ಮೇ 23ಕ್ಕೆ ಕೇಂದ್ರ ಸರಕಾರಿ ನೌಕರರ ಪ್ರತಿಭಟನೆ, ಅವರ ಬೇಡಿಕೆಗಳೇನು?
ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ ಜಾರಿ ಮಾಡಬೇಕು. ಜನವರಿ 1, 2016ರಿಂದ ಪೂರ್ವಾನ್ವಯ ಆಗುವಂತೆ ಬಾಕಿ ಹಣವನ್ನು ಶೀಘ್ರದಲ್ಲೇ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಮೇ 23ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಬೆಂಗಳೂರು, ಮೇ 8: ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಸರಕಾರಿ ನೌಕರರ ಒಕ್ಕೂಟವು ಮೇ 23ರಂದು ಬೃಹತ್ ಪ್ರತಿಭಟನೆ ಆಯೋಜಿಸಿದೆ. ಒಕ್ಕೂಟದ ಜತೆಗೆ ನ್ಯಾಷನಲ್ ಜಾಯಿಂಟ್ ಕೌನ್ಸಿಲ್ ಆಫ್ ಆಕ್ಷನ್ ಕೂಡ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿದೆ.
ಈ ಪ್ರಮುಖ ಪ್ರತಿಭಟನೆಯು ಮೇ 23ರಂದು ನಡೆಯಲಿದ್ದು, ಒಕ್ಕೂಟವು ಕೆಲ ಪ್ರಮುಖ ವಿಚಾರಗಳನ್ನು ಪ್ರಸ್ತಾವ ಮಾಡಿದೆ. ಜುಲೈ 11, 2016ರಲ್ಲಿ ನ್ಯಾಷನಲ್ ಜಾಯಿಂಟ್ ಕೌನ್ಸಿಲ್ ಆಫ್ ಆಕ್ಷನ್ ನಿಂದ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಏಳನೇ ವೇತನ ಆಯೋಗದ ಸಮಿತಿ ಕಾರ್ಯದರ್ಶಿಗಳು ತಮ್ಮ ಬೇಡಿಕೆಗಳನ್ನು ಶಿಫಾರಸಿನಲ್ಲಿ ಸೇರಿಸಿರಲಿಲ್ಲ ಎಂಬ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಪ್ರತಿಭಟನೆಗೆ ಕರೆ ನೀಡಲಾಗಿತ್ತು.[6 ಲಕ್ಷ ರಾಜ್ಯ ಸರ್ಕಾರಿ ನೌಕರರ ವೇತನ ಗಣನೀಯ ಹೆಚ್ಚಳ ?]
ಕೇಂದ್ರ ಸರಕಾರಿ ನೌಕರರ ಬೇಡಿಕೆಗಳೇನು, ಮೇ 23ರಂದು ನಡೆಯುವ ಪ್ರತಿಭಟನೆಯಲ್ಲಿ ಯಾವ ವಿಚಾರವನ್ನು ಮುಂಡಿಡುತ್ತಾರೆ? ಯಾವುದರ ಶೀಘ್ರ ಜಾರಿಗಾಗಿ ಒತ್ತಾಯಿಸುತ್ತಾರೆ ಎಂಬುದರ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಜನವರಿ 1, 2016ರಿಂದ ಪೂರ್ವಾನ್ವಯ
ಎಚ್ ಆರ್ ಎ ಒಳಗೊಂಡಂತೆ ಬದಲಾದ ಎಲ್ಲ ಭತ್ಯೆಗಳನ್ನು ಜನವರಿ 1, 2016ರಿಂದ ಪೂರ್ವಾನ್ವಯ ಆಗುವಂತೆ ನೀಡಬೇಕು.

ಅಯ್ಕೆ 1ರ ಪ್ರಕಾರ ಪಿಂಚಣಿ
ಏಳನೇ ವೇತನ ಆಯೋಗ ಶಿಫಾರಸು ಮಾಡಿರುವಂತೆ ಅಯ್ಕೆ 1ರ ಪ್ರಕಾರ ನಿವೃತ್ತಿಯಾದವರಿಗೆ ಪಿಂಚಣಿಯನ್ನು ನೀಡಬೇಕು.

ಕನಿಷ್ಠ ವೇತನ ಹೆಚ್ಚಳ
ಕನಿಷ್ಠ ವೇತನವನ್ನು ಹೆಚ್ಚಿಸಬೇಕು ಮತ್ತು ಫಿಟ್ ಮೆಂಟ್ ಸೂತ್ರವನ್ನು ಬದಲಿಸಬೇಕು.

ಸಕಾರಾತ್ಮಕ ಶಿಫಾರಸು ಜಾರಿಗೆ
ಗ್ರಾಮೀಣ್ ಡಾಕ್ ಸೇವಕ್ ಹುದ್ದೆಗೆ ಕಮ್ಲೇಶ್ ಚಂದ್ರ ಸಮಿತಿ ಮಾಡಿದ್ದ ಎಲ್ಲ ಸಕಾರಾತ್ಮಕ ಶಿಫಾರಸುಗಳನ್ನು ಜಾರಿಗೆ ತರಬೇಕು ಸರಕಾರಿ ನೌಕರ ಹುದ್ದೆಯ ಸ್ಥಾನ ಮಾನ ನೀಡಬೇಕು

ಸೇವೆ ಕಾಯಂ
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದರ ಜತೆಗೆ ಅರೆಕಾಲಿಕ, ಗುತ್ತಿಗೆ ಆಧಾರದ ನೌಕರ ಸೇವೆ ಕಾಯಂಗೊಳಿಸಬೇಕು.

ಡಿಯರ್ ನೆಸ್ ರಿಲೀಫ್
ನಿವೃತ್ತಿ ವೇತನ ಪರಿಷ್ಕರಣೆ ಹಾಗೂ ಸ್ವಾಯತ್ತ ಸಂಸ್ಥೆಗಳ ನಿವೃತ್ತ ಉದ್ಯೋಗಿಗಳಿಗೆ ಡಿಯರ್ ನೆಸ್ ರಿಲೀಫ್ ನ ನೀಡಬೇಕು

ಕಠಿಣ ನಿಯಮ ತೆಗೆಯಿರಿ
ಎಂಎಸಿಪಿ ಅನುದಾನದ ಮೇಲೆ ಹೇರಿರುವ ಕಠಿಣ ನಿಯಮಗಳನ್ನು ತೆಗೆದುಹಾಕಬೇಕು.

ಶಿಫಾರಸುಗಳ ಯಥಾವತ್ ಜಾರಿ
ಪೂರ್ವಾನ್ವಯ ಆಗುವುದರಿಂದ ಬಾಕಿ ಇರುವ ಮೊತ್ತವನ್ನು ಶೀಘ್ರದಲ್ಲೇ ವಿತರಿಸಬೇಕು ಎಂದು ಬೇಡಿಕೆಯಿದ್ದು, ಶೀಘ್ರದಲ್ಲೇ ಪಾವತಿಸುವುದಾಗಿ ಸಂಪುಟ ಕಾರ್ಯದರ್ಶಿ ಪಿಕೆ ಸಿನ್ಹಾ ಹೇಳಿದ್ದಾರೆ. ಸಮಿತಿ ಮಾಡಿದ್ದ ಶಿಫಾರಸುಗಳನ್ನು ಇನ್ನೂ ಆರ್ಥಿಕ ಸಚಿವಾಲಯ ಪರಿಶೀಲಿಸುತ್ತಿದೆ. ಆದರೆ ಕಾರ್ಯದರ್ಶಿ ನೀಡಿರುವ ಭರವಸೆ ಪ್ರಕಾರ ಶಿಫಾರಸುಗಳನ್ನು ಯಥಾವತ್ ಜಾರಿಗೆ ತರಲಾಗುತ್ತದೆ.

ಭತ್ಯೆಗಳಲ್ಲಿ ಮಾರ್ಪಾಟು
ಕೇಂದ್ರ ಸರಕಾರಿ ನೌಕರರ ಭತ್ಯೆಗಳ ಪೈಕಿ ಕೆಲವನ್ನು ಮಾರ್ಪಾಟು ಮಾಡುವಂತೆ ಸೂಚಿಸಲಾಗಿದೆ. 36 ಸಣ್ಣ ಪ್ರಮಾಣದ ಭತ್ಯೆಗಳನ್ನು ಹೊರತುಪಡಿಸಿ 196 ಪೈಕಿ 52 ಭತ್ಯೆಗಳನ್ನು ತೆಗೆಯಲಾಗಿದೆ. ಇನ್ನು ಈಗಿರುವ ಎಚ್ ಆರ್ ಎ 10.20 ಹಾಗೂ 30 ಪರ್ಸೆಂಟ್ ಅನ್ನು 8, 16, 24ಕ್ಕೆ ಇಳಿಸಲಾಗಿದ












Click it and Unblock the Notifications