ಜುಲೈ ಅಂತ್ಯಕ್ಕೆ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಶುಭ ಸುದ್ದಿ
ನವದೆಹಲಿ, ಜುಲೈ 12: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 05ರಂದು ಮಂಡಿಸಿದ ಚೊಚ್ಚಲ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ನಿರಾಶೆ ಉಂಟಾಗಿತ್ತು. ಮೋದಿ ಸರ್ಕಾರ್ 2.0 ನ ಚೊಚ್ಚಲ ಬಜೆಟ್ ನಲ್ಲಿ ಸರ್ಕಾರಿ ನೌಕರರ ಬೇಡಿಕೆ, 7ನೇ ವೇತನ ಆಯೋಗದ ಶಿಫಾರಸು ಅನುಷ್ಠಾನ, ನಿವೃತ್ತಿ ವಯಸ್ಸು ಏರಿಕೆ, ಕನಿಷ್ಟ ವೇತನ ಮೊತ್ತ ಏರಿಕೆ ಬಗ್ಗೆ ಯಾವುದೇ ಪ್ರಸ್ತಾಪ ಕಂಡು ಬಂದಿರಲಿಲ್ಲ.
ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ವೇತನವನ್ನು 18,000ರು ನಿಂದ 26,000 ರು ಗೇರಿಸುವಂತೆ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.ಹೀಗಾಗಿ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಲು ಇನ್ನಷ್ಟು ಕಾಲ ಕಾಯುವುದು ಅನಿವಾರ್ಯ ಎನ್ನಲಾಗಿತ್ತು. ಆದರೆ, ಸದ್ಯಕ್ಕೆ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ತೀರ್ಮಾನವಾಗಿದ್ದು, ಜುಲೈ ತಿಂಗಳ ಅಂತ್ಯಕ್ಕೆ ಈ ಬಗ್ಗೆ ಅಧಿಕೃತ ಆದೇಶ ನಿರೀಕ್ಷಿಸಬಹುದಾಗಿದೆ.
ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ಅಕೌಂಟ್ಸ್ ಹಾಗೂ ಆಡಿಟ್ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಹರಿಶಂಕರ್ ತಿವಾರಿ ಹೇಳಿದ್ದರು. ಆದರೆ, ಶೇ 5ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಜುಲೈ ತಿಂಗಳಿನಲ್ಲೇ ಸರ್ಕಾರ ಘೋಷಿಸಲು ಸಜ್ಜಾಗಿದೆ.

ಶೇ12 ರಿಂದ ಶೇ 17ಕ್ಕೆ ಡಿಎ ಏರಿಕೆಯಾಗಲಿದೆ
ಲಭ್ಯ ಮಾಹಿತಿಯಂತೆ ಶೇ12 ರಿಂದ ಶೇ 17ಕ್ಕೆ ಡಿಎ ಏರಿಕೆಯಾಗಲಿದೆ. ಗ್ರಾಹಕ ದರ ಸೂಚ್ಯಂಕ, ಸಗಟು ಹಣದುಬ್ಬರ ಗಮನಿಸಿ, ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ(ಎಐಸಿಪಿಐ) ಏಪ್ರಿಲ್ ನಲ್ಲಿ ಏರಿಕೆಯಾಗಿದೆ.
ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಶೇ 13.39ರಿಂದ ಶೇ 15.49ಕ್ಕೇರಿಯಾಗಿತ್ತು.
ಸುಮಾರು 1.1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೆರವಾಗಲಿದ್ದು, ಕೇಂದ್ರ ಸರ್ಕಾರದ ಮೇಲೆ ವಾರ್ಷಿಕವಾಗಿ 6,112.20 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ. 2013-14ರಲ್ಲಿ 63,000 ಕೋಟಿ ಇದ್ದ ಇಲಾಖೆಯ ಬಹೆಟ್ ಈಗ 2018-19ರಲ್ಲಿ 110 ಲಕ್ಷ ಕೋಟಿಗೆ ಏರಿಕೆಯಾಗಿದೆ.

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ
2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ. ಆದರೆ, ನಿವೃತ್ತಿ ವಯಸ್ಸು ಏರಿಕೆ, ಕನಿಷ್ಠ ವೇತನದಲ್ಲಿ ಬದಲಾವಣೆ ಬಗ್ಗೆ ಸುಳಿವು ಸಿಕ್ಕಿಲ್ಲ.

ಕನಿಷ್ಟ ವೇತನ ಏರಿಕೆ ಇಲ್ಲ, ಒಟ್ಟಾರೆ ವೇತನ ಏರಿಕೆ?
ಕಳೆದ ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇತ್ತು. ಆದರೆ, ಈ ಬಗ್ಗೆ ಯಾವುದೇ ಘೋಷಣೆಯಾಗಲಿಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೊಂಡು ಯಾವುದೇ ಘೋಷಣೆಗೆ ಅವಕಾಶ ಸಿಗಲಿಲ್ಲ. ಹೀಗಾಗಿ, ಮೂಲ ವೇತನದಲ್ಲಿ ಎಷ್ಟು ಪ್ರಮಾಣ ಏರಿಕೆ ಬೇಡಿಕೆ ಹಾಗೆ ಉಳಿದಿದೆ. ಆದರೆ, ಒಟ್ಟಾರೆ ವೇತನದಲ್ಲಿ 2 ಸಾವಿರ ರು ಏರಿಕೆ ಸಾಧ್ಯತೆ ಬಗ್ಗೆ ಸುಳಿವು ಸಿಕ್ಕಿದೆ.

ತುಟ್ಟಿಭತ್ಯೆ ಹೆಚ್ಚಳ ಪ್ರಮಾಣ ಹೆಚ್ಚಿಸಲು ಮನವಿ
ಕೇಂದ್ರ ಸಂಪುಟವು 3% ತುಟ್ಟಿ ಭತ್ಯೆ (ಡಿಎ) ಹೆಚ್ಚಳದ ಘೋಷಣೆ ಮಾಡಿದ್ದು, ಸರ್ಕಾರಿ ನೌಕರರಿಗೆ ಕೊಂಚ ಸಂತಸ ತಂದಿದೆ. ಜನವರಿ 1, 2019ರಿಂದಲೇ ಇದು ಪೂರ್ವಾನ್ವಯ ಆಗಲಿದೆ. ಈ ನಿರ್ಧಾರದಿಂದ ಕಳೆದ ಕೇಂದ್ರ ಸರಕಾರದ ಮೇಲೆ 9000 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಬಿದ್ದಿತ್ತು.
ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. 3% ತುಟ್ಟಿ ಭತ್ಯೆ ಹೆಚ್ಚಳ ಮಾಡಿರುವುದರಿಂದ ಡಿಎ ಹಾಗೂ ತುಟ್ಟಿ ದರ (ಡಿಆರ್) ನಿವೃತ್ತಿಯಾದವರಿಗೆ ಶೇ 12ರಷ್ಟು ತಲುಪಲಿದೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಆದರೆ, ಶೇ 4ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಬೇಡಿಕೆ ಇಡಲಾಗಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications