತೆ ಎಲ್ಲಾ ರೀತಿಯ ಔಷಧಗಳಿಗೆ ಶೇ.100ರಷ್ಟು ಲಾಭ ನಿಗದಿಗೊಳಿಸುವ ಪ್ರಸ್ತಾವವೂ ಸಭೆಯಲ್ಲಿ ಚರ್ಚೆಯಾಗಿತ್ತು. ಇದರಿಂದಾಗಿ ಮುಂದಿನ ದಿನಗಳಲ್ಲಿ ಶೇ.80ರಷ್ಟು ಔಷಧಗಳ ಬೆಲೆ ಇಳಿಕೆಯಾಗಲಿದೆ.
ಔಷಧ ನಿಯಂತ್ರಣ ಪ್ರಾಧಿಕಾರ ಹಾಗೂ ಔಷಧ ಉದ್ಯಮದ ಪ್ರತಿನಿಧಿಗಳೊಂದಿಗೆ ಕಳೆದ ವಾರ ನಡೆದ ಸಭೆಯಲ್ಲಿ ಗರಿಷ್ಠ 30ರಷ್ಟು ಮಾತ್ರ ಲಾಭಕ್ಕೆ ಔಷಧಗಳನ್ನು ಮಾರಾಟ ಮಾಡಬೇಕು ಎಂಬ ವಿಚಾರಕ್ಕೆ ಒಪ್ಪಿಗೆ ದೊರೆತಿತ್ತು.
ಶೇ.30ರಷ್ಟು ಲಾಭದ ಮಿತಿಯಲ್ಲಿ ಚಿಲ್ಲರೆ ವ್ಯಾಪಾರಗಳಿಗೆ ಶೇ.20ರಷ್ಟು ಹಾಗೂ ಸಗಟು ವ್ಯಾಪಾರಿಗಳಿಗೆ ಶೇ.10ರಷ್ಟು ಪಾಲು ಸಿಗಲಿದೆ.












Click it and Unblock the Notifications