24 ಗಂಟೆಯಲ್ಲಿ ಭಾರತದಲ್ಲಿ 46,964 ಹೊಸ ಕೋವಿಡ್ ಪ್ರಕರಣ
ನವದೆಹಲಿ, ನವೆಂಬರ್ 01: ಭಾರತದಲ್ಲಿ 24 ಗಂಟೆಯಲ್ಲಿ 46,964 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 81,84,083ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ 24 ಗಂಟೆಯಲ್ಲಿ ಭಾರತದಲ್ಲಿ 470 ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 1,22,111.
ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,70,458. ಇದುವರೆಗೂ 74,91,513 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ವಿಶ್ವದಲ್ಲಿ ಕೋವಿಡ್ ಸೋಂಕಿತರು ಹೆಚ್ಚು ಇರುವ ರಾಷ್ಟ್ರಗಳಲ್ಲಿ ಭಾರತ 2ನೇ ಸ್ಥಾನದಲ್ಲಿದೆ.

ಅಕ್ಟೋಬರ್ 31ರ ತನಕ ದೇಶದಲ್ಲಿ 10,98,87,303 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಶನಿವಾರ ದೇಶದಲ್ಲಿ 10,91,239 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.
ರಾಜ್ಯಗಳ ಪಟ್ಟಿ : ಭಾರತದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದ್ಲಲಿ ಶನಿವಾರ 5,548 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 16,78,406ಕ್ಕೆ ಏರಿಕೆಯಾಗಿದೆ.
ಕರ್ನಾಟಕ ರಾಜ್ಯ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲಿಯೇ 2ನೇ ಸ್ಥಾನಕ್ಕೆ ಬಂದಿದೆ. ಶನಿವಾರ ರಾಜ್ಯದಲ್ಲಿ 3014 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 8,23,412.
ಆಂಧ್ರ ಪ್ರದೇಶ ರಾಜ್ಯ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶನಿವಾರ 2,783 ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,23,348ಕ್ಕೆ ಏರಿಕೆಯಾಗಿದೆ.
ತಮಿಳುನಾಡು 7,24,522. ಉತ್ತರ ಪ್ರದೇಶ 4,81,863. ಕೇರಳ 4,33,106. ದೆಹಲಿ 3,86,706. ಪಶ್ಚಿಮ ಬಂಗಾಳದಲ್ಲಿ 3,73,664 ಕೋವಿಡ್ ಪ್ರಕರಣಗಳಿವೆ.












Click it and Unblock the Notifications