ಕಳೆದ 7 ತಿಂಗಳಲ್ಲಿ 70 ಯುವಕರು ಉಗ್ರಗಾಮಿ ಸಂಘಟನೆಗಳಿಗೆ ಸೇರ್ಪಡೆ

ಶ್ರೀನಗರ, ಆಗಸ್ಟ್ 14 : ಜಮ್ಮು ಮತ್ತು ಕಾಶ್ಮೀರ ಕಣುವೆಯಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಸೇರುವ ಯುವಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.

ಕಳೆದ ಏಳು ತಿಂಗಳ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ 70 ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

70 Kashmiri youths join terrorist ranks in seven months: Official

ಈ ಪೈಕಿ ಬಹುತೇಕರು ದಕ್ಷಿಣ ಕಾಶ್ಮೀರದ ಪುಲ್ವಾಮಾ, ಶೋಪಿಯಾನ್, ಕುಲ್ಗಾಮ್ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಇದರಿಂದ ಈ ಸ್ಥಳಗಳಲ್ಲಿಯೇ ಅತಿಹೆಚ್ಚಿನ ಸಂಖ್ಯೆ ಎನ್‌ ಕೌಂಟರ್‌ಗಳು ಹಾಗೂ ದಾಳಿಗಳು ನಡೆದಿವೆ.

ಉಗ್ರಗಾಮಿ ಚಟುವಟಿಕೆಗಳು ಹೆಚ್ಚಲು ಪುಲ್ವಾಮಾದ ಭೌಗೋಳಿಕ ಸ್ಥಿತಿಯೂ ಇದಕ್ಕೆ ಕಾರಣವಾಗಿದ್ದು, ಪುಲ್ವಾಮಾವು ಸಾಕಷ್ಟು ಪ್ರಮಾಣದ ತೋಟಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದೆ. ಹೀಗಾಗಿ ಉಗ್ರರು ಅಡಗಿಕೊಳ್ಳಲು ಪ್ರಶಸ್ತ ತಾಣವಾಗಿದೆ.

2014ರಿಂದ ಭಯೋತ್ಪಾದಕ ಸಂಘಟನೆಗಳಿಗೆ ಸೇರುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದ್ದು, 2011 ರಿಂದ 2013ರ ವರೆಗಿನ ಅವಧಿಯಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಸೇರುವವರ ಸಂಖ್ಯೆ ಕಡಿಮೆ ಇತ್ತು.

2014ರಿಂದ ಮತ್ತೆ ಹೆಚ್ಚಾಗಿದೆ. 2010ರಲ್ಲಿ 54, 2011- 54, 2012- 21, 2013- 16, 2014- 53 ಯುವಕರು, 2015-66 ಮತ್ತು 2016ರಲ್ಲಿ 88 ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+