Get Updates
Get notified of breaking news, exclusive insights, and must-see stories!

ಕೇಂದ್ರ ಸರಕಾರಿ ನೌಕರರ ಭತ್ಯೆ 5 ಪಟ್ಟು ಹೆಚ್ಚಳ, ನರೇಂದ್ರ ಮೋದಿ ಸರ್ಕಾರದ ಬಂಪರ್ ಕೊಡುಗೆ

Recommended Video

      ಕೇಂದ್ರ ಸರ್ಕಾರೀ ನೌಕರರಿಗೆ ನರೇಂದ್ರ ಮೋದಿ ಹೊಸ ಸರ್ಕಾರದಿಂದ ಶುಭ ಸುದ್ದಿ

      7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ್ 2.0ನಿಂದ ಶುಭ ಸುದ್ದಿ ಸಿಕ್ಕಿದೆ.

      ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಹೊಸ ಸರ್ಕಾರ ಸ್ಥಾಪಿಸಲಿದ್ದಾರೆ. ಇದಾದ ಬಳಿಕ ಸರ್ಕಾರಿ ನೌಕರರ ಭತ್ಯೆ ಹೆಚ್ಚಳದ ಅಧಿಸೂಚನೆಗೆ ಅಂಕಿತ ಹಾಕಲಿದ್ದಾರೆ.

      ಈ ನಡುವೆ ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ ಇಲಾಖೆ ಹೊರಡಿಸಿರುವ ಈ ಇಂದಿನ ಪ್ರಕಟಣೆಯಂತೆ ಐದು ಪಟ್ಟು ಭತ್ಯೆ ಹೆಚ್ಚಳ ಸಿಗಲಿದೆ. ಸರ್ಕಾರಿ ಹುದ್ದೆ ಸೇರಿದ ಬಳಿಕ ಸ್ನಾತಕೋತ್ತರ ಪದವಿ ಪಡೆದವರಿಗೆ ಈ ಸೌಲಭ್ಯ ಸಿಗಲಿದೆ. ಯಾರಿಗೆ ಎಷ್ಟು ಭತ್ಯೆ ಹೆಚ್ಚಳ ಸಿಗಲಿದೆ.

      ಉನ್ನತ ಪದವಿ ಪಡೆದವರಿಗೆ 10,000 ರು ನಿಂದ 30,000 ರು ತನಕ ಲಂಪ್ ಸಮ್ ನಂತೆ ಒಮ್ಮೆಗೆ ಭತ್ಯೆ ಸಿಗಲಿದೆ. ಪದವಿ ಅಥವಾ ಮೂರು ವರ್ಷಗಳ ಅವಧಿ ಅಥವಾ ಅದಕ್ಕಿಂತ ಕೆಳಮಟ್ಟದ ತತ್ಸಮಾನ ಅರ್ಹತೆಯುಳ್ಳವರಿಗೆ ಕನಿಷ್ಠ 10,000 ರು ಭತ್ಯೆ ಸಿಗಲಿದೆ.

      ಅಧಿಸೂಚನೆಯಂತೆ ಭತ್ಯೆ ಹೊಸ ಪಟ್ಟಿ

      ಅಧಿಸೂಚನೆಯಂತೆ ಭತ್ಯೆ ಹೊಸ ಪಟ್ಟಿ

      ಅಧಿಸೂಚನೆಯಂತೆ ಭತ್ಯೆ ಹೊಸ ಪಟ್ಟಿ
      * ಪಿಎಚ್ ಡಿ ಅಥವಾ ತತ್ಸಮಾನ ಹೊಂದಿದವರಿಗೆ : 30,000 ರು
      * ಪಿಜಿ ಡಿಗ್ರಿ/ ಡಿಪ್ಲೋಮಾ (ಒಂದು ವರ್ಷಕ್ಕಿಂತ ಅಧಿಕ ಆವಧಿ): 25,000 ರು
      * ಪಿಜಿ ಡಿಗ್ರಿ/ ಡಿಪ್ಲೋಮಾ (ಒಂದು ವರ್ಷಕ್ಕಿಂತ ಕಡಿಮೆ ಆವಧಿ): 20,000 ರು
      * ಡಿಗ್ರಿ/ ಡಿಪ್ಲೋಮಾ (ಮೂರು ವರ್ಷಕ್ಕಿಂತ ಅಧಿಕ ಆವಧಿ ಅಥವಾ ತತ್ಸಮಾನ): 15,000ರು
      * ಡಿಗ್ರಿ/ ಡಿಪ್ಲೋಮಾ (ಮೂರು ವರ್ಷಕ್ಕಿಂತ ಕಡಿಮೀ ಆವಧಿ): 10,000 ರು
      ***

      ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿತ್ತು

      ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿತ್ತು

      ಕೇಂದ್ರ ಸರ್ಕಾರಿ ನೌಕರರು 6ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಫಿಟ್ಮೆಂಟ್ ಫಾರ್ಮ್ಯೂಲಾದಂತೆ ಮೂಲ ವೇತನದ 2.57ರಂತೆ ವೇತನ ಪಡೆಯುತ್ತಿದ್ದಾರೆ. ಕಳೆದ ಏಪ್ರಿಲ್ 1 ರಿಂದ ಪೂರ್ವನ್ವಯವಾಗುವಂತೆ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇತ್ತು. ಆದರೆ, ಈ ಬಗ್ಗೆ ಯಾವುದೇ ಘೋಷಣೆಯಾಗಲಿಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೊಂಡು ಯಾವುದೇ ಘೋಷಣೆಗೆ ಅವಕಾಶ ಸಿಗಲಿಲ್ಲ

      ಕನಿಷ್ಠ ವೇತನ ಏರಿಕೆ ನಿರೀಕ್ಷೆ

      ಕನಿಷ್ಠ ವೇತನ ಏರಿಕೆ ನಿರೀಕ್ಷೆ

      ಕನಿಷ್ಠ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು. ಅಂದರೆ, 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ. ಆದರೆ, ಲಭ್ಯ ಮಾಹಿತಿಯಂತೆ aykroyd ಫಾರ್ಮ್ಯೂಲಾದಂತೆ ಧೀರ್ಘಾವಧಿಗೆ ಜಾರಿಗೊಳಿಸಬಹುದು.

      ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಗೊಂದಲ

      ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಗೊಂದಲ

      2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ. ಆದರೆ, ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಗೊಂದಲ ಮುಂದುವರೆದಿದೆ

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+