ಉತ್ತರಾಖಂಡದ ಉದ್ಯಮಿ ಹತ್ಯೆಗೆ ನಾಗರಹಾವು ಬಳಸಿದ ಆರೋಪ: ಐವರ ಮೇಲೆ ಪ್ರಕರಣ
ಡೆಹರಾಡೂನ್, ಜುಲೈ. 19: ಉತ್ತರಾಖಂಡದ ಹಲ್ದ್ವಾನಿ ಪೊಲೀಸರು 30 ವರ್ಷದ ಉದ್ಯಮಿಯನ್ನು ಕೊಲ್ಲಲು ನಾಗರಹಾವು ಬಳಸಿದ ಆರೋಪದ ಮೇಲೆ ಐದು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಐವರು ಕೊಲೆಯನ್ನು ಅಪಘಾತ ಎಂದು ತೋರಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಪೊಲೀಸರು ಉತ್ತರ ಪ್ರದೇಶದ ಹಾವಾಡಿಗ ರಮೇಶ್ ನಾಥ್ ಎಂಬಾತನನ್ನು ಬಂಧಿಸಿದ್ದಾರೆ. ಇತರ ನಾಲ್ವರು ಆರೋಪಿಗಳೆಂದರೆ, ಸಂತ್ರಸ್ತ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಮಹಿ ಅಲಿಯಾಸ್ ಡಾಲಿ ಆರ್ಯ, ಆಕೆಯ ಸ್ನೇಹಿತ ದೀಪ್ ಕಂಡ್ಪಾಲ್ ಮತ್ತು ಆಕೆಯ ಮನೆ ಕೆಲಸದವರು ಕೊಲೆಗೆ ಸಹಾಯ ಮಾಡಿದ್ದಾರೆ. ಈ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

30 ವರ್ಷದ ವ್ಯಕ್ತಿ ತನ್ನ ಕಾರಿನೊಳಗೆ ಇಗ್ನಿಷನ್ ಆನ್ ಆಗಿದ್ದು, ತೀನ್‌ಪಾನಿ ಪ್ರದೇಶದ ಬಳಿ ರಸ್ತೆಯ ಬದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೈನಿತಾಲ್ ಪಂಕಜ್ ಭಟ್ ತಿಳಿಸಿದ್ದಾರೆ. ಜುಲೈ 15 ರಂದು, ವ್ಯಾಪಾರಿ ಅಂಕಿತ್ ಚೌಹಾಣ್ ಅವರ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಪೊಲೀಸರು ಮೃತನ ದೇಹವನ್ನು ಕಸ್ಟಡಿಗೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದರಲ್ಲಿ ಅವರು ಹಾವಿನ ವಿಷದಿಂದ ಸಾವನ್ನಪ್ಪಿದ್ದಾರೆ ಎಂದು ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದಾದ ಬಳಿಕ ಮೃತರ ಕಾಲ್ ಡಿಟೈಲ್ಸ್ ಪರಿಶೀಲಿಸಲಾಗಿದ್ದು, ವರು ಮಾಹಿ ಎಂಬ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ನಾವು ಮಹಿಳೆಯ ಕರೆ ದಾಖಲೆಗಳನ್ನು ಟ್ರ್ಯಾಕ್ ಮಾಡಿದ್ದೇವೆ. ಅಲ್ಲಿ ನಾವು ಯುಪಿ ಮೂಲದ ಹಾವಾಡಿಗ ರಮೇಶ್ ನಾಥ್ ಅವರೊಂದಿಗೆ ಸಂಪರ್ಕದಲ್ಲಿರುವುದು ಕಂಡು ಬಂದಿದೆ. ಅವರ ಫೋನ್ ನಂಬರ್ ಮೇಲೆ ಗಮನ ಹರಿಸಲಾಯಿತು. ಇದಾದ ನಂತರ ಅವರನ್ನು ಸೋಮವಾರ ಉತ್ತರ ಪ್ರದೇಶದಲ್ಲಿ ಬಂಧಿಸಲಾಯಿತು. ವಿಚಾರಣೆಯ ವೇಳೆ ಮಹಿಳೆ, ಆಕೆಯ ಸ್ನೇಹಿತ ದೀಪ್ ಕನ್ಪಾಲ್ ಮತ್ತು ಆಕೆಯ ಮನೆಕೆಲಸದವರರು ಸೇರಿ ಚೌಹಾಣ್ ಮೇಲೆ ನಾಗರಹಾವನ್ನು ಬಿಟ್ಟು ಕೊಲ್ಲುವ ಸಂಚು ರೂಪಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ" ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

"ಆರಂಭದಲ್ಲಿ, ಮುಚ್ಚಿದ ವಾಹನದಲ್ಲಿ ಇಂಗಾಲದ ಮಾನಾಕ್ಸೈಡ್ ಹೆಚ್ಚಿದ ಕಾರಣ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯ ನಂತರ, ಪೊಲೀಸರು ತನಿಖೆಯ ಹಾದಿಯನ್ನು ಬದಲಾಯಿಸಿದರು. ಜುಲೈ 14 ರಂದು ಚೌಹಾಣ್ ಮಾಹಿಯ ಮನೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ನಮಗೆ ತಿಳಿದುಬಂದಿದೆ. ಇತರ ನಾಲ್ವರು ಆರೋಪಿಗಳು ಘಟನಾ ಸ್ಥಳದಲ್ಲಿದ್ದರು, ಅವರು ಬಹುಶಃ ಅವನಿಗೆ ಮದ್ಯ ಅಥವಾ ಇನ್ನಾವುದೇ ವಸ್ತುವನ್ನು ಕುಡಿಸಿದ್ದಾರೆ. ಅವರು ಪ್ರಜ್ಞಾಹೀನರಾದಾಗ ಅವರ ಮೇಲೆ ನಾಗರಹಾವನ್ನು ಬಿಡಲಾಗಿದೆ" ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.
ಮೃತ ಅಂಕಿತ್ ಚೌಹಾಣ್ ಅವರ ಸಹೋದರಿ ಇಶಾ ಕೂಡ ಪೊಲೀಸರಿಗೆ ದೂರು ನೀಡಿದ್ದು, ಮಾಹಿ ಮತ್ತು ದೀಪ್ ಕನ್ಪಾಲ್ ಅವರನ್ನು ಶಂಕಿತರೆಂದು ಹೆಸರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ, ಹಲ್ದ್ವಾನಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಐವರು ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ.












Click it and Unblock the Notifications