just in: ಗಡಿಯಲ್ಲಿ ಕಾಣೆಯಾಗಿದ್ದ 19 ಕಾರ್ಮಿಕರಲ್ಲಿ 7 ಮಂದಿ ಪತ್ತೆ
ಗುವಾಹಟಿ: ಭಾರತ ಚೀನಾ ಗಡಿ ಸಮೀಪದ ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ 19 ಅಸ್ಸಾಂ ಕಟ್ಟಡ ಕಾರ್ಮಿಕರ ಪೈಕಿ ಏಳು ಮಂದಿಯನ್ನು ಪತ್ತೆ ಹಚ್ಚಿ ರಕ್ಷಿಸಲಾಗಿದೆ.
ಇನ್ನು ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಘೀ ಬೆಂಗಿಯಾ ತಿಳಿಸಿದ್ದಾರೆ. ಆದರೆ, ಈ ವ್ಯಕ್ತಿಗಳನ್ನು ಯಾರು ಮತ್ತು ಎಲ್ಲಿಂದ ರಕ್ಷಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
"ಪತ್ತೆಯಾಗಿರುವ 7 ಕಾರ್ಮಿಕರು ತುಂಬಾ ದುರ್ಬಲರಾಗಿದ್ದಾರೆ ಎಂದು ಬೆಂಗಿಯಾ ಹೇಳಿದರು. ಇವರಿಗೆ ಆಹಾರ ಮತ್ತು ಔಷಧಿಗಳನ್ನು ನೀಡಲಾಗುತ್ತಿದ್ದು, ಎಲ್ಲರನ್ನು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಶಿಬಿರದಲ್ಲಿ ಇರಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಅವರ ಹೇಳಿಕೆಗಳನ್ನು ದಾಖಲಿಸಲಾಗುತ್ತದೆ ಎಂದಿದ್ದಾರೆ.
Arunachal Pradesh | Seven out of 19 construction labourers from Assam who went missing on July 13th from Kurung Kumey district, have been traced and rescued. IAF choppers are engaged in search & rescue operations.
— ANI (@ANI) July 23, 2022
Medical assistance has been provided to them. pic.twitter.com/sWd3E7ATmH
ನಾಪತ್ತೆಯಾಗಿದ್ದ 19 ಕಾರ್ಮಿಕರಲ್ಲಿ ಬಹುತೇಕರು ಮುಸ್ಲಿಮರಾಗಿದ್ದಾರೆ. ಇವರೆಲ್ಲಾ ಕುರುಂಗ್ ಕುಮೆಯ ದಾಮಿನ್ ವೃತ್ತದಿಂದ ಚೀನಾ ಗಡಿಯವರೆಗೆ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದರು. ಯೋಜನೆಯನ್ನು BRO ಕಾರ್ಯಗತಗೊಳಿಸುತ್ತಿದೆ.

ಭಾರತ- ಚೀನಾ ವಾಸ್ತವಿಕ ನಿಯಂತ್ರಣ ರೇಖೆಯಿಂದ ಸ್ಪಲ್ಪ ದೂರದಲ್ಲಿನ ಗಡಿ ರಸ್ತೆ ನಿರ್ಮಾಣ ಸ್ಥಳದಿಂದ ಎರಡು ವಾರಗಳ ಹಿಂದೆ ಅಂದರೆ ಜುಲೈ 5 ರಂದು 19 ಕಾರ್ಮಿಕರು ನಾಪತ್ತೆಯಾಗಿದ್ದರು. ನಾಪತ್ತೆಯಾದ ಕಾರ್ಮಿಕರ ಗುಂಪನ್ನು ಹುಡುಕಲು ಅರುಣಾಚಲ ಪ್ರದೇಶದ ದೂರದ ಕುರುಂಗ್ ಕುಮೆ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.
ಅಸ್ಸಾಂನ ಕೊಕ್ರಜಾರ್ ಮತ್ತು ಧುಬ್ರಿ ಗಡಿ ಪ್ರದೇಶದವರು ಎನ್ನಲಾಗಿರುವ ಈ ಕಾರ್ಮಿಕರು ಈದ್ ಆಚರಿಸಲು ಅಸ್ಸಾಂನಲ್ಲಿರುವ ತಮ್ಮ ಮನೆಗಳಿಗೆ ತೆರಳಲು ರಜೆ ಕೇಳಿದ್ದರು. ಆದರೆ, ರಜೆ ನೀಡಲು ನಿರಾಕರಿಸಲಾಗಿತ್ತು. ರಜೆ ನಿರಾಕರಿಸಿದ ನಂತರ ಜುಲೈ 5 ರ ರಾತ್ರಿ ತಮ್ಮ ಶಿಬಿರದಿಂದ ಪಲಾಯನ ಮಾಡಿದ್ದರು. ಅವರು ದಟ್ಟವಾದ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದರು, ಬಳಿಕ ಅವರ ಬಗ್ಗೆ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ ಎಂದು ವರದಿಯಾಗಿದೆ. ಜುಲೈ 13 ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಈಗ 19 ಕಟ್ಟಡ ಕಾರ್ಮಿಕರಲ್ಲಿ ಏಳು ಮಂದಿಯನ್ನು ಪತ್ತೆ ಹಚ್ಚಿ ರಕ್ಷಿಸಲಾಗಿದೆ. ಐಎಎಫ್ ಹೆಲಿಕಾಪ್ಟರ್‌ಗಳು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.












Click it and Unblock the Notifications