ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಮಾರು 50%ರಷ್ಟು 2000 ರೂ. ನೋಟು ವಾಪಸ್ ಬಂದಿದೆ: ಆರ್‌ಬಿಐ ಗವರ್ನರ್

|
Google Oneindia Kannada News

ನವದೆಹಲಿ, ಜೂನ್‌ 8: ಕಳೆದ ತಿಂಗಳು ಆರ್‌ಬಿಐ 2,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಚಲಾವಣೆಯಲ್ಲಿದ್ದ ನೋಟುಗಳು ಶೇಕಡಾ 50ರಷ್ಟು ವಾಪಸ್‌ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹೇಳಿದ್ದಾರೆ.

ದ್ವೈಮಾಸಿಕ ಹಣಕಾಸು ನೀತಿಯನ್ನು ಇಲ್ಲಿ ಬಿಡುಗಡೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಮಾರ್ಚ್ 31, 2023ರಂತೆ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿವೆ. ಇದುವರೆಗೆ ಘೋಷಣೆಯ ನಂತರ 1.80 ಲಕ್ಷ ಕೋಟಿ ರೂಪಾಯಿ ವಾಪಸ್‌ ಬಂದಿದೆ. ಶೇ. 85ರಷ್ಟು 2000 ರೂಪಾಯಿ ನೋಟುಗಳು ಬ್ಯಾಂಕ್ ಖಾತೆಗಳಲ್ಲಿ ಠೇವಣಿಯಾಗಿ ಬರುತ್ತಿದ್ದು, ಇದು ನಿರೀಕ್ಷೆಗೆ ತಕ್ಕಂತೆ ಇದೆ ಎಂದರು.

50% of Rs 2000 note returned: RBI Governor

ಮೇ 19 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಕರೆನ್ಸಿ ನಿರ್ವಹಣೆಯ ಭಾಗವಾಗಿ ರೂ 2,000 ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಮೇ 23ರಿಂದ 2,000 ರೂಪಾಯಿ ನೋಟುಗಳನ್ನು (ಒಂದೇ ಬಾರಿ ರೂ 20,000 ವರೆಗೆ) ವಿನಿಮಯ ಮಾಡಿಕೊಳ್ಳಲು ಅನುಮತಿ ನೀಡಿತು. ವಿನಿಮಯ ಅಥವಾ ಠೇವಣಿ ವಿಂಡೋ ಸೆಪ್ಟೆಂಬರ್ 30, 2023 ರವರೆಗೆ ಲಭ್ಯವಿದೆ.

Karnataka Election 2023: ಪ್ರಜಾಧ್ವನಿ ಯಾತ್ರೆಯಲ್ಲಿ ಜನರ ಮೇಲೆ 500ರ ನೋಟುಗಳನ್ನು ಎಸೆದ ಡಿಕೆ ಶಿವಕುಮಾರ್Karnataka Election 2023: ಪ್ರಜಾಧ್ವನಿ ಯಾತ್ರೆಯಲ್ಲಿ ಜನರ ಮೇಲೆ 500ರ ನೋಟುಗಳನ್ನು ಎಸೆದ ಡಿಕೆ ಶಿವಕುಮಾರ್

2,000 ನೋಟುಗಳ ವಿನಿಮಯ ಅಥವಾ ಠೇವಣಿಗಾಗಿ ಸಾರ್ವಜನಿಕರು ಭಯಪಡಬೇಡಿ. ಆದರೆ ಕೊನೆಯ ಕ್ಷಣದ ದಾವಂತ ಮಾಡಿಕೊಳ್ಳುವುದುನ್ನು ತಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು. 500 ರೂಪಾಯಿ ನೋಟುಗಳನ್ನು ಹಿಂಪಡೆಯಲು ಅಥವಾ 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮರು ಚಲಾವಣೆ ಮಾಡುವ ಬಗ್ಗೆ ಆರ್‌ಬಿಐ ಯೋಚಿಸುತ್ತಿಲ್ಲ ಮತ್ತು ಈ ಬಗ್ಗೆ ಊಹಾಪೋಹ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

50% of Rs 2000 note returned: RBI Governor

ಕಳೆದ ತಿಂಗಳು ಆರ್‌ಬಿಐ ಗವರ್ನರ್ ಅವರು ಹಿಂಪಡೆಯಲಾದ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಸೆಪ್ಟೆಂಬರ್ 30 ರ ಗಡುವಿನೊಳಗೆ ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂತಿರುಗಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು.

English summary
Reserve Bank Governor Shaktikanta Das said on Thursday that after the RBI announced demonetisation of 2,000-denomination currency notes last month, the notes in circulation have returned by 50 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X