7th pay commission: ಡಿಎ ಹೆಚ್ಚಳ, ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ

ನವದೆಹಲಿ, ಅಕ್ಟೋಬರ್ 14: ಕೇಂದ್ರ ಸರ್ಕಾರಿ ನೌಕರರ ಬೇಡಿಕೆಯಾದ 8ನೇ ವೇತನ ಆಯೋಗ ರಚನೆಗೆ ಕೇಂದ್ರದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ. ಆದರೆ, ತುಟ್ಟಿಭತ್ಯೆ (ಡಿಎ) ಹೆಚ್ಚಳದ ಕುರಿತು ಮುಂದಿನ ವಾರ ಘೋಷಣೆಯಾಗುವ ನಿರೀಕ್ಷೆ ಇದ್ದು, ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಬಂಪರ್ ಕೊಡುಗೆ ಸಿಗಲಿದೆ. ಶೇ 3ರಷ್ಟು ಡಿಎ ಹೆಚ್ಚಳವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಡಿಎ ಹೆಚ್ಚಳದಿಂದ ಕೇಂದ್ರ ಸರ್ಕಾರಿ ನೌಕರರು, ನಿವೃತ್ತರು ಸೇರಿದಂತೆ ಸುಮಾರು 1 ಕೋಟಿಗೂ ಅಧಿಕ ಜನರಿಗೆ ಅನುಕೂಲವಾಗಲಿದೆ. ಸದ್ಯದ ಮಾಹಿತಿಗಳ ಪ್ರಕಾರ ಅಕ್ಟೋಬರ್ 25ರಂದು ಡಿಎ ಹೆಚ್ಚಳ ಮಾಡುವ ಕುರಿತು ಕೇಂದ್ರ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಲಿದೆ. ಈ ತಿಂಗಳ ಅಂತ್ಯದಲ್ಲಿ ದೀಪಾವಳಿ ಹಬ್ಬವಿದ್ದು, ಅದಕ್ಕೂ ಮೊದಲೇ ಈ ಘೋಷಣೆಯಾಗಲಿದೆ.

7th Pay Commission Central Employees Will Get Gift Of Bumper Increase In DA

ಸದ್ಯದ ಮಾಹಿತಿ ಪ್ರಕಾರ ಡಿಎ ಶೇ 3ರಷ್ಟು ಏರಿಕೆಯಾಗಲಿದೆ. ಆದ್ದರಿಂದ ಒಟ್ಟು ಡಿಎ ಶೇ 53ರಷ್ಟು ಆಗಲಿದೆ. ಸದ್ಯ ನೌಕರರು ಶೇ 50ರಷ್ಟು ಡಿಎ ಪಡೆಯುತ್ತಿದ್ದಾರೆ. ಡಿಎ ಹೆಚ್ಚಳವಾದರೆ ಹಬ್ಬದ ಸಂದರ್ಭದಲ್ಲಿಯೇ ವೇತನ ಹೆಚ್ಚಳವಾಗಿ ಹಬ್ಬದ ಲಕ್ಷ್ಮೀ ಪೂಜೆ ವೇಳೆಗೆ ಹೆಚ್ಚಿನ ವೇತನ ಉದ್ಯೋಗಿಗಳ ಕೈ ಸೇರಲಿದೆ.

8ನೇ ವೇತನ ಆಯೋಗ ಯಾವಾಗ?; ಕೇಂದ್ರ ಸರ್ಕಾರ ವರ್ಷದಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡುತ್ತದೆ. ಅಕ್ಟೋಬರ್ 25ರಂದು ಡಿಎ ಶೇ 3ರಷ್ಟು ಏರಿಕೆ ಮಾಡುವ ಕುರಿತು ಆದೇಶ ಪ್ರಕಟವಾದರೂ ಸಹ ಅದು ಜುಲೈ 1,2024ರಿಂದಲೇ ಜಾರಿಗೆ ಬರಲಿದೆ. ಸದ್ಯ 7ನೇ ಕೇಂದ್ರ ವೇತನ ಆಯೋಗದ ಶಿಫಾರಸಿನ ಅನ್ವಯ ಡಿಎ ಹೆಚ್ಚಳ ಮಾಡಲಾಗುತ್ತದೆ.

ಜನವರಿ 1 ಮತ್ತು ಜುಲೈ 1ರಿಂದ ಜಾರಿಗೆ ಬರುವಂತೆ ಡಿಎ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸುತ್ತದೆ. ಈ ವರ್ಷದ ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆ ಎದುರಾಗುವ ಮೊದಲೇ ಡಿಎ ಅನ್ನು ಶೇ 4ರಷ್ಟು ಏರಿಕೆ ಮಾಡಲಾಗಿತ್ತು, ಆದ್ದರಿಂದ ಒಟ್ಟು ಡಿಎ ಶೇ 50ರಷ್ಟಾಗಿತ್ತು.

ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಿದ ಬಳಿಕ ರಾಜ್ಯ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ ಡಿಎ ಹೆಚ್ಚಳ ಮಾಡಲಿವೆ. ಕೇಂದ್ರ ಸರ್ಕಾರ ಎಷ್ಟು ಡಿಎ ಏರಿಕೆ ಮಾಡಲಿದೆ? ಎಂಬುದನ್ನು ನೋಡಿಕೊಂಡು ರಾಜ್ಯ ಸರ್ಕಾರಗಳು ಡಿಎ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸುತ್ತವೆ.

ಕೇಂದ್ರ ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆ 8ನೇ ವೇತನ ಆಯೋಗದ ರಚನೆ. ಪ್ರತಿ 10 ವರ್ಷಗಳಿಗೊಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡಬೇಕಿದೆ. 2014ರಲ್ಲಿ 7ನೇ ವೇತನ ಆಯೋಗ ರಚನೆ ಮಾಡಲಾಗಿತ್ತು. ಈ ಆಯೋಗದ ಶಿಫಾರಸು ಅನ್ವಯವೇ ಈಗ ನೌಕರರ ವೇತನ, ಭತ್ಯೆಗಳು ನಿರ್ಧರಿತವಾಗಿದೆ.

2024ರಲ್ಲಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಿದರೆ ಅದು ನೀಡುವ ವರದಿ 2026ರಲ್ಲಿ ಜಾರಿಗೆ ಬರುತ್ತದೆ. ಆಗ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳವಾಗುತ್ತದೆ. ಆದರೆ ವೇತನ ಆಯೋಗ ರಚನೆ ಮಾಡುವ ಕುರಿತು ಸರ್ಕಾರ ಇನ್ನೂ ಸಹ ಯಾವುದೇ ತೀರ್ಮಾನ ಮಾಡಿಲ್ಲ. 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿಯೂ ಈ ಕುರಿತು ಘೋಷಣೆಯನ್ನು ಮಾಡಿಲ್ಲ.

ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಕೆಲವು ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಮಾತನಾಡುವಾಗ 8ನೇ ವೇತನ ಆಯೋಗದ ರಚನೆ ತೀರ್ಮಾನ ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಈ ಮಾದರಿ ಪ್ರಸ್ತಾವನೆಗಳು ಬಂದಿಲ್ಲ, ಬಂದರೆ ಅದನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+