ಗೂಗಲ್ ಎಚ್ಚರಿಕೆ ನಂತರ 48 ವೆಬ್ ಹ್ಯಾಕ್ ಮಾಹಿತಿ ಬಹಿರಂಗ
ವಾಷಿಂಗ್ಟನ್, ನವೆಂಬರ್ 29: ಭಾರತದಲ್ಲಿ 500ಕ್ಕೂ ಹೆಚ್ಚು ಬಳಕೆದಾರರು ಸೇರಿದಂತೆ ಜಾಗತಿಕವಾಗಿ 12 ಸಾವಿರ ಬಳಕೆದಾರರಿಗೆ ಸರ್ಕಾರಿ ಪ್ರಾಯೋಜಿತ ಸೈಬರ್ ದಾಳಿಯ ಬಗ್ಗೆ ಗೂಗಲ್ ಎಚ್ಚರಿಕೆ ನೀಡಿದ ಬೆನ್ನಲ್ಲೇ 48 ಕೇಂದ್ರ ಸಚಿವರ ವೆಬ್ ತಾಣಗಳು ಹ್ಯಾಕ್ ಆಗಿರುವ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.
ಅಕ್ಟೋಬರ್ 2019ರ ತನಕ ಕೇಂದ್ರ ಹಾಗೂ ರಾಜ್ಯ ಸಚಿವರ ವೆಬ್ ತಾಣಗಳು ಸೇರಿದಂತೆ 48 ವೆಬ್ ತಾಣಗಳು ಹ್ಯಾಕ್ ಆಗಿದ್ದವು ಎಂದು ಗುರುವಾರದಂಡು ಸಂಸತ್ತಿನಲ್ಲಿ ಮಾಹಿತಿ ನೀಡಲಾಗಿದೆ.
ಸಿಇಆರ್ ಟಿ- ಇನ್ ಮಾಹಿತಿಯಂತೆ 110ಕ್ಕೂ ಅಧಿಕ ವೆಬ್ ತಾಣಗಳು ಹ್ಯಾಕ್ ಆಗಿವೆ. ಈ ಪೈಕಿ 48 ಸಚಿವರುಗಳಿಗೆ ಸೇರಿದ್ದಾಗಿದೆ. 2018 ರಿಂದ 2019ರ ಅವಧಿಯಲ್ಲಿ ಈ ಕೃತ್ಯ ನಡೆದಿದೆ ಎಂಡು ಐಟಿ ಖಾತೆ ರಾಜ್ಯ ಸಚಿವ ಸಂಜಯ್ ಧೋತ್ರೆ ಲಿಖಿತ ಉತ್ತರ ನೀಡಿದರು.

ಗೂಗಲ್ ತನ್ನ ಬಳಕೆದಾರರ ಮಾಹಿತಿಯನ್ನು ಕೇಳುವಂತಹ ರೀತಿಯ ಇ-ಮೇಲ್‍ಗಳ ಮೂಲಕ ಹ್ಯಾಕ್ ಮಾಡುವುದು, ಸರ್ವರ್ ಮೇಲೆ ದಾಳಿ ನಡೆಸುವುದು, ಹ್ಯಾಕ್ ಮಾಡುವವರ ಬಗ್ಗೆ ತಿಳಿಯದಂತೆ ಎಚ್ಚರಿಕೆ ವಹಿಸುವುದು ಎಲ್ಲವೂ ವ್ಯವಸ್ಥಿತ ಸೈಬರ್ ದಾಳಿಯ ಭಾಗವಾಗಿದೆ.
ಸಿಇಆರ್ ಟಿ-ಇನ್ ಮಾಹಿತಿಯಂತೆ ಸೈಬರ್ ದಾಳಿ ನಡೆಸಿದವರ ಇಂಟರ್ನೆಟ್ ಪ್ರೊಟೊಕಾಲ್(ಐಪಿ) ವಿಳಾಸ ಹುಡುಕಿದರೆ ಚೀನಾ, ಪಾಕಿಸ್ತಾನ, ನೆದರ್ಲೆಂಡ್ಸ್, ಫ್ರಾನ್ಸ್, ತೈವಾನ್, ರಷ್ಯಾ, ಅಲ್ಜೀರಿಯಾ, ಸೆರ್ಬಿಯಾ ಹೀಗೆ ವಿವಿಧ ದೇಶಗಳ ಲೊಕೇಷನ್ ತೋರಿಸಿದೆ ಎಂದು ಸಚಿವ ಸಂಜಯ್ ವಿವರಿಸಿದರು(ಪಿಟಿಐ)












Click it and Unblock the Notifications