24 ಗಂಟೆಯಲ್ಲಿ ಭಾರತದಲ್ಲಿ 37,724 ಹೊಸ ಕೋವಿಡ್ ಪ್ರಕರಣ
ನವದೆಹಲಿ, ಜುಲೈ 22 : ಭಾರತದಲ್ಲಿ 24 ಗಂಟೆಯಲ್ಲಿ 37,724 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 11,92,915ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ಮಂಗಳವಾರ ಬೆಳಗ್ಗೆ 8 ರಿಂದ ಬುಧವಾರ ಬೆಳಗ್ಗೆ 8ಗಂಟೆಯ ತನಕ 37,724 ಹೊಸ ಪ್ರಕರಣ ದಾಖಲಾಗಿದ್ದು, 648 ಜನರು ಮೃತಪಟ್ಟಿದ್ದಾರೆ.

ದೇಶದಲ್ಲಿ ಕೋವಿಡ್ - 19 ಸೋಂಕಿತರ ಸಂಖ್ಯೆ 11,92,915ಕ್ಕೆ ಏರಿಕೆಯಾಗಿದೆ. 411133 ಸಕ್ರಿಯ ಪ್ರಕರಣಗಳಿವೆ. 7,53,050 ಜನರು ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 28,732.
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ 63.12ರಷ್ಟಿದೆ. ಸೋಂಕು ಹಬ್ಬುವ ಪ್ರಮಾಣ 10.99ರಷ್ಟಿದೆ. ಇದುವರೆಗೂ 1.47 ಕೋಟಿ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಮಂಗಳವಾರ 3,43,243 ಮಾದರಿಗಳ ಪರೀಕ್ಷೆ ನಡೆಸಲಾಗಿದೆ.
ಮಹಾರಾಷ್ಟ್ರದಲ್ಲಿ 8,336, ತಮಿಳುನಾಡಿನಲ್ಲಿ 4,965, ಕರ್ನಾಟಕದಲ್ಲಿ 3,649, ಉತ್ತರ ಪ್ರದೇಶದಲ್ಲಿ 2,128 ಮತ್ತು ದೆಹಲಿಯಲ್ಲಿ 1,349 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ.












Click it and Unblock the Notifications