ಭಾರತ; 24 ಗಂಟೆಯಲ್ಲಿ 57,982 ಹೊಸ ಕೋವಿಡ್ ಪ್ರಕರಣ

ನವದೆಹಲಿ, ಆಗಸ್ಟ್ 17 : ಭಾರತದಲ್ಲಿ 24 ಗಂಟೆಯಲ್ಲಿ 57,982 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 26,47,664ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ ಭಾನುವಾರ ಬೆಳಗ್ಗೆ 8 ರಿಂದ ಸೋಮವಾರ ಬೆಳಗ್ಗೆ 8ರ ತನಕ ದೇಶದಲ್ಲಿ 57,982 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. 941 ಜನರು ಮೃತಪಟ್ಟಿದ್ದಾರೆ.

ಐಸಿಎಂಆರ್ ನೀಡಿದ ಮಾಹಿತಿಂತೆ ಆಗಸ್ಟ್‌ 16ರ ತನನಕ ದೇಶದಲ್ಲಿ 3,00,41,400 ಕೋವಿಡ್ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಭಾನುವಾರ ಒಂದೆ ದಿನ ದೇಶದಲ್ಲಿ 7,31,697 ಮಾದರಿಗಳ ಪರೀಕ್ಷೆ ಮಾಡಲಾಗಿದೆ.

24 ಗಂಟೆಯಲ್ಲಿ ಭಾರತದಲ್ಲಿ 941 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 50,921. 19,19,843 ಜನರು ಇದುವರೆಗೂ ಸೋಂಕಿನಿಂದ ಗುಣರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಹೆಚ್ಚು ಸೋಂಕಿತರು ಇರುವ 3ನೇ ದೇಶ

ಹೆಚ್ಚು ಸೋಂಕಿತರು ಇರುವ 3ನೇ ದೇಶ

ಭಾರತದಲ್ಲಿನ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 26,47,664ಕ್ಕೆ ಏರಿಕೆಯಾಗಿದೆ. ಅಮೆರಿಕ, ಬ್ರೆಜಿಲ್ ಹೊರತುಪಡಿಸಿದರೆ ವಿಶ್ವದಲ್ಲಿಯೇ ಅತಿ ಹೆಚ್ಚು ಸೋಂಕಿತರು ಇರುವ 3ನೇ ದೇಶ ಭಾರತವಾಗಿದೆ.

ದೇಶದ ಟಾಪ್ 3 ರಾಜ್ಯಗಳು

ದೇಶದ ಟಾಪ್ 3 ರಾಜ್ಯಗಳು

ಭಾರತದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ (5,95,865) ಮೊದಲ ಸ್ಥಾನದಲ್ಲಿದೆ. ತಮಿಳುನಾಡು (3,38,055) 2ನೇ ಸ್ಥಾನದಲ್ಲಿದೆ. ಆಂಧ್ರ ಪ್ರದೇಶ (2,89,829) ಮೂರನೇ ಸ್ಥಾನದಲ್ಲಿದೆ.

4ನೇ ಸ್ಥಾನದಲ್ಲಿ ಕರ್ನಾಟಕ

4ನೇ ಸ್ಥಾನದಲ್ಲಿ ಕರ್ನಾಟಕ

ಕರ್ನಾಟಕದಲ್ಲಿ ಭಾನುವಾರ 7040 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,26,966ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 3,947. ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ 4ನೇ ಸ್ಥಾನದಲ್ಲಿದೆ.

ಒಟ್ಟು ಮಾದರಿಗಳ ಪರೀಕ್ಷೆ

ಒಟ್ಟು ಮಾದರಿಗಳ ಪರೀಕ್ಷೆ

ಭಾರತದಲ್ಲಿ ಇದುವರೆಗೂ 3,00,41,400 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ಹೇಳಿದೆ. ಆಗಸ್ಟ್ 16ರಂದು 7,31,697 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+