Get Updates
Get notified of breaking news, exclusive insights, and must-see stories!

7th Pay Commission: ಸರ್ಕಾರಿ ನೌಕರರ 18 ತಿಂಗಳ 'ಡಿಎ' ಬಾಕಿ ಪಾವತಿ ಅಪ್ಡೇಟ್

ಬೆಂಗಳೂರು, ಜುಲೈ 03: ದೇಶದಲ್ಲಿ ಏಳನೇ ವೇತನ ಆಯೋಗದ (7th Pay Commission) ಅವಧಿ ಅಂತ್ಯಗೊಂಡು ನಾವಿದೀಗ ಎಂಟನೇ ವೇತನ ಆಯೋಗದ (8th Pay Commission) ಅನುಷ್ಠಾನಕ್ಕಾಗಿ ಸರ್ಕಾರಿ ನೌಕರರು ಕಾಯುತ್ತಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ.

ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ (Derrance Allowance) ಯನ್ನು ಹೆಚ್ಚಳ ಮಾಡಿದೆ. ಇದಾಗಿ ತಿಂಗಳು ಕಳೆದಿವೆ. ಆದರೆ ಈ ಮಧ್ಯೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ COVID-19 ಸಾಂಕ್ರಾಮಿಕ ಸಮಯದಲ್ಲಿ 18 ತಿಂಗಳವರೆಗೆ ಅಮಾನತುಗೊಳಿಸಲಾದ DA ಬಾಕಿ ಸಿಗಲಿದೆ? ಮಾಹಿತಿ ಬಹಿರಂಗವಾಗಿದೆ.

7th Pay Commission Central Govt Employees Appeal PM Modi for 18-Month DA Arrears

ಕೇಂದ್ರ ಸರ್ಕಾರಿ ನೌಕರರ ಜಂಟಿ ಸಲಹಾ ಯಂತ್ರೋಪಕರಣಗಳ ರಾಷ್ಟ್ರೀಯ ಕೌನ್ಸಿಲ್ (ಸಿಬ್ಬಂದಿ ಭಾಗ) ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು ಈ ಕುರಿತು ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಳಿ, ಈ ಹಿಂದೆ ಕೋವಿಡ್ ವೇಳೆ ಅಮಾನತುಗೊಂಡಿದ್ದ 18 ತಿಂಗಳ ತುಟ್ಟಿಭತ್ಯೆ (ಡಿಎ) ಬಾಕಿಯನ್ನು ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.

ತುಟ್ಟಿಭತ್ಯೆ (ಡಿಎ) ಬಾಕಿ ಕುರಿತು ಬೇಡಿಕೆ ಏನು?

ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ (DA) ಏರಿಕೆ ಆಗುತ್ತದೆ. ತುಟ್ಟಿಭತ್ಯಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರ 2020ರ ಆರಂಭದಲ್ಲಿ ಕೊರೊನಾ ಕಾರಣಿಸಿಕೊಂಡ ಹಿನ್ನೆಲೆಯಲ್ಲಿ ಏರಿಕೆ ಮಾಡಲಿಲ್ಲ. ಸಾಂಕ್ರಾಮಿಕ ಕಾರಣದಿಂದ ನೌಕರರು ಅಂದು ತುಟ್ಟಿಭತ್ಯೆಯಿಂದ ವಂಚಿತರಾದರು.

ಇದೇ ವೇಳೆ ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶಿಸಿತು. ಮೊದಲು ಜನವರಿಯಲ್ಲಿ ಮತ್ತು ನಂತರ ಜುಲೈನಲ್ಲಿ ಏರಿಕೆ ಮಾಡಿತೇ ವಿನಹ, ಅಮಾನತಿನಲ್ಲಿದ್ದ ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿನ 18 ತಿಂಗಳ ಡಿಎ ಹೆಚ್ಚಳ ಬಗ್ಗೆ ತುಟಿ ಬಿಚ್ಚಲಿಲ್ಲ.

7th Pay Commission Central Govt Employees Appeal PM Modi for 18-Month DA Arrears

ನೇರ ಪ್ರಧಾನಮಂತ್ರಿಗಳಿಗೆ 'ಡಿಎ' ಬಗ್ಗೆ ಮನವಿ

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಸ್ತಾವನೆ ಮೂಲಕ ಮನವಿ ಮಾಡಲಾಗಿತ್ತು. ಇದೀಗ ಆ ಪ್ರಸ್ತಾವನೆ ಉಲ್ಲೇಖಿಸಿ ಮಾತನಾಡಿದ ಗೋಪಾಲ್ ಮಿಶ್ರಾ ಅವರು ರಾಷ್ಟ್ರೀಯ ಮಂಡಳಿಯ (ಜೆಸಿಎಂ) ಕಾರ್ಯದರ್ಶಿಯಾಗಿ (ಸಿಬ್ಬಂದಿ ಭಾಗ) ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತೊಂದರೆಯಾಗುತ್ತಿರುವ ಕೆಲವು ವಿಷಯಗಳನ್ನು ಕೇಂದ್ರದ ಗಮನಕ್ಕೆ ತಂದಿದ್ದಾರೆ.

ಇದು ಮಾತ್ರವಲ್ಲದೇ ಭಾರತೀಯ ಪ್ರತೀಕ್ಷಾ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಮುಖೇಶ್ ಸಿಂಗ್ ಅವರು ಪ್ರಧಾನಮಂತ್ರಿಗಳಿಗೆ ಪತ್ರ ಮುಖೇನ ಅರ್ಹರಿಗೆ 18 ತಿಂಗಳ ಬಾಕಿ ಉಳಿದ ತುಟ್ಟಿಭತ್ಯೆ ಬಿಡುಗಡೆ ಮಾಡುವಂತೆ ಕೋರಿದ್ದರು. ಇದೆಲ್ಲವು ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಧಾನಿ ಗಮನಕ್ಕೆ ತರಲಾಗುತ್ತಿದೆ.

ಸರ್ಕಾರಿ ನೌಕರರ ಗಮನಕ್ಕೆ...

ಕೇಂದ್ರ ನೀಡುವ ತುಟ್ಟಿಭತ್ಯೆಯು (ಡಿಎ) ಸರ್ಕಾರಿ ನೌಕರರ ವೇತನದ ಒಂದು ಅಂಶವೇ ಆಗಿದೆ. ಇದನ್ನು ನೀಡಿದಾಗ ನೌಕರರು, ಪಿಂಚಣಿದಾರರು ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ಸರಿದೂಗಿಸಲು ಸಾಧ್ಯವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಇದು ಅತ್ಯವಶ್ಯಕವಾಗಿದೆ.

ನಿರಂತರವಾಗಿ ಏರಿಕೆ ಆಗುತ್ತಿರುವ ದರ ಹೆಚ್ಚಳ ವ್ಯವಸ್ಥೆ ವಿರದ್ಧ ತುಟ್ಟಿಭತ್ಯೆಯು ಬಫರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಸರ್ಕಾರಿ ಸಿಬ್ಬಂದಿ ಮತ್ತು ಪಿಂಚಣಿದಾರರ ಮನೆಗೆ ಟೇಕ್-ಹೋಮ್ ವೇತನವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ. ವರ್ಷಕ್ಕೆ ಎರಡು ಭಾರಿ ಈ ಡಿಎ ಅನ್ನು ಪರಿಷ್ಕರಿಸಲಾಗುತ್ತದೆ. ಸದ್ಯ ಏಳನೇ ವೇತನ ಅವಧಿ ಅಂತ್ಯವಾಗಿದ್ದು, ನೌಕರರು 8ನೇ ವೇತನ ಆಯೋಗ ಜಾರಿ ಬಗ್ಗೆ ಉತ್ಸುಕರಾಗಿದ್ದಾರೆ.

ಇನ್ನೂ ಕರ್ನಾಟಕದ ಸರ್ಕಾರಿ ನೌಕರರ ಮಟ್ಟಿಗೆ ಏಳನೇ ವೇತನ ಆಯೋಗ ಜಾರಿಗೆ ಕೆಲವು ಸವಾಲುಗಳು ಎದುರಾಗಲಿವೆ. ಆಯೋಗದ ಜಾರಿಗೆ ಬಗ್ಗೆ ಇಂದು ಗುರುವಾರ (ಜುಲೈ 04) ರಂದು ನಡೆಯಲಿರುವ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು, ಸಚಿವರು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಏಳನೇ ವೇತನ ಆಯೋಗದ ಅನುಷ್ಠಾನ ಕುರಿತು ಯಾವುದೇ ನೀರ್ಣಯ ಕೈಗೊಳ್ಳಲಿಲ್ಲ. ಹೀಗಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಶಾಕ್ ಆಗಿದೆ. ಕೇಂದ್ರ ಸರ್ಕಾರಿ ನೌಕರರಿಗೂ ಹದಿನೆಂಟು ತಿಂಗಳ ಬಾಕಿ ಡಿಎ ನೀಡುವ ನಿಟ್ಟಿನಲ್ಲಿ ಮಹತ್ವದ ನೀರ್ಧಾರ ಕೈಗೊಳ್ಳಲಿದ್ದಾರೆ ಎಂಬ ಆಶಾಭಾವನೆ ಮೂಡಿದೆ. ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಇನ್ನೊಂದು ಖುಷಿಯ ವಿಷವೇನೆಂದರೆ, ಈ ವರ್ಷದಲ್ಲಿ ಜನವರಿಯ ತುಟ್ಟಿಭತ್ಯೆ ಏರಿಕೆ ಸರ್ಕಾರ ಘೋಷಣೆ ಮಾಡಿದೆ. ಆದರೆ ನಾವೀಗ ಜುಲೈ ತಿಂಗಳಲ್ಲಿದ್ದೇವೆ. ನಿಯಮದ ಪ್ರಕಾರ, ಆರು ತಿಂಗಳಿಗೊಮ್ಮೆ ಅಂದರೆ ಜನವರಿ ಬಳಿಕ ಜುಲೈ ನಲ್ಲಿ ಮತ್ತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ ಮಾಡಬೇಕು. ಸದ್ಯ ಸರ್ಕಾರಿ ನೌಕರರು ಈ ವರ್ಷದ ಎರಡನೇ ತುಟ್ಟಿಭತ್ಯೆ ಏರಿಕೆ ನಿರೀಕ್ಷೆಯಲ್ಲಿದ್ದಾರೆ. ಜುಲೈ ತಿಂಗಳಲ್ಲಿ ತುಟ್ಟಿಭತ್ಯೆ ಹೆಚ್ಚಳ ಘೋಷಣೆಗೆ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+