PM Modi 3.0: ಪ್ರಧಾನಿ ಸಂಪುಟದಲ್ಲಿ ಕರ್ನಾಟಕದ ಯಾರಿಗೆಲ್ಲ ಮಂತ್ರಿಭಾಗ್ಯ?: ಹೊಸ 69 ಮಂತ್ರಿಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಜೂನ್ 09: ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಎನ್‌ಡಿಗೆ ಬಹುಮತ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಕರ್ನಾಟಕದ ಐವರು ಸಂಸದರಿಗೆ ಮಂತ್ರಿ ಭಾಗ್ಯ ಸಿಗಲಿದೆ. ಕರ್ನಾಟಕದ ಸೇರಿದಂತೆ ಇಡೀ ದೇಶಾದ್ಯಂತ ವಿವಿಧ ರಾಜ್ಯಗಳ ಒಟ್ಟು 69 ಸಂಸದರಿಗೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎಂಬುದು ಗೊತ್ತಾಗಿದೆ.
ಇಂದು ಭಾನುವಾರ ಜೂನ್ 09ರಂದು ನರೇಂದ್ರ ಮೋದಿಯವರು ಮೂರನೇ ಭಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರವು ಮೂರನೇ ಭಾರಿಗೆ ಅಧಿಕಾರ ಹುದ್ದೆಗೆ ಏರಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಹತ್ವ ಸಚಿವ ಖಾತೆಗಳನ್ನು ಬಿಜೆಪಿಗೆ ಉಳಿಸಿಕೊಳ್ಳಲಿದ್ದಾರೆ. ಉಳಿದ ಖಾತೆಗಳನ್ನು ಮೈತ್ರಿ ಪಕ್ಷದ ಸಂಸದರಿಗೆ ಹಂಚಿಕೆ ಮಾಡಲಿದ್ದಾರೆ.

ನರೇಂದ್ರ ಮೋದಿ 3.0 ಸರ್ಕಾರದಲ್ಲಿ ಕರ್ನಾಟಕದ ಯಾರೆಲ್ಲ ಸಚಿವರು ಮಂತ್ರಿಗಿರಿ ಪಡೆಯಲಿದ್ದಾರೆ. ಯಾವ ಯಾವ ರಾಜ್ಯಗಳಿಗೆ ಎಷ್ಟೆಷ್ಟು ಸಚಿವ ಸ್ಥಾನ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.
ಪ್ರಧಾನಿ 3.0 ಸರ್ಕಾರದ ಸಚಿವರ ಪಟ್ಟಿ
ಕರ್ನಾಟಕ 05 ಸಂಸದರಿಗೆ ಮಂತ್ರಿ ಸ್ಥಾನ, ಅದೇ ರೀತಿ ಉತ್ತರ ಪ್ರದೇಶ 08, ಬಿಹಾರದಿಂದ 08, ಮಹಾರಾಷ್ಟ್ರ 06, ಗುಜರಾತ್‌ನಿಂದ 05, ಆಂಧ್ರ ಪ್ರದೇಶದ 03, ಪಶ್ಚಿಮ ಬಂಗಾಳ 02, ತೆಲಂಗಾಣ 02, ಕೇರಳ ಒಬ್ಬ ಸಂಸದರು ಸೇರಿದಂತೆ ಒಟ್ಟು 69 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಇಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕರ್ನಾಟಕದ ಈ 05 ಸಂಸದರಿಗೆ ಮಂತ್ರಿ ಭಾಗ್ಯ ಸಿಕ್ಕಿದೆ
ಕರ್ನಾಟಕದಲ್ಲಿ ಜೆಡಿಎಸ್ ಮಾಜಿ ಸಿಎಂ ಹಾಗೂ ಸಂಸದರಾಗಿ ಆಯ್ಕೆಯಾದ ಎಚ್‌ಡಿ ಕುಮಾರಸ್ವಾಮಿ (ಮಂಡ್ಯ ಲೋಕಸಭಾ ಕ್ಷೇತ್ರ), ಪ್ರಹ್ಲಾದ್ ಜೋಶಿ (ಧಾರವಾಡ ಲೋಕಸಭಾ ಕ್ಷೇತ್ರ), ವಿ.ಸೋಮಣ್ಣ (ತುಮಕೂರು ಲೋಕಸಭಾ ಕ್ಷೇತ್ರ), ಶೋಭಾ ಕರಂದ್ಲಾಜೆ (ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ) ಅವರಿಗೆ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೂ ಪ್ರಧಾನಿ ಮೋದಿ ಕ್ಯಾಬಿನೆಟ್‌ನಲ್ಲಿ ಸಚಿವ ದರ್ಜೆಯ ಸ್ಥಾನಗಳು ಸಿಗಲಿವೆ. ಈ ಬಗ್ಗೆ ವಿ.ಸೋಮಣ್ಣ ಅವರು ದೆಹಲಿಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಇಂದೇ ಅಧಿಕೃತ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.
ಇವರೇ ನೋಡಿ ಹೊಸ ಸಚಿವರು: ಹೆಸರುಗಳ ಪಟ್ಟಿ
ರಾಜನಾಥ್ ಸಿಂಗ್
ಅಮಿತ್ ಶಾ
ಲಾಲನ್ ಸಿಂಗ್
ಪಿಯೂಷ್ ಗೋಯಲ್
ಪ್ರಹ್ಲಾದ್ ಜೋಶಿ
ಮನ್ಸುಖ್ ಮಾಂಡವಿಯಾ
ಜ್ಯೋತಿರಾದಿತ್ಯ ಸಿಂಧಿಯಾ
ಸರ್ಬಾನಂದ್ ಸೋನೋವಾಲ್
ವೀರೇಂದ್ರ ಖಟಿಕ್
ಜುಯೆಲ್ ಓರಮ್
ಚಿರಾಗ್ ಪಾಸ್ವಾನ್
ಎಸ್‌ಪಿಎಸ್ ಬಾಘೆಲ್
ರಾಮದಾಸ್ ಅಠವಳೆ
ಜಯಂತ್ ಚೌಧರಿ
ಶೋಭಾ ಕರಂದ್ಲಾಜೆ
ಪಂಕಜ್ ಚೌಧರಿ
ಶ್ರೀಪಾದ್ ನಾಯಕ್
ಕಿರಣ್ ರಿಜಿಜು
ಬಿಎಲ್ ವರ್ಮಾ
ಕಮಲೇಶ್ ಪಾಸ್ವಾನ್
ರವನೀತ್ ಬಿಟ್ಟು
ಡಿಕೆ ಅರುಣಾ
ಎಚ್ ಡಿ ಕುಮಾರಸ್ವಾಮಿ
ಎಸ್ ಜೈಶಂಕರ್
ನಿರ್ಮಲಾ ಸೀತಾರಾಮನ್
ಭೂಪೇಂದ್ರ ಯಾದವ್
ರಾವ್ ಇಂದ್ರಜಿತ್ ಸಿಂಗ್
ಗಿರಿರಾಜ್ ಸಿಂಗ್
ಧರ್ಮೇಂದ್ರ ಪ್ರಧಾನ್
ಅರ್ಜುನ್ ರಾಮ್ ಮೇಘವಾಲ್
ಅನ್ನಪೂರ್ಣ ದೇವಿ
ಕಿಶನ್ ಪಾಲ್ ಗುಜ್ಜರ್
ಎಂಎಲ್ ಖಟ್ಟರ್
ಹರ್ದೀಪ್ ಪುರಿ
ಅಶ್ವನಿ ವೈಷ್ಣವ್
ಪಬಿತ್ರಾ ಮಾರ್ಗರಿಟಾ
ನಿತ್ಯಾನಂದ ರೈ
ಸುಕಾಂತ ಮಜುಂದಾರ್
ಅನುಪ್ರಿಯಾ ಪಟೇಲ್
ಸಿಆರ್ ಪಾಟೀಲ್
ಎಲ್ ಮುರುಗನ್
ಜಿತಿನ್ ಪ್ರಸಾದ್
ಜಿತೇಂದ್ರ ಸಿಂಗ್
ರಾಮ್ ಮೋಹನ್
ಬಂಡಿ ಸಂಜಯ್
ಶಿವರಾಜ್ ಸಿಂಗ್ ಚೌಹಾಣ್
ಪಿ ಚಂದ್ರಶೇಖರ್
ಸರ್ವಾನಂದ್ ಸೋನೋವಾಲ್
ರಾಮನಾಥ್ ಠಾಕೂರ್
ಸಂಜಯ್ ಸೇಠ್
ರಕ್ಷಾ ಖಡ್ಸೆ
ಸಿಪಿ ಮೋಹನ್
ವೀರೇಂದ್ರ ಕುಮಾರ್
ಅಜಯ್ ತಮ್ತಾ,
ಹರ್ಷ್ ಮಲ್ಹೋತ್ರಾ.
ವಿ.ಸೋಮಣ್ಣ
ಸದ್ಯ ಕೇಂದ್ರ ಸರ್ಕಾರ ನೂರು ದಿನಗಳ ಕಾರ್ಯಯೋಜನೆ ಬಗ್ಗೆ ಸಿದ್ಧತೆ ಮಾಡಿಕೊಂಡಿತ್ತು. ಅದೆಲ್ಲ ಅಂಶಗಳನ್ನು ಸಾಕಾರಕ್ಕೆ ತರಲು ಸಜ್ಜಾಗಿದೆ. ಆದಷ್ಟು ಶೀಘ್ರವೇ ಯಾವೆಲ್ಲ ಸಚಿವರಿಗೆ ಯಾವ ಮಂತ್ರಿ ಸ್ಥಾನ ಸಿಕ್ಕಿದೆ ಎಂಬ ಮಾಹಿತಿ ಹೊರ ಬೀಳಲಿದೆ












Click it and Unblock the Notifications