ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 50 ಹೊಸ ವೈದ್ಯಕೀಯ ಕಾಲೇಜುಗಳು, ಹೆಚ್ಚಿದ ಎಂಬಿಬಿಎಸ್ ಸೀಟ್‌ಗಳು

|
Google Oneindia Kannada News

ನವದೆಹಲಿ, ಜೂನ್. 09: ಈ ವರ್ಷ 8,195 ಎಂಬಿಬಿಎಸ್ ಸೀಟುಗಳನ್ನು ಹೊಂದಿರುವ 50 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಮೂಲಗಳು ಗುರುವಾರ ತಿಳಿಸಿವೆ. ದೇಶದಲ್ಲಿ ಎಂಬಿಬಿಎಸ್ ಸೀಟುಗಳ ಒಟ್ಟು ಸಂಖ್ಯೆಯನ್ನು 1,07,658 ದಾಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ 50 ಕಾಲೇಜುಗಳಲ್ಲಿ 30 ಸರ್ಕಾರಿ ಮತ್ತು 20 ಖಾಸಗಿ ಕಾಲೇಜುಗಳಾಗಿರಲಿವೆ. ಹೊಸ ಕಾಲೇಜುಗಳ ಸೇರ್ಪಡೆಯೊಂದಿಗೆ ದೇಶದ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಈಗ 702 ಆಗಿದೆ ಎಂದು ಮೂಲಗಳು ತಿಳಿಸಿವೆ. ಇವುಗಳನ್ನು ತೆಲಂಗಾಣ, ರಾಜಸ್ಥಾನ, ತಮಿಳುನಾಡು, ಒಡಿಶಾ, ನಾಗಾಲ್ಯಾಂಡ್, ಮಹಾರಾಷ್ಟ್ರ, ಅಸ್ಸಾಂ, ಕರ್ನಾಟಕ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ 50 ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

50 new medical colleges in 15 states, adding 8,195 UG seats

ನಿಗದಿತ ಮಾನದಂಡಗಳನ್ನು ಅನುಸರಿಸದ ಆರೋಪದ ಮೇಲೆ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿಯು ಕಳೆದ ಎರಡೂವರೆ ತಿಂಗಳಲ್ಲಿ ದೇಶಾದ್ಯಂತ 38 ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ಹಿಂತೆಗೆದುಕೊಂಡಿದೆ. ಇದಲ್ಲದೆ, 102 ವೈದ್ಯಕೀಯ ಕಾಲೇಜುಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

38 ವೈದ್ಯಕೀಯ ಕಾಲೇಜುಗಳ ಪೈಕಿ 24 ಕಾಲೇಜುಗಳು ಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಆರು ಮಂದಿ ಆರೋಗ್ಯ ಸಚಿವರನ್ನು ಸಂಪರ್ಕಿಸಿದ್ದಾರೆ. ಮಾನ್ಯತೆ ಕಳೆದುಕೊಂಡಿರುವ ಕಾಲೇಜುಗಳು ನ್ಯೂನತೆಗಳು ಮತ್ತು ಅಸಮರ್ಪಕತೆಗಳನ್ನು ಸರಿಪಡಿಸಿದ ನಂತರ ಎನ್‌ಎಂಸಿ ಮತ್ತು ನಂತರ ಆರೋಗ್ಯ ಸಚಿವಾಲಯಕ್ಕೆ ಒಮ್ಮೆ ಮೇಲ್ಮನವಿ ಸಲ್ಲಿಸಲು ಅನುಮತಿಸಲಾಗಿದೆ.

50 new medical colleges in 15 states, adding 8,195 UG seats

ಆಯೋಗದ ಯುಜಿ ಮಂಡಳಿಯು ನಡೆಸಿದ ತಪಾಸಣೆಯಲ್ಲಿ ಕಾಲೇಜುಗಳು ನಿಗದಿತ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಮತ್ತು ಸಿಸಿಟಿವಿ ಕ್ಯಾಮೆರಾಗಳು, ಆಧಾರ್-ಸಂಯೋಜಿತ ಬಯೋಮೆಟ್ರಿಕ್ ಹಾಜರಾತಿ ಕಾರ್ಯವಿಧಾನಗಳು ಮತ್ತು ಅಧ್ಯಾಪಕರ ಪಟ್ಟಿಗಳಿಗೆ ಸಂಬಂಧಿಸಿದ ಹಲವಾರು ಲೋಪದೋಷಗಳು ಗಮನಕ್ಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಕರು, ಉಪನ್ಯಾಸಕರ ನೇಮಕಾತಿ; ವಯೋಮಿತಿ ಹೆಚ್ಚಳಶಿಕ್ಷಕರು, ಉಪನ್ಯಾಸಕರ ನೇಮಕಾತಿ; ವಯೋಮಿತಿ ಹೆಚ್ಚಳ

ಸರ್ಕಾರದ ಅಂಕಿಅಂಶಗಳ ಪ್ರಕಾರ, 2014 ರಿಂದ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಶೇಕಡಾ 69 ರಷ್ಟು ಹೆಚ್ಚಳವಾಗಿದೆ. 2014 ರ ಮೊದಲು 387 ರಿಂದ ಈಗ 654 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಫೆಬ್ರವರಿಯಲ್ಲಿ ರಾಜ್ಯಸಭೆಗೆ ತಿಳಿಸಿದ್ದರು.

ಇದಲ್ಲದೆ, ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲಿ ಶೇಕಡಾ 94-ರಷ್ಟು ಹೆಚ್ಚಳವಾಗಿದೆ. 2014 ರ ಮೊದಲು 51,348 ರಿಂದ ಈಗ 99,763 ಕ್ಕೆ ಮತ್ತು 2014 ರ ಮೊದಲು 31,185 ರಿಂದ 64,559 ಕ್ಕೆ ಸ್ನಾತಕೋತ್ತರ ಸೀಟುಗಳ ಸಂಖ್ಯೆಯಲ್ಲಿ 107% ಹೆಚ್ಚಳವಾಗಿದೆ. ದೇಶದಲ್ಲಿ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲು, ಸರ್ಕಾರವು ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಮತ್ತು ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಿದೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಹೇಳಿದ್ದಾರೆ.

English summary
National Medical Commission approves 50 new medical colleges in 15 states with 8,195 more undergraduate seats know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X