'7 ನಿಮಿಷಗಳ ವೈರಲ್ ವಿಡಿಯೋ' ಹೆಸರಲ್ಲಿ ಸಂಚಲನ ಮೂಡಿಸಿದ ಈ ಸಂತೂರ್ ಮಮ್ಮಿ ಯಾರು?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀಲ್ಸ್‌ಗಳು ಜನರ ಗಮನ ಸೆಳೆಯುತ್ತಿವೆ. ಕೆಲವರು ಸಿಂಗಲ್ ಮಾಡಿ ರೀಲ್ ಮಾಡಿದರೆ, ಇನ್ನೂ ಕೆಲವರು ತನ್ನ ಪಾರ್ಟ್‌ನರ್ ಜೊತೆ ರೀಲ್ಸ್ ಮಾಡಿ ಹೈಪ್ ಪಡೆಯುತ್ತಿದ್ದಾರೆ. ಆದರೆ ಇತ್ತೀಚೆಗೆ ಅಮ್ಮ-ಮಗನ ರೀಲ್‌ಗಳ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂತಹ ಅನೇಕ ವೀಡಿಯೊಗಳು ಭಾವನಾತ್ಮಕ ಸಂಪರ್ಕ ಮತ್ತು ತಲೆಮಾರುಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದನ್ನು ತಿಳಿಸಿದರೆ, ಕೆಲವು ನೈತಿಕತೆ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಚರ್ಚೆಯನ್ನೂ ಹುಟ್ಟು ಹಾಕುತ್ತಿವೆ. ಇದಕ್ಕೆ ಕಾರಣವಾಗಿದ್ದು ಆ ಒಂದು ಪೋಸ್ಟ್.
ತಾಯಿ-ಮಗನ ವಿಷಯದ ಕುರಿತು ನಡೆಯುತ್ತಿರುವ ಈ ಚರ್ಚೆಯು ಇನ್ಸ್‌ಟಾಗ್ರಾಂನಲ್ಲಿ ಮತ್ತೊಮ್ಮೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಚರ್ಚೆಯಲ್ಲಿ ಸಂತೂರ್ ಮಮ್ಮಿ ಎಂದೇ ಖ್ಯಾತಿ ಪಡೆದಿರುವ ರಚನಾ ಆಗಾಗ ತನ್ನ ಮಗನೊಂದಿಗೆ ಇರುವ ವೀಡಿಯೊಗಳು ಮತ್ತು ರೀಲ್‌ಗಳನ್ನು ಹಂಚಿಕೊಳ್ಳುತ್ತಿದ್ದು ಬಾಂಧವ್ಯದ ಗಡಿ ದಾಟಿದ ಚರ್ಚೆಗಳನ್ನು ಹುಟ್ಟುಹಾಕಿದೆ.

ಕೆಲವರು ಈ ರೀತಿಯ ವಿಷಯವು ತಾಯಿ ಮತ್ತು ಮಗನ ನಡುವೆ ಇರುವ ಗೆರೆಯನ್ನು ದಾಟುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಇದನ್ನು ಕೇವಲ ಸಾಮಾಜಿಕ ಮಾಧ್ಯಮದಲ್ಲಿನ ಸೃಜನಶೀಲತೆ ಎಂದು ಪರಿಗಣಿಸಿದ್ದಾರೆ. ಒಟ್ಟಾರೆ ಈ ಸಂತೂರ್ ಮಮ್ಮಿಯ ಪೋಸ್ಟ್ ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗುತ್ತಲೇ ಇವೆ.
7 ನಿಮಿಷಗಳ ವೈರಲ್ ವಿಡಿಯೋ ನಿಜಾನಾ?
ಈ ಸಂತೂರ್ ಮಮ್ಮಿಯ 7 ನಿಮಿಷಗಳ ವೀಡಿಯೊ ಕುರಿತಾದ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ವೀಡಿಯೊ ಹೊರಬಂದ ತಕ್ಷಣ, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಗಳು ಪ್ರಾರಂಭವಾಗಿವೆ. ಈ ವೈರಲ್ ಪೋಸ್ಟ್ ಅನ್ನು @Myonsinn ಹೆಸರಿನ ಖಾತೆ ಹಂಚಿಕೊಂಡಿದ್ದು, "Santor mom got chill 7:00 min video" ಎಂಬ ಶೀರ್ಷಿಕೆಯಲ್ಲಿದೆ. ಆದರೆ ಪೋಸ್ಟ್‌ನಲ್ಲಿ ಕೇವಲ ಫೋಟೋ ಮಾತ್ರ ಹಂಚಿಕೊಳ್ಳಲಾಗಿದ್ದು, ಯಾವುದೇ ವೀಡಿಯೊ ಅಲ್ಲ. ಇದರ ಹೊರತಾಗಿಯೂ, ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಕಾಮೆಂಟ್‌ಗಳ ಸುರಿಮಳೆ ಹರಿದಿದೆ. ಕೆಲವು ಬಳಕೆದಾರರು ಆ ವೀಡಿಯೊದ ಲಿಂಕ್ ನೀಡುವಂತೆ ಬೇಡಿಕೆ ಇಟ್ಟರೆ, ಇನ್ನೂ ಕೆಲವರು ಆಶ್ಚರ್ಯ ವ್ಯಕ್ತಪಡಿಸಿ ಅಸಲಿಗೆ ಈ ವಿಷಯವೇನು? ಎಂದು ಪ್ರಶ್ನಿಸಿದ್ದಾರೆ. "ಇದು 7 ನಿಮಿಷಗಳ ವೀಡಿಯೊ, ಆದರೆ ಇದು ಎಲ್ಲಾ ದಾಖಲೆಗಳನ್ನು ಮುರಿದಿದೆ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಹೇ, ಇದು ಅದೇ ತಾಯಿ-ಮಗನ ಪರಿಸ್ಥಿತಿ, ಅಲ್ಲವೇ?" ಎಂದು ಕಾಮೆಂಟ್ ಮಾಡಿದ್ದಾರೆ.
ಇಂತಹ ವಿಚಾರಗಳು ಪದೇ ಪದೇ ವೈರಲ್ ಆಗಿದ್ದು ಅಸಲಿಗೆ ಇದರ ಮೂಲ ಏನು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಸುಮ್ಮನೆ ಯಾರೋ ಹಂಚಿಕೊಳ್ಳುವ ಇಂತಹ ಪೋಸ್ಟ್‌ಗಳು ಒಬ್ಬರ ಖ್ಯಾತಿಗೆ ಹಾನಿ ಮಾಡುವುದಲ್ಲದೆ, ತಪ್ಪು ಮಾಹಿತಿಯನ್ನು ಸಹ ನೀಡುತ್ತವೆ ಎಂದು ಕಳವಳ ವ್ಯಕ್ತವಾಗುತ್ತಿದೆ. ಮೂಲವಿಲ್ಲದ ಈ ಪೋಸ್ಟ್ ಮಿಲಿಯನ್‌ಗಟ್ಟಲೆ ವೀವ್ಸ್ ಪಡೆದುಕೊಂಡಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ವಾಸ್ತವವಾಗಿ ಈ ಸಂತೂರ್ ಮಮ್ಮಿ ಬಗ್ಗೆ 7 ನಿಮಿಷಗಳ ವೀಡಿಯೊದ ಕುರಿತು ಮಾಡಲಾಗುತ್ತಿರುವ ಪೋಸ್ಟ್ ಹಾಗೂ ಹೇಳಿಕೆಗಳು ನಿಜವಲ್ಲ. ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಚರ್ಚೆಯ ಮಧ್ಯೆ ಬಳಕೆದಾರರು ಯಾವುದೇ ತೀರ್ಮಾನಗಳಿಗೆ ಬರುವ ಮೊದಲು ಸತ್ಯಾಸತ್ಯತೆ ಪರಿಶೀಲಿಸುವುದು ಮತ್ತು ಸಂಯಮದಿಂದ ವರ್ತಿಸುವುದು ಮುಖ್ಯ.












Click it and Unblock the Notifications