ಭಾರತದಲ್ಲಿ ತೈಲ ದರ ಯಾಕೆ ಇಳಿಯುತ್ತಿಲ್ಲ? ಇಲ್ಲಿದೆ ಉತ್ತರ

Subscribe to Oneindia Kannada

ನವದೆಹಲಿ, ಫೆಬ್ರವರಿ, 18: ಪ್ರತಿ ಲೀಟರ್‌ ಪೆಟ್ರೋಲ್‌ ಬುಧವಾರ ಮಧ್ಯರಾತ್ರಿಯಿಂದ 32 ಪೈಸೆ ಕಡಿಮೆ ಆಗಿದ್ದರೆ, ಡೀಸೆಲ್ ಲೀಟರ್‌ಗೆ 28 ಪೈಸೆ ಏರಿಕೆಯಾಗಿದೆ. ತೈಲ ದರ ಪರಿಷ್ಕರಣೆ ಹಿನ್ನಲೆಯಲ್ಲಿ ಹೊಸ ದರ ಜಾರಿಯಾಗಿದೆ. ಇದು ಸುದ್ದಿ....

ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ, ಡಾಲರ್ ಎದುರು ರೂಪಾಯಿ ಸುಧಾರಿಸಿದೆ. ಇದು ಸತತ ಆರನೇ ಬಾರಿ ಇಳಿಕೆಯಾಗುತ್ತಿರುವುದು ಎಂಬ ಕಾರಣಗಳನ್ನು ನೀಡುತ್ತೇವೆ.[ಲೀಟರ್ ಪೆಟ್ರೋಲ್ ಗೆ 23 ರು. ಕೊಟ್ಟರೆ ಸಾಕು!]

ಇಲ್ಲೆ ಇರುವುದು ಮಜಾ.. ಇಳಿಕೆಯಾಗಲು ಕಾರಣಗಳು ಸರಿ.. ಆದರೆ ಇಷ್ಟು ಕಡಿಮೆ ಪ್ರಮಾಣದಲ್ಲಿ ಇಳಿಕೆಯಾಗಲು ಎನು ಕಾರಣ? ಅಬಕಾರಿ ಸುಂಕ ಏರಿಕೆ ಮಾಡಿದ್ದರಿಂದ ಹೆಚ್ಚಿನ ಇಳಕೆಯಾಗಿಲ್ಲ ಎಂದು ಸಾಗ ಹಾಕಲು ಸಾಧ್ಯವಿದೆ.

ನಿಜಕ್ಕೂ ಅಂತಾರಾಷ್ಟ್ರೀಯ ಮಾರುಟ್ಟೆಯಲ್ಲಿ ಏನು ನಡೆಯುತ್ತಿದೆ? ತೈಲ ಮಾರುಕಟ್ಟೆ ಮೇಲೆ ಯಾರ ಹಿಡಿತವಿದೆ? ಯಾವ ಹಾದಿಯಲ್ಲಿ ಸಾಗುತ್ತಿದೆ? ಎಂಬುದಕ್ಕೆ ಉತ್ತರ ಕಂಡುಕೊಂಡರೆ ನಮಗೆ ಹೊಸ ಸತ್ಯ ಗೋಚರವಾಗುತ್ತದೆ. ಇಂಡಿಯಾ ಸ್ಪೆಂಡ್ ಮಾಡಿರುವ ಸಮೀಕ್ಷೆ ಏನು ಹೇಳುತ್ತದೆ ಎಂಬುದನ್ನು ನೋಡಿಕೊಂಡು ಬರೋಣ,,,

ಶೇ. 75 ಇಳಿಕೆಯಾಗಿದೆ

ಶೇ. 75 ಇಳಿಕೆಯಾಗಿದೆ

ಜುಲೈ 2014ರಲ್ಲಿ ಬ್ಯಾರಲ್ ಕಚ್ಚಾ ತೈಲಕ್ಕೆ 106 ಡಾಲರ್ ನೀಡಬೇಕಾಗಿತ್ತು. ಆದರೆ ಇಂದು ಬ್ಯಾರಲ್ ಕಚ್ಚಾ ತೈಲಕ್ಕೆ ಕೇವಲ 26 ಡಾಲರ್ ಕೊಟ್ಟರೆ ಸಾಕು. ಅಂದರೆ ಬರೋಬ್ಬರಿ ಶೇ. ಶೇ. 75 ಇಳಿಕೆಯಾಗಿದೆ.

ಉತ್ಪಾದನೆ ಹೆಚ್ಚಿಸಿದ ಅಮೆರಿಕ

ಉತ್ಪಾದನೆ ಹೆಚ್ಚಿಸಿದ ಅಮೆರಿಕ

ವಿಶ್ವದ ಹಿರಿಯಣ್ಣ ಅಮೆರಿಕ ತೈಲ ಉತ್ಪಾದನೆಯಲ್ಲಿ ಸ್ವಾಯುತ್ತತೆ ಸಾಧಿಸಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆ ದೊಡ್ಡ ಗ್ರಾಹಕನನ್ನು ಕಳೆದುಕೊಂಡಿತು.

ಅಬಕಾರಿ ಸುಂಕ ಹೆಚ್ಚಳ

ಅಬಕಾರಿ ಸುಂಕ ಹೆಚ್ಚಳ

ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ತೀವ್ರ ಇಳಿಕೆ ಕಂಡರೆ ಇತ್ತ ಬೊಕ್ಕಸವನ್ನು ತುಂಬಿಸಿಕೊಳ್ಳಲು ಮುಂದಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಸೋಇಚ್ಛೆ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದವು.

ನಾವು ಹೆಚ್ಚಿಗೆ ಕೊಡಬೇಕು

ನಾವು ಹೆಚ್ಚಿಗೆ ಕೊಡಬೇಕು

ನಿಜ, ಉಳಿದ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಶೇ.80 ಕ್ಕೂ ಅಧಿಕ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಉಳಿದ ದೇಶಗಳು ನೀಡುವುದಕ್ಕಿಂತ ಕೊಂಚ ಜಾಸ್ತಿನೇ ನೀಡುತ್ತಿದ್ದೇವೆ.

ಆಯಿಲ್ ಮಾರ್ಕೆಟಿಂಗ್ ಕಂಪನಿಗಳು

ಆಯಿಲ್ ಮಾರ್ಕೆಟಿಂಗ್ ಕಂಪನಿಗಳು

ಭಾರತದ ಮಾರುಕಟ್ಟೆ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಹಿಂದುಸ್ತಾನ್ ಪೆಟ್ರೊಲಿಯಂ, ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ನಿಯಂತ್ರಣದಲ್ಲಿವೆ ಎಂಬ ಅಂಶವು ಪ್ರಮುಖವಾಗುತ್ತದೆ.

ಅಬಕಾರಿ ಸುಂಕ

ಅಬಕಾರಿ ಸುಂಕ

ಕಳೆದ ಮೂರು ತಿಂಗಳನ್ನು ಲೆಕ್ಕಕ್ಕೆ ಇಟ್ಟುಕೊಂಡು ಹೇಳುವುದಾರೆ ಪೆಟ್ರೋಲ್ ಮೇಲೆ ಶೇ. 34 ಮತ್ತು ಡೀಸೆಲ್ ಮೇಲೆ ಶೇ. 140 ರಷ್ಟು ಅಬಕಾರಿ ಸುಂಕ ಏರಿಕೆಯಾಗಿದೆ.

ಹಣದುಬ್ಬರ

ಹಣದುಬ್ಬರ

ನಿಯಂತ್ರಣಕ್ಕೆ ಬಾರದ ಹಣದುಬ್ಬರ, ಷೇರು ಮಾರುಕಟ್ಟೆ ಅನಿಶ್ಚಿತತೆ ಸಹ ತೈಲ ದರ ಇಳಕೆಯಾಗಲು ಬಿಟ್ಟಿಲ್ಲ. ಹಾಗಾಗಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಾವು ಅತಿ ಹೆಚ್ಚಿನ ದರವನ್ನು ತೆರುತ್ತಿದ್ದೇವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Though global oil prices pulled back a little from their earlier plunge, Indian Oil Corp moved contradictorily on Wednesday, cutting petrol price by 32 paise a litre, while increasing diesel price by 28 paise, it was announced.
Please Wait while comments are loading...