7th Pay Commission: ಸರ್ಕಾರಿ ನೌಕರರಿಗೆ 'ದಸರಾ ಬಂಪರ್': RMA ಹೆಚ್ಚಿಸಿ ಘೋಷಣೆ, ರಾಜ್ಯವಾರು ಭತ್ಯೆಪಟ್ಟಿ ಇಲ್ಲಿದೆ

ನವದೆಹಲಿ, ಅಕ್ಟೋಬರ್ 01: ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದಡಿ ಈಗಾಗಲೇ ಜನವರಿ ತುಟ್ಟಿಭತ್ಯೆ (DA Hike) ಪಡೆದಿದಿದ್ದಾರೆ. ಅಂದು ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಆಗಿತ್ತು. ಇದರಿಂದ 'ಡಿಎ' ಪ್ರಮಾಣ ಶೇಕಡಾ 50 ತಲುಪುತ್ತಿದ್ದಂತೆ ಸ್ವಯಂ ಪ್ರೇರಿತವಾಗಿ ನೌಕರರ ವಿವಿಧ 13 ಭತ್ಯೆಗಳ ಪರಿಷ್ಕರಣೆಗೊಂಡಿವೆ. ಇದೀಗ ಮತ್ತೊಂದು ಹೊಸ ಭತ್ಯೆಯನ್ನು ಪರಿಷ್ಕರಣೆ ಮಾಡುವ ಮೂಲಕ ಕೇಂದ್ರ ನೌಕರರಿಗೆ ಸರ್ಕಾರ ದಸರಾ ಬಂಪರ್ ನೀಡಿದೆ.

ಕೇಂದ್ರ ಸರ್ಕಾರುವ 7ನೇ ವೇತನ ಆಯೋಗದಡಿ ಅರ್ಹ ಕೇಂದ್ರ ಸರ್ಕಾರಿ ನೌಕರ ಫಲಾನುಭವಿಗಳಿಗೆ 'ರಸ್ತೆ ಮೈಲೇಜ್ ಭತ್ಯೆ' (RMA Hike) ಎಂದು ಕರೆಯಲ್ಪಡುವ ಮತ್ತೊಂದು ಭತ್ಯೆಯನ್ನು ಪರಿಷ್ಕರಣೆ ಮಾಡಿದೆ.

7th Pay Commission Central Announces RMA Hike for Government Employees know Statewise Hike list

ಏಳನೇ ವೇತನ ಆಯೋಗದಡಿ ದೇಶದಲ್ಲಿ ವಾಸಿಸುವ ಕೇಂದ್ರ ಸರ್ಕಾರಿ ಉದ್ಯೋಗಿಗಳು ಅವರು ಬಳಸುವ ಸಾರಿಗೆ ವಾಹನದ ಪ್ರಕಾರ, ವಾಸಸ್ಥಳದ ಆಧಾರದಲ್ಲಿ ಅವರಿಗೆ ಕೇಂದ್ರವು ರಸ್ತೆ ಮೈಲೇಜ್ ಭತ್ಯೆಗೆ (Road Mailage Allowance hike) ನೀಡುತ್ತದೆ. ಈ RMA ಭತ್ಯೆ ಎಲ್ಲ ಕೇಂದ್ರ ಸರ್ಕಾರಿ ನೌಕರರಿಗೆ ಲಭ್ಯವಿರುವುದಿಲ್ಲ. ವಿವಿಧ ಹುದ್ದೆಗಳ ಅರ್ಹ ನೌಕರರಿಗೆ ವಿವಿಧ ಭತ್ಯೆಗಳು ಮಾತ್ರವೇ ಅನ್ವಯವಾಗುತ್ತವೆ. ಅವರ ಆಯಾ ನಿಮಯಗಳ ಭತ್ಯೆ ಹೆಚ್ಚಳ ಪಡೆಯುತ್ತಾರೆ.

ಸದ್ಯ ಪರಿಷ್ಕರಣೆ ಮಾಡಿರುವ 'ರಸ್ತೆ ಮೈಲೇಜ್ ಭತ್ಯೆ'ಯು ಅನ್ವಯಿಸುತ್ತವೆ ಮತ್ತು ಪ್ರತಿ ಕೇಂದ್ರ ಸರ್ಕಾರಿ ಉದ್ಯೋಗಿಗೆ ಎಲ್ಲಾ ಭತ್ಯೆಗಳು ಲಭ್ಯವಿರುವುದಿಲ್ಲ. ಭಾರತೀಯ ಸೇನೆಯಲ್ಲಿರುವ ಅಧಿಕಾರಿಗಳಿಗೆ ಈ 'ರಸ್ತೆ ಮೈಲೇಜ್ ಭತ್ಯೆ' (AMA Hike)ಪರಿಷ್ಕರಣೆ ಲಾಭ ಸಿಗುವಂತೆ ಮಾಡಿದೆ ಎಂದು 'ಫೈನಾನ್ಷಿಯಲ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

7th Pay Commission Central Announces RMA Hike for Government Employees know Statewise Hike list

ಕೇಂದ್ರ ನೌಕರರ ತುಟ್ಟಿಭತ್ಯೆ (DA Hike)ಪ್ರಮಾಣ ಶೇಕಡಾ 50 ತಲುಪುತ್ತಿದ್ದಂತೆ, ನಿಗದಿತ ಪ್ರಾಧಿಕಾರವು ನೌಕರರ ಇತರರ ಭತ್ಯೆಗಳಂತೆ ಈ RMA ಅನ್ನು ಪರಿಷ್ಕರಣೆ ಮಾಡಿ ದರ ಅನುಮೋದಿಸಿದೆ. ಹಾಗಾದರೆ ದೇಶದ ಎಲ್ಲ ರಾಜ್ಯಗಳಲ್ಲಿರುವ ಅರ್ಹರಿಗೆ ಪ್ರತಿ ಕಿಲೋ ಮೀಟರ್‌ಗೆ ಎಷ್ಟು RMA ಹೆಚ್ಚಳ ಪಡೆಯುತ್ತಾರೆ ಎಂಬ ಮಾಹಿತಿ, ಪಟ್ಟಿ, ಅಂಕಿಸಂಖ್ಯೆ ಇಲ್ಲಿದೆ.

RMA ಹೆಚ್ಚಳದ ರಾಜ್ಯವಾರು ಮಾಹಿತಿ, ಪಟ್ಟಿ

* ದೆಹಲಿ ₹22/- ಪ್ರತಿ ಕಿಮೀ

* ಕರ್ನಾಟಕ ₹23/- ಪ್ರತಿ ಕಿಮೀ

* ಕೇರಳ ₹20/- ಪ್ರತಿ ಕಿ.ಮೀ

* ಅಂಡಮಾನ್ ಮತ್ತು ನಿಕೋಬಾರ್ ₹26/- ಪ್ರತಿ ಕಿಮೀ

* ಆಂಧ್ರ ಪ್ರದೇಶ ₹24/- ಪ್ರತಿ ಕಿಮೀ

* ಅರುಣಾಚಲ ಪ್ರದೇಶ ₹30/- ಪ್ರತಿ ಕಿ.ಮೀ

* ಚಂಡೀಗಢ ₹18/- ಪ್ರತಿ ಕಿಮೀ

* ಛತ್ತೀಸ್‌ಗಢ ₹20/- ಪ್ರತಿ ಕಿ.ಮೀ

* ಗೋವಾ ₹18/- ಪ್ರತಿ ಕಿಮೀ

* ಅಸ್ಸಾಂ ₹30/- ಪ್ರತಿ ಕಿ.ಮೀ

* ಬಿಹಾರ ₹28/- ಪ್ರತಿ ಕಿಮೀ

* ಗುಜರಾತ್ ₹18/- ಪ್ರತಿ ಕಿಮೀ

* ಹರಿಯಾಣ ₹22/- ಪ್ರತಿ ಕಿಮೀ

* ಮಹಾರಾಷ್ಟ್ರ ₹20/- ಪ್ರತಿ ಕಿ.ಮೀ

* ಮಣಿಪುರ ₹30/- ಪ್ರತಿ ಕಿ.ಮೀ

* ಮೇಘಾಲಯ ₹20/- ಪ್ರತಿ ಕಿ.ಮೀ

* ಹಿಮಾಚಲ ಪ್ರದೇಶ ₹22/- ಪ್ರತಿ ಕಿಮೀ

* ಜಮ್ಮು ಮತ್ತು ಕಾಶ್ಮೀರ ₹20/- ಪ್ರತಿ ಕಿ.ಮೀ

* ಜಾರ್ಖಂಡ್ ₹28/- ಪ್ರತಿ ಕಿಮೀ

* ಲೇಹ್ ಮತ್ತು ಲಡಾಖ್ ₹20/- ಪ್ರತಿ ಕಿ.ಮೀ

* ಮಧ್ಯಪ್ರದೇಶ ₹ 22/- ಪ್ರತಿ ಕಿಮೀ

* ಮಿಜೋರಾಂ ₹30/- ಪ್ರತಿ ಕಿ.ಮೀ

* ನಾಗಾಲ್ಯಾಂಡ್ ₹30/- ಪ್ರತಿ ಕಿ.ಮೀ

* ಒಡಿಶಾ ₹18/- ಪ್ರತಿ ಕಿಮೀ

* ಪುದುಚೇರಿ ₹19/- ಪ್ರತಿ ಕಿಮೀ

* ತಮಿಳುನಾಡು ₹24/- ಪ್ರತಿ ಕಿಮೀ

* ಉತ್ತರಾಖಂಡ ₹21/- ಪ್ರತಿ ಕಿಮೀ

* ಪಶ್ಚಿಮ ಬಂಗಾಳ ₹19/- ಪ್ರತಿ ಕಿಮೀ

* ತೆಲಂಗಾಣ ₹17/- ಪ್ರತಿ ಕಿಮೀ

* ತ್ರಿಪುರ ₹15/- ಪ್ರತಿ ಕಿಮೀ

* ಪಂಜಾಬ್ ₹ 12/- ಪ್ರತಿ ಕಿಮೀ

* ರಾಜಸ್ಥಾನ ₹19/- ಪ್ರತಿ ಕಿಮೀ

* ಸಿಕ್ಕಿಂ ₹26/ ಪ್ರತಿ ಕಿಮೀ

* ಉತ್ತರ ಪ್ರದೇಶ ₹20/- ಪ್ರತಿ ಕಿ.ಮೀ

ಸದ್ಯ ಕೇಂದ್ರ ಸರ್ಕಾರಿ ನೌಕರರು ಇದೇ ವರ್ಷ 2024ರ ಜನವರಿಯ ತುಟ್ಟಿಭತ್ಯೆ ಏರಿಕೆಯನ್ನು ಮಾರ್ಚ್ ವೇಳೆಗೆ ಪಡೆದಿದ್ದಾರೆ. ಅವರು ಜುಲೈ ತುಟ್ಟಿಭತ್ಯೆಗೆ ಕಾಯುತ್ತಿದ್ದಾರೆ. ಇನ್ನು ವಿವಿಧ ಭತ್ಯೆಗಳು ಶೇಕಡಾ 25ರಷ್ಟು ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ 01.01.2024ಗೆ ಅನ್ವಯವಾಗುವಂತೆ ಸುತ್ತೋಲೆ ಹೊರಡಿಸಿತ್ತು.

ಡಿಎ 50% ತಲುಪಿದರೆ ಯಾವೆ ಭತ್ಯೆಗಳು ಏರಿಕೆ ಆಗುತ್ತವೆ?

ಇಲಾಖೆ ಸುತ್ತೋಲೆಯ ಪ್ರಕಾರ, ಮನೆ ಬಾಡಿಗೆ ಭತ್ಯೆ (HRA), ಮಕ್ಕಳ ಶಿಕ್ಷಣ ಭತ್ಯೆ, ಸಾರಿಗೆ ಭತ್ಯೆ, ವಿಕಲಾಂಗ ಮಹಿಳೆಯರ ಮಕ್ಕಳಿಗೆ ವಿಶೇಷ ಭತ್ಯೆ, ಹೋಟೆಲ್ ಸೌಕರ್ಯಗಳು, ಪ್ರಯಾಣ ಸೌಲಭ್ಯ ಶುಲ್ಕ ಮರುಪಾವತಿಯಂತ ಹಲವು ಭತ್ಯೆಗಳು ಏರಿಕೆ ಆಗುತ್ತವೆ. ಎಲ್ಲವು ಎಲ್ಲ ವರ್ಗದ ಉದ್ಯೋಗಿಗಳಿಗೆ ಸಿಗುವುದಿಲ್ಲ. ಆಯಾ ಅರ್ಹ ಸರ್ಕಾರಿ ಉದ್ಯೋಗಿಗಳು ನಿಗದಿತ ಭತ್ಯೆ ಪಡೆಯಲು ಅರ್ಹರಿರುತ್ತಾರೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+