• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಪ್ಪೋ F7 ಯಾಕೆ ಖರೀದಿಸಬೇಕು; ಇಲ್ಲಿವೆ 7 ಕಾರಣ

By ಒನ್ಇಂಡಿಯಾ ಪ್ರತಿನಿಧಿ
|

ಹೊಚ್ಚ ಹೊಸ, ಅಗಾಧ ಶಕ್ತಿಯಿರುವ ಐಷಾರಾಮಿ ಮೊಬೈಲ್ ಫೋನ್ ವೊಂದನ್ನು ಒಪ್ಪೋ ಬಿಡುಗಡೆ ಮಾಡಿದೆ. ಒಪ್ಪೋ F7 26, 2018ರಂದು ಬಿಡುಗಡೆ ಆಗಿದೆ. ಮತ್ತು ನಾವೆಲ್ಲ ಬೆರಗಾಗಿದ್ದೇವೆ. ಆ ಮೊಬೈಲ್ ನ ಸೊಗಸಾದ ಡಿಸೈನ್, ಸ್ಕ್ರೀನ್, ಜತೆಗೆ ಒಂದು ರಾಶಿಯಷ್ಟಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್), ಅದಕ್ಕೆ ಪೂರಕವಾದ ಅಪ್ಲಿಕೇಷನ್ ಗಳು.

ಮತ್ತೆ ಯಾವಾಗಿನಂತೆ ಒಪ್ಪೋ ತನ್ನದೇ ದಾಖಲೆಗಳು ಮುರಿಯುತ್ತಾ ಮೀರುತ್ತಾ ಸ್ಮಾರ್ಟ್ ಫೋನ್ ವಲಯದಲ್ಲೇ ತಾನೇಕೆ 'ಸೆಲ್ಫಿ ಎಕ್ಸ್ ಪರ್ಟ್ ಮತ್ತು ಲೀಡರ್' ಅನ್ನೋದನ್ನು ಸಾಬೀತು ಮಾಡಿದೆ. ಒಪ್ಪೋ F7 ಬಗ್ಗೆ ಇನ್ನಷ್ಟು ಆಳವಾದ ಹಾಗೂ ಅದರಲ್ಲಿ ಮಾತ್ರ ಇರುವ ಫೀಚರ್ ಗಳ ಬಗ್ಗೆ ತಿಳಿದುಕೊಳ್ಳೋಣ.

ಅದರ ಜತೆಗೆ ಈ ವರೆಗೆ ಬಂದಿರುವ ಸ್ಮಾರ್ಟ್ ಫೋನ್ ಗಳ ಪೈಕಿಯೇ ಇದು ಹೇಗೆ ಬೆಸ್ಟ್ ಮೊಬೈಲ್ ಫೋನ್ ಆಗಿ ಒಪ್ಪೋ F7 ಮೂಡಿಬಂದಿದೆ. ನಾವು ನಿಮಗಾಗಿ 7 ಅಂಶಗಳನ್ನು ಪಟ್ಟಿ ಮಾಡಿದ್ದೇವೆ. ಹೊಸ ಒಪ್ಪೋ F7 ಬಗ್ಗೆ ತುಂಬ ಆಳ-ಅಗಲವಾದ ಪರಿಚಯ ಮಾಡಿಕೊಡುತ್ತೇವೆ. ಈ ಕಾರಣಗಳೇ ಸಾಕು, ಒಪ್ಪೋ F7 ಅನ್ನು ಆದಷ್ಟು ಬೇಗ ನೀವು ಖರೀದಿಸಬೇಕು ಅನಿಸುವಂತೆ ಮಾಡುತ್ತದೆ. ಇನ್ನೇಕೆ ತಡ, ಮುಂದೆ ಓದಿ.

7 Reasons Why You Should Own the OPPO F7 Right Away

1 ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ: ಒಪ್ಪೋ, ಅದರ ಆರಂಭದ ದಿನಗಳಿಂದಲೂ ಸ್ಮಾರ್ಟ್ ಫೋನ್ ಗಳ ಪೈಕಿಯೇ ಅದ್ಭುತ ಸೆಲ್ಫಿ ಎಕ್ಸ್ ಪರ್ಟ್ ಎಂದು ಗುರುತಿಸಿಕೊಂಡಿದೆ. 2017ರಲ್ಲಿ ಒಪ್ಪೋ ಮೊದಲ ಬಾರಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಒಳಗೊಂಡ ಸೆಲ್ಫಿ ತಂತ್ರಜ್ಞಾನ ಪರಿಚಯಿಸಿತ್ತು. ಅದು ಒಂದು ಫೋಟೋದ ಹಲವು ಸಾಧ್ಯತೆಗಳು ಹಾಗೂ ಚೆಂದಗಾಣಿಸಲು ಬೇಕಾದ ರೀತಿಯನ್ನು ಗುರುತಿಸುತ್ತದೆ. ಜತೆಗೆ ಅದರ ಸೌಂದರ್ಯ ಹೆಚ್ಚಿಸಲು ಉಚಿತ ಹಾಗೂ ಅಗತ್ಯ ಮಾರ್ಪಾಟು ಮಾಡುತ್ತದೆ.

ಸೆಲ್ಫಿ ತೆಗೆದುಕೊಳ್ಳುವ ಕಲೆ ಇಲ್ಲಿ ಒಂದು ಮಟ್ಟ ಮೇಲಕ್ಕೆ ಏರಿದೆ. ಹೊಸ F7ನಲ್ಲಿ 25 ಮೆಗಾಪಿಕ್ಸೆಲ್ ನ ಫ್ರಂಟ್ ಕ್ಯಾಮೆರಾ ಇದೆ. ಅದರ ಜತೆಗೆ ರಿಯಲ್ ಟೈಮ್ ಹೈ ಡೆನಾಮಿಕ್ ರೇಂಜ್ (ಎಚ್ ಡಿಆರ್) ತಂತ್ರಜ್ಞಾನವಿದೆ. ಇದಕ್ಕಿಂತ ಹೆಚ್ಚಾಗಿ ಅದರೊಳಗಿರುವ ಎಐ ಬ್ಯೂಟಿ 2.0 ತಂತ್ರಜ್ಞಾನವು ತುಂಬ ಸೂಕ್ಷ್ಮವಾಗಿ ಗುರುತಿಸಿ ಮತ್ತು ಅಷ್ಟೇ ಸೂಕ್ಷ್ಮವಾಗಿ ಮುಖದ ಪ್ರತಿ ಲಕ್ಷಣವನ್ನು ಪ್ರತ್ಯೇಕವಾಗಿ ಚೆಂದಗಾಣಿಸುತ್ತದೆ. ಒಂದು ಗುಂಪಿನ ಸೆಲ್ಫಿ ತೆಗೆದರೆ ಹೆಣ್ಣುಮಕ್ಕಳಿಗೆ ಹಾಗೂ ಗಂಡುಮಕ್ಕಳಿಗೆ ಪ್ರತ್ಯೇಕವಾಗಿ ಸೌಂದರ್ಯ ಹೆಚ್ಚುವಂತೆ ಮಾಡಬಲ್ಲದು.

ಇದರ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನ ಲೆಕ್ಕಾಚಾರಗಳು ಬಳಕೆದಾರರು ಸೌಂದರ್ಯ ಹೆಚ್ಚಿಸುವ ವಿಚಾರದಲ್ಲಿ ಏನನ್ನು ಆದ್ಯತೆಯಾಗಿ ನೋಡ್ತಾರೆ ಎಂಬುದನ್ನು ತಿಳಿದುಕೊಳ್ಳುತ್ತದೆ. ಯಾವುದೇ ಫೋಟೋವನ್ನು ಎಡಿಟ್ ಮಾಡಿದ ರೀತಿ ಗಮನಿಸಿ, ಆ ನಂತರದ ಫೋಟೋಗಳಿಗೆ ತಾನಾಗಿಯೇ ಅಂಥ ಮಾರ್ಪಾಟನ್ನು ಮಾಡುತ್ತದೆ. ಆರ್ಟಿಫಿಷಿಯಲ್ ಇಂಟಲೆಜೆನ್ಸ್ ನ ಅವಕಾಶಗಳನ್ನು ಪುನರ್ ವ್ಯಾಖ್ಯಾನಿಸಿ, ಸ್ಮಾರ್ಟ್ ಫೋನ್ ನಲ್ಲಿ ಅದನ್ನು ತರುತ್ತಿರುವುದಲ್ಲವೆ?

7 Reasons Why You Should Own the OPPO F7 Right Away

2 ಸೂಪರ್ ಫುಲ್ ಸ್ಕೀನ್: ಸದ್ಯಕ್ಕಿರುವ ಸ್ಮಾರ್ಟ್ ಫೋನ್ ಗಳಲ್ಲಿಯೇ ಹಲವು ಮೊದಲುಗಳನ್ನು ಒಪ್ಪೋ F7 ಮಾದರಿ ಮೊಬೈಲ್ ಫೋನ್ ನಲ್ಲಿ ಗಮನಿಸಬಹುದು. ಒಪ್ಪೋ ಸುಧಾರಿತ 6.2 ಇಂಚಿನ, ಪುಲ್ ಎಚ್ ಡಿ + ಸೂಪರ್ ಫುಲ್ ಸ್ಕ್ರೀನ್ ಯುನಿಬಾಡಿಯಲ್ಲಿ ಒಳಗೊಂಡಿದೆ. ದೊಡ್ಡ ಸ್ಕ್ರೀನ್ ಅಂದರೆ ಸಹಜವಾಗಿ ದೊಡ್ಡ ಅನುಭವ. ಅದರಲ್ಲೂ ಆಟ ಆಡುವಾಗ, ಓದುವಾಗ ತುಂಬ ಒಲ್ಳೆ ಅನುಭವ. ಜತೆಗೆ ಒಂದೇ ಕೈನಲ್ಲಿ ಮೊಬೈಲ್ ಫೋನ್ ಹಿಡಿದುಕೊಳ್ಳಬಹುದು. 2280X1080 ರೆಸಲ್ಯೂಷನ್ ಸದ್ಯಕ್ಕಿರುವ ಸ್ಮಾರ್ಟ್ ಫೋನ್ ಗಳಲ್ಲೇ ಅತಿ ಹೆಚ್ಚಿನ ರೆಸಲ್ಯೂಷನ್ ಇರುವಂಥದ್ದು.

3 ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿ ಫೋಟೋ ಮ್ಯಾನೇಜ್ ಮೆಂಟ್ ಪುನರ್ ವ್ಯಾಖ್ಯಾನ: ಒಪ್ಪೋ F7 ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿ ಗುಂಪು ಫೋಟೋಗಳಲ್ಲಿ ಮುಖಗಳನ್ನು, ಸ್ಥಳಗಳನ್ನು, ದೃಶ್ಯಗಳನ್ನು ಗುರುತಿಸಿ ಅನುಕೂಲಕ್ಕೆ ತಕ್ಕಂತೆ ಆಲ್ಬಮ್ ಗಳನ್ನು ರೂಪಿಸುತ್ತದೆ. ಸೆಲ್ಫಿಗಳಲ್ಲಿ ಹಾಗೂ ಆಲ್ಬಮ್ ಗಳಲ್ಲಿ ಮಾತ್ರವಲ್ಲ. ಒಪ್ಪೋ F7 ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸ್ಪ್ಲಿಟ್ ಸ್ಕ್ರೀನ್ ಗೂ ಬಳಸುತ್ತದೆ. ಅಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಅಪ್ಲಿಕೇಷನ್ ಇಡಬಹುದು.

ಅದು ತುಂಬ ಬುದ್ಧಿವಂತಿಕೆಯಿಂದ ಮುಖ್ಯ ಸಭೆಗಳು, ಕಾರ್ಯಕ್ರಮಗಳು, ಪ್ರವಾಸ ಅಥವಾ ಸಿನಿಮಾ ಟಿಕೆಟ್, ಮತ್ತು ಇ ಕಾಮರ್ಸ್ ನಲ್ಲಿ ಮಾಡಿದ ಆರ್ಡರ್ ಗಳ ಸ್ಥಿತಿಯನ್ನು ಇಮೇಲ್ ಮತ್ತು ಸಂದೇಶಗಳ ಮೂಲಕ ಗುರುತಿಸುತ್ತದೆ.

7 Reasons Why You Should Own the OPPO F7 Right Away

4 ಫೋಟೋಗ್ರಫಿ ಜತೆಗೆ ಮಜವಾದ ಫೀಚರ್ ಗಳು: ಒಪ್ಪೋ F7ನಲ್ಲಿ ಹಲವಾರು ಮಜವಾದ ಫೀಚರ್ ಗಳಿದ್ದು, ಅದನ್ನು ಬಳಸುವವರು ತಾವಾಗಿಯೇ ಕಲಾವಿದರಾಗಿ ಬಿಡುತ್ತಾರೆ. ಕವರ್ ಶಾಟ್ ಫೀಚರ್ ಬಳಸಿ ಬಣ್ಣ, ಸ್ಯಾಚುರೇಷನ್, ಬಟ್ಟೆಯ ಬಣ್ಣ ಬದಲಾವಣೆ, ಹಿನ್ನೆಲೆ ಹೀಗೆ ಏನೆಲ್ಲ ಬದಲಾವಣೆ ಮಾಡಿ, ಒಂದೊಳ್ಳೆ ನಿಯತಕಾಲಿಕೆ ಕವರ್ ಪೇಜ್ ಗೆ ಬೇಕಾದ ಚಂದದ ಚಿತ್ರ ಮಾಡಬಹುದು.

ಇದರ ಜತೆಗೆ ಒಪ್ಪೋ ಆಗ್ಯುಮೆಂಟೆಡ್ ರಿಯಾಲಿಟಿ (ಎಆರ್) ಸ್ಟಿಕ್ಕರ್ಸ್ ಪರಿಚಯಿಸುತ್ತಿದೆ. ಇದು ಸ್ನ್ಯಾಪ್ ಚಾಟ್ ಥರ ಇರುತ್ತದೆ. ಮೊಬೈಲ್ ಬಳಕೆದಾರರು ತಮ್ಮದೇ ಫೋಟೋವನ್ನು ಮುದ್ದಾದ ಮೊಲ ಅಥವಾ ಸಿನಿಮಾ ತಾರೆ ಥರ ಮಾಡಬಹುದು. ಜತೆಗೆ ಅವುಗಳನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಬಹುದು.

5 ಸೂಕ್ಷ್ಮ ಹಾಗೂ ಸುಂದರವಾದ ರಚನೆ: ಒಪ್ಪೋ F7 ತುಂಬ ಸೂಕ್ಷ್ಮವಾಗಿ ರಚನೆಯಾಗಿರುವ ಮೊಬೈಲ್ ಎಂದು ಕರೆಸಿಕೊಳ್ಳುವ ಮೂಲಕ ಹೊಸ ಎತ್ತರ ಮುಟ್ಟಿದೆ. ಭಾರತೀಯರಿಗಾಗಿ ಒಪ್ಪೋ ಮೂರು ಬಣ್ಣದಲ್ಲಿ ಬಂದಿದೆ. ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವಂತೆ ಸೋಲಾರ್ ಕೆಂಪು ಮತ್ತು ರಾತ್ರಿ ಚಂದಿರನ ಸಿಲ್ವರ್ ಬಣ್ಣವಿದೆ.

6 ಆಪರೇಟಿಂಗ್ ಸಿಸ್ಟಮ್ ಇನ್ನಷ್ಟು ವಿಸ್ತಾರ: ಒಪ್ಪೋ F7ನಲ್ಲಿ ಹೊಚ್ಚ ಹೊಸದಾದ ಕಲರ್ ಒಎಸ್ 5.0 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಆಂಡ್ರಾಯಿಡ್ 8.1 ಆಧಾರಿತವೆ? ನಿಮ್ಮ ನೋಡುವ ಅನುಭವ ಮತ್ತಷ್ಟು ಚಂದ ಮಾಡುವ ಹೊಸ ಇಂಟರ್ ಫೇಸ್ ಇದೆ. ನೀವು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿ ಒಪ್ಪೋ F7 ಮೊಬೈಲ್ ಫೋನ್ ಅನ್ನು 0.008 ಸೆಕೆಂಡ್ ನಲ್ಲಿ ಅನ್ ಲಾಕ್ ಮಾಡಬಹುದು. ಸೇಫ್ ಬಾಕ್ಸ್ ಎಂಬುದು ನಿಮ್ಮ ಎಲ್ಲ ಅಪ್ಲಿಕೇಶನ್ ಹಾಗೂ ಫೈಲ್ಸ್ ಗಳಿಗೆ ಪಾರದರ್ಶಕತೆ ನೀಡುತ್ತದೆ. ನಿಮ್ಮ ಖಾಸಗಿ ಸಂದೇಶಗಳನ್ನು ಥರ್ಡ್ ಪಾರ್ಟಿ ಅಪ್ಲಿಕೇಷನ್ ನಿಂದ ರಕ್ಷಿಸುತ್ತದೆ.

7 Reasons Why You Should Own the OPPO F7 Right Away

7 ಗಟ್ಟಿಮುಟ್ಟಾದ ಹಾರ್ಡ್ ವೇರ್: ಒಪ್ಪೋ ತನ್ನ ಮೊಬೈಲ್ ಫೋನ್ ನ ತನ್ನ ಸಾಫ್ಟ್ ವೇರ್ ರೀತಿಯಲ್ಲಿಯೇ ಹಾರ್ಡ್ ವೇರ್ ಗಾಗಿ ತಜ್ಞರ ಸಹಾಯ ಪಡೆದಿದ್ದು, ಆಳವಾದ ಸಂಶೋಧನೆ ಮಾಡಿದೆ. F7 ಫೋನ್ 64 ಬಿಟ್ 4 ಜಿಬಿ ಅಕ್ಟಾ ಕೋರ್ ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಮೂರು ಮೆಮೊರಿ ಕಾರ್ಡ್ ಸ್ಲಾಟ್ ಇದ್ದು, ಮೆಮೊರಿ ಸಾಮರ್ಥ್ಯವನ್ನು 256 ಜಿಬಿವರೆಗೆ ಹೆಚ್ಚಿಸಬಹುದು. ಎರಡು 4ಜಿ ವಿಒಎಲ್ ಟಿಇ ಕಾರ್ಡ್ ಸ್ಲಾಟ್ ಇದ್ದು, ಒಂದೇ ಸಲಕ್ಕೆ ಎರಡು 4ಜಿ ಸಿಮ್ ಕಾರ್ಡ್ ಬಳಸಬಹುದು. ಉದಾಹರಣೆಗೆ, ಒಂದು ಸಿಮ್ ಗೆ ಕರೆ ಬಂದರೆ, ಮತ್ತೊಂದು ಸಿಮ್ ನಲ್ಲಿ ಗೇಮ್ ನ ಆಡಬಹುದು. ಇದು ನಿಮಗೆ ಹುಚ್ಚು ಹಿಡಿಸಲ್ಲವಾ?

ನಿಮಗೆ ನೀವೇ ಅಥವಾ ಬೇರೆಯವರಿಗೆ ಸ್ಮಾರ್ಟ್ ಫೋನ್ ಗಿಫ್ಟ್ ಕೊಡಬೇಕು ಅಂದುಕೊಂಡರೆ, ಆ ಬಗ್ಗೆ ನಿಮಗೆ ಕೆಲವು ಸಹಜ ಅನುಮಾನಗಳು ಬರಬಹುದು. ಒಪ್ಪೋ F7 ಬಗೆಗಿನ ಈ ಸಮಗ್ರವಾದ ವಿಮರ್ಶೆ ನಿಮ್ಮ ಎಲ್ಲ ಅನುಮಾನ ನಿವಾರಿಸುತ್ತದೆ. ನೀವ್ಯಾಕೆ ಹೊಸ ಒಪ್ಪೋ F7 ಖರೀದಿಸಬೇಕು ಎನ್ನುವುದಕ್ಕೆ ಒಳ್ಳೆ ಕಾರಣ ಹಾಗೂ ದೃಷ್ಟಿಕೋನ ಸಿಕ್ಕಿರುತ್ತದೆ.

ಎರಡನೇ ಆಲೋಚನೆ ಮಾಡದೆ, ಈಗ ನೀವು ಖರೀದಿಸಬಹುದಾದ ಅತ್ಯುತ್ತಮ ಮೊಬೈಲ್ ಫೋನ್ ಒಪ್ಪೋ F7.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
We've jotted down 7 points to take you through the entire depth and breadth of the new OPPO F7 smartphone. These reasons would make you want to own your OPPO F7 soon, so take a look.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more