ಶೋಪಿಯಾನ್ ನಲ್ಲಿ ಉಗ್ರಗಾಮಿಗಳ ದಾಳಿ, ಹುತಾತ್ಮರಾದ ನಾಲ್ವರು ಪೊಲೀಸರು
ಶ್ರೀನಗರ್, ಅಗಸ್ಟ್ 29: ಜಮ್ಮು- ಕಾಶ್ಮೀರದ ಶೋಪಿಯಾನ್ ನ ಅರಹಮಾ ಪ್ರದೇಶದಲ್ಲಿ ಬುಧವಾರ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಪೊಲೀಸ್ ಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಅರಹಮಾ ಗ್ರಾಮದಲ್ಲಿರುವ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮುಖ್ಯ ಕಚೇರಿಯ ಬೆಂಗಾವಲು ಪಡೆಯ ಪೊಲೀಸರ ಮೇಲೆ ಈ ದಾಳಿ ನಡೆದಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಭದ್ರತಾ ಸಿಬ್ಬಂದಿಯಿಂದ ಮೂರು ಎಕೆ-47ಗಳನ್ನು ಉಗ್ರಗಾಮಿಗಳು ಕಸಿದುಕೊಂಡು ಹೋಗಿದ್ದಾರೆ.

ಸದ್ಯಕ್ಕೆ ಆ ಪ್ರದೇಶದ ಸುತ್ತ ಬಿಗಿ ಪಹರೆಯನ್ನು ಹಾಕಲಾಗಿದೆ. ಈ ದಾಳಿಯಲ್ಲಿ ಭಾಗವಹಿಸಿದ ಉಗ್ರಗಾಮಿಗಳನ್ನು ಹಿಡಿಯಲು ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಜೈಷ್-ಇ-ಮೊಹ್ಮದ್ ಹಾಗೂ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಗಳು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿವೆ.












Click it and Unblock the Notifications