ಬಿಹಾರದ ಗಯಾದಲ್ಲಿ ಐವರು ವಿದೇಶಿಯರಿಗೆ ಕೋವಿಡ್ ಪಾಸಿಟಿವ್, ಹೆಚ್ಚಿದ ಆತಂಕ
ಪಟ್ನಾ, ಡಿಸೆಂಬರ್ 26: ಯಾತ್ರಾಸ್ಥಳವಾದ ಗಯಾದಲ್ಲಿ ಐವರು ವಿದೇಶಿಯರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ತಿಳಿದುಬಂದಿದೆ.
ಇದರಲ್ಲಿ ನಾಲ್ವರು ವಿದೇಶಿಯರ ಮಾದರಿಗಳನ್ನು ಭಾನುವಾರ ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಗಯಾ ಜಿಲ್ಲೆಯ ಹಿರಿಯ ವೈದ್ಯಾಧಿಕಾರಿ ಸೋಮವಾರ ತಿಳಿಸಿದ್ದಾರೆ.
ಕಳೆದ ವಾರ ಇಂಗ್ಲೆಂಡ್‌ನ 60 ವರ್ಷದ ಮಹಿಳೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಆಕೆ ತಮ್ಮ ದೇಶಕ್ಕೆ ಮರಳಿದ್ದಾರೆ ಎಂದು ಗಯಾ ಸಿವಿಲ್ ಸರ್ಜನ್ ಡಾ.ರಂಜನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಭಾನುವಾರ ಕೋವಿಡ್ ಸೋಂಕು ಪತ್ತೆಯಾದ ನಾಲ್ವರು ವಿದೇಶಿಯರಲ್ಲಿ ಮೂವರು ಥೈಲ್ಯಾಂಡ್‌ನಿಂದ ಬಂದವರು, ನಾಲ್ಕನೆಯವರು ಮ್ಯಾನ್ಮಾರ್‌ನವರು ಎಂಬ ಮಾಹಿತಿ ಲಭ್ಯವಾಗಿದೆ.

ಐವರಲ್ಲಿಯೂ ಕೋವಿಡ್‌ನ ಯಾವುದೇ ಲಕ್ಷಣಗಳು ಪತ್ತೆಯಾಗಿಲ್ಲ. ಆದರೂ, ಕಳೆದ ವಾರ ಗಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಯಿತು ಎಂದು ಡಾ ಸಿಂಗ್ ಹೇಳಿದ್ದಾರೆ.
'ನಾವು ಇಬ್ಬರು ವಿದೇಶಿಯರನ್ನು (ಥೈಲ್ಯಾಂಡ್) ಬೋಧಗಯಾದಲ್ಲಿರುವ ಹೋಟೆಲ್ ಕೊಠಡಿಗಳಲ್ಲಿ ಪ್ರತ್ಯೇಕವಾಗಿ ಇರಿಸಿದ್ದೇವೆ' ಎಂದು ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.
ವ್ಯಕ್ತಿಯ ಮೊಬೈಲ್ ಫೋನ್ ಸಂಖ್ಯೆ ಸ್ವಿಚ್ ಆಫ್ ಆಗಿರುವುದರಿಂದ ಥಾಯ್ಲೆಂಡ್‌ನ ಮೂರನೇ ವ್ಯಕ್ತಿಯನ್ನು ಪತ್ತೆಹಚ್ಚಲು ಆಡಳಿತಕ್ಕೆ ಸಾಧ್ಯವಾಗಲ್ಲ ಎಂದು ಹೇಳಲಾಗುತ್ತಿದೆ.
ಕೋವಿಡ್ ಪರೀಕ್ಷಾ ಫಲಿತಾಂಶಗಳು ಬರುವ ಮೊದಲೇ ಮ್ಯಾನ್ಮಾರ್ ಪ್ರಜೆ ಗಯಾದಿಂದ ದೆಹಲಿ ಮೂಲಕ ಶ್ರೀನಗರಕ್ಕೆ ತೆರಳಿದ್ದಾರೆ.
ದೃಢೀಕರಣ ಪರೀಕ್ಷೆಯ ಫಲಿತಾಂಶಗಳು ಬಂದ ತಕ್ಷಣ ಅವರ ಕೋವಿಡ್ ಸೋಂಕಿನ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಲಾಯಿತು ಎಂದು ಡಾ ಸಿಂಗ್ ಹೇಳಿದ್ದಾರೆ.
ಡಿಸೆಂಬರ್ 23 ರಂದು ಥಾಯ್ ಪ್ರಜೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಅದೇ ಗುಂಪಿನ ಇತರ 27 ಮಂದಿಯನ್ನು ಸಹ ಪರೀಕ್ಷಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೋವಿಡ್‌ನ ಹೊಸ ರೂಪಾಂತರವನ್ನು ತಡೆಯಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಕ್ ಮಾಂಡವೀಯ ತಿಳಿಸಿದ್ದಾರೆ. ಜಿನೋಮ್ ಸಿಕ್ವಿನ್ಸಿಂಗ್ ಪರೀಕ್ಷೆ ನಡೆಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಟೆಸ್ಟ್ ನಡೆಸಲು ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications