ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Facebook: ಮಹಿಳೆಗೆ 22.67ಲಕ್ಷ ರೂಪಾಯಿ ವಂಚಿಸಿದ ಫೇಸ್‌ಬುಕ್‌ ಗೆಳೆಯ !

|
Google Oneindia Kannada News

ನಂಬಿದವರಿಂದಲೇ ಮೋಸವಾಗುತ್ತದೆ ಎನ್ನುವ ಮಾತಿಗೆ ಪುಷ್ಠಿ ನೀಡುವಂತೆ ಮಹಿಳೆಯೋರ್ವಳೊಂದಿಗೆ ಫೇಸ್‌ಬುಕ್‌ ಮೂಲಕ ಸ್ನೇಹ ಬೆಳೆಸಿದ ವ್ಯಕ್ತಿಯೊಬ್ಬನು ಬರೋಬ್ಬರಿ 22.67 ಲಕ್ಷ ರೂಪಾಯಿ ಪಡೆದು ಮರಳಿಸದೇ ವಂಚಿಸಿದ ಘಟನೆ ಮುಂಬೈನ ಥಾಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಥಾಣೆ ನಗರದಲ್ಲಿ ವಾಸವಾಗಿರುವ 36 ವರ್ಷದ ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ ವ್ಯಕ್ತಿಯೋರ್ವನು 22.67 ಲಕ್ಷ ರೂಪಾಯಿ ಪಡೆದು ಮರಳಿ ನೀಡದೆ ವಂಚಿಸಿದ್ದಾನೆ. ವಂಚಕನನ್ನು ಬಂಧಿಸಿ ನ್ಯಾಯ ವದಗಿಸುವಂತೆ ಮಹಿಳೆ ಪೋಲಿಸ್‌ ಠಾಣೆಯ ಮೇಟ್ಟಿಲೇರಿದ್ದಾಳೆ. ಮಹಿಳೆಯು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡ ಪೋಲಿಸರು ತನಿಖೆ ನಡೆಸಲಾಗುತ್ತಿದೆ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಟ್ಟಣದಲ್ಲಿ ಆನ್‌ಲೈನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಗೆ ಫೆಬ್ರವರಿ 2022ರಲ್ಲಿ ಫೇಸ್‌ಬುಕ್‌ ಮೂಲಕ ಪರಿಚಯವಾಗಿದೆ. ನಂತರ ಇಬ್ಬರ ನಡುವೆ ನಡೆದ ಮಾತು-ಕತೆಯಿಂದ ಸ್ನೇಹಾಂಕುರವಾಗಿದೆ. ದಿನಕಳೆದಂತೆ ಗೆಳೆತನ ಮುಂದುವರೆದು ಚರ್ಚಿಸುತ್ತಿರುವಾಗ, ಆ ವ್ಯಕ್ತಿ ತನ್ನ ತಾಯಿಯ ಚಿಕಿತ್ಸೆಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾನೆ. ಆರ್ಥಿಕ ಸಹಾಯ ಮಾಡುವಂತೆ ಮಹಿಳೆಯ ಮುಂದೆ ಅಂಗಲಾಚಿ ಬೇಡಿಕೊಂಡಿದ್ದಾನೆ. ಮಹಿಳೆ ಈ ಕೊರಿಕೆಯನ್ನು ಆರಂಭದಲ್ಲಿ ನಿರಾಕಸಿದ್ದಾಳೆ. ಬೆಂಬಿಡದ ಭೂತನಂತೆ ಕಾಡತೋಡಗಿದಾಗ ಮಹಿಳೆ ಹಣ ನೀಡಲು ಒಪ್ಪಿಕೊಂಡಿದ್ದಾಳೆ.

36 Year Old woman from Thane duped of Rs 22 lakh by Facebook friend

ಮೋಡಿಯ ಮಾತುಗಳಿಗೆ ಮರುಳಾದ ಮಹಿಳೆಯು ಹಂತ-ಹಂತವಾಗಿ 7,25,000 ರೂಪಾಯಿ ನೀಡಿದ್ದಾಳೆ ಅಷ್ಟೇ ಅಲ್ಲದೇ 15,42,688 ರೂಪಾಯಿ ಮೌಲ್ಯದ ಚಿನ್ನಾಭರಣವನ್ನೂ ಸಹ ನೀಡಿದ್ದಾಳೆ. ಕೆಲವು ದಿನಗಳ ನಂತರ ಹಣ ಮತ್ತು ಚಿನ್ನಾಭರಣ ಮರಳಿಸುವಂತೆ ಕೇಳಿಕೊಂಡಿದ್ದಾಳೆ. ನಿಮ್ಮ ಹಣವನ್ನು ವಾಪಸ್‌ ಕೊಡುತ್ತೇನೆ ಎಂದು ನಂಬಿಸಿ ಹಲವು ದಿನಗಳಿಂದ ಕರೆಗಳನ್ನು ಸ್ವೀಕರಿಸದೆ ನಿರಾಕರಿಸಿದ್ದಾನೆ. ಕಳೆದ ಕೆಲವು ದಿನಗಳ ಹಿಂದೆ ಪೋನ್‌ ಸ್ವಿಚ್‌ ಆಫ್‌ ಆಗಿದ್ದು, ತಕ್ಷಣವೇ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ.

ತಾಯಿ ವೈದ್ಯೋಪಚಾರದ ನೆಪ !

ಮಹಿಳೆಯೊಂದಿಗೆ ಸಲಿಗೆಯಿಂದ ವರ್ತಿಸತೊಡಗಿದ್ದ ವ್ಯಕ್ತಿ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಹಲವಾರು ಬಾರಿ ಹಣ ಪಡೆದುಕೊಂಡಿದ್ದಾನೆ. ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡ ಹೋಗಬೇಕು. ತಾಯಿಗೆ ಔಷದೋಪಚಾರವಾಗದಿದ್ದರೇ ಬದುಕುಳಿಯುವುದಿಲ್ಲ ಎಂಬ ಕುಂಟು ನೆಪ ಹೇಳಿದ್ದಾನೆ. ಅಷ್ಟೇ ಅಲ್ಲದೇ ಈಗಾಗಲೇ ಹಲವು ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡಿದ್ದು, ಇಎಂಐ ಬರಿಸಬೇಕು ಎಂದು ಸುಳ್ಳು ಹೇಳಿ ಮಹಿಳೆಯಿಂದ ಹಣ ಪೀಕಿದ್ದಾನೆ.

ಥಾಣೆಯ ವರ್ತಕ್‌ ನಗರ ಪೋಲಿಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಗೊಂಡು ತನಿಖೆ ಚುರುಕುಗೊಳಿಸಿರುವ ಪೋಲಿಸರು ವಂಚಕನ ಬಂಧನಕ್ಕೆ ಜಾಲ ಬೀಸಿದ್ದಾರೆ.

English summary
A 36-year-old Thane-based woman was duped by a person she befriended on Facebook of Rs 22.67 lakh and did not return it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X