ಭಾರತ; 24 ಗಂಟೆಯಲ್ಲಿ 41,810 ಕೋವಿಡ್ ಪ್ರಕರಣ

ನವದೆಹಲಿ, ನವೆಂಬರ್ 29 : ಭಾರತದಲ್ಲಿ 24 ಗಂಟೆಯಲ್ಲಿ 41,810 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 93,92,920ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ನವೆಂಬರ್ 28ರ ಕೋವಿಡ್ ಪ್ರಕರಣಗಳ ಮಾಹಿತಿಯನ್ನು ನೀಡಿದೆ. 24 ಗಂಟೆಯಲ್ಲಿ 496 ಜನರು ಮೃತಪಟ್ಟಿದ್ದು, ಇದುವರೆಗೂ 1,36,696 ಜನರ ಸಾವನ್ನಪ್ಪಿದ್ದಾರೆ.

ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 4,53,956. ಕಳೆದ 24 ಗಂಟೆಯಲ್ಲಿ 42,298 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯ ತನಕ ಡಿಸ್ಚಾರ್ಜ್ ಆದವರ ಸಂಖ್ಯೆ 88,02,267.

 41,810 New COVID Cases Reported On November 28

ನವೆಂಬರ್ 28ರ ತನಕ ದೇಶದಲ್ಲಿ 13,95,03,803 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಶನಿವಾರ 12,83,449 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಎಲ್ಲಿ ಎಷ್ಟು ಪ್ರಕರಣಗಳು; ಶನಿವಾರ ಪಶ್ಚಿಮ ಬಂಗಾಳದಲ್ಲಿ 3,459 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 4,77,446ಕ್ಕೆ ಏರಿಕೆಯಾಗಿದೆ. ಆಂಧ್ರ ಪ್ರದೇಶದಲ್ಲಿ8,67,063, ತಮಿಳುನಾಡಿನಲ್ಲಿ 7,79,046, ಕೇರಳದಲ್ಲಿ 5,93,958 ಸೋಂಕಿತರು ಇದ್ದಾರೆ.

ಮುಂಬೈನಲ್ಲಿ ಶನಿವಾರ 1,063 ಹೊಸ ಪ್ರಕರಣ ದಾಖಲಾಗಿದೆ. 880 ಜನರು ಗುಣಮುಖರಾಗಿದ್ದು, 17 ಜನರು ಮೃತಪಟ್ಟಿದ್ದಾರೆ. ನಗರದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 2,81,874, ಸಕ್ರಿಯ ಪ್ರಕರಣಗಳು 12,753. ಮಹಾರಾಷ್ಟ್ರ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 18,14,515.

ಕರ್ನಾಟಕ ರಾಜ್ಯ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶನಿವಾರ 1522 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 8,82,608ಕ್ಕೆ ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+