ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 46,232 ಕೊರೊನಾ ಸೋಂಕಿತರು ಪತ್ತೆ

|
Google Oneindia Kannada News

ನವದೆಹಲಿ, ನವೆಂಬರ್ 21: ಭಾರತದಲ್ಲಿ 46,232 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 90,50,598 ಮಂದಿ ಕೊರೊನಾ ಸೋಂಕಿತರಿದ್ದಾರೆ.

ಒಂದೇ ದಿನದಲ್ಲಿ 564 ಮಂದಿ ಮೃತಪಟ್ಟಿದ್ದಾರೆ. 4,39,747 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 49,715 ಮಂದಿ ಗುನಂಉಖರಾಗಿದ್ದಾರೆ, ಇದುವರೆಗೆ 84,78,124 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

46,232 New Coronavirus Cases Reported In Last 24 Hours

ಇಲ್ಲಿಯವರೆಗೆ ಒಟ್ಟು 1,32,726ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾ ತಪಾಸಣೆ ಪ್ರಮಾಣ ಶನಿವಾರ 13 ಕೋಟಿ ದಾಟಿದೆ. ತಪಾಸಣೆ, ಪತ್ತೆ, ಮತ್ತು ಚಿಕಿತ್ಸೆ ಕಾರ್ಯತಂತ್ರ ಪಾಲನೆಯಾಗುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಪರೀಕ್ಷೆ ಪ್ರಮಾಣವನ್ನು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿಸಿರುವುದರಿಂದ ದೃಢಪಟ್ಟ ಪ್ರಕರಣಗಳ ಪ್ರಮಾಣವು ಅಂತಿಮವಾಗಿ ಕುಸಿಯಲಿದೆ.

2020 ರ ಜನವರಿಯಲ್ಲಿ ಪುಣೆಯ ಪ್ರಯೋಗಾಲಯದಲ್ಲಿ ಕೇವಲ ಒಂದು ಪರೀಕ್ಷೆ ನಡೆಸಿದ್ದು, ಇಂದು 13 ಕೋಟಿ ಪರೀಕ್ಷೆಗಳ ಮೈಲಿಗಲ್ಲು ತಲುಪುವಲ್ಲಿ ಭಾರತ ಬಹಳ ದೂರ ಕ್ರಮಿಸಿದೆ.

ವಿಸ್ತೃತ ಪ್ರಯೋಗಾಲಯಗಳ ಜಾಲ ಮತ್ತು ಹಲವಾರು ನೀತಿ ಕ್ರಮಗಳ ಮೂಲಕ ದೇಶಾದ್ಯಂತ ಪರೀಕ್ಷಾ ಪ್ರಮಾಣ ಹೆಚ್ಚಾಗುತ್ತಿದೆ.

Recommended Video

Amit Shah ಬೇಡದಿರೋ ಕಾರಣಕ್ಕೆ Twitterನಲ್ಲಿ ಟ್ರೆಂಡಿಂಗ್ | Oneindia Kannada

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ ಮತ್ತು ಸಂಘಟಿತ ಪ್ರಯತ್ನಗಳಿಂದ ದೇಶದಲ್ಲಿ 13,06,57,808 ಜನರನ್ನು ಪರೀಕ್ಷಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಐಸಿಎಂಆರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

English summary
46,232 New Coronavirus Cases and 564 death cases reported in last 24 Hours in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X