ನಾಲ್ಕು ವರ್ಷದಲ್ಲಿ 30 ವಿಮಾನ ಪತನ, 41 ಪೈಲೆಟ್‌ಗಳ ಸಾವು
ಬೆಂಗಳೂರು, ಫೆಬ್ರವರಿ 25 : ಕಳೆದ ನಾಲ್ಕು ವರ್ಷಗಳಲ್ಲಿ 41 ಭಾರತೀಯ ವಾಯುಪಡೆ ಪೈಲೆಟ್‌ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಫೆ. 20ರಂದು ಬೆಂಗಳೂರಿನಲ್ಲಿ ಸೂರ್ಯ ಕಿರಣ್ ವಿಮಾನ ಅಪಘಾತದಲ್ಲಿ ಒಬ್ಬ ಪೈಲೆಟ್ ಸಾವನ್ನಪ್ಪಿದ್ದರು.
ನಾಲ್ಕು ವರ್ಷಗಳಲ್ಲಿ 30 ವಿಮಾನಗಳು ಪತನಗೊಂಡಿವೆ. 2018-19ನೇ ಸಾಲಿನಲ್ಲಿಯೇ 8 ವಿಮಾನ ಅಪಘಾತ ಪ್ರಕರಣಗಳು ನಡೆದಿದ್ದು, ಮೂವರು ಪೈಲೆಟ್‌ಗಳು ಮೃತಪಟ್ಟಿದ್ದಾರೆ.
ಫೆ.20ರಂದು ಬೆಂಗಳೂರಿನ ಯಲಹಂಕದಲ್ಲಿ ಏರ್ ಶೋಗೆ ತರಬೇತಿ ನಡೆಸುತ್ತಿದ್ದ ಸೂರ್ಯ ಕಿರಣ್ ವಿಮಾನಗಳು ಡಿಕ್ಕಿಯಾಗಿದ್ದವು. ಒಬ್ಬ ಪೈಲೆಟ್ ಈ ಅಪಘಾತದಲ್ಲಿ ಮೃತಪಟ್ಟಿದ್ದರು.

2015-16ರಲ್ಲಿ 6, 2016-17ರಲ್ಲಿ 10, 2017-18ರಲ್ಲಿ 6, 2018-19ರಲ್ಲಿ 8 ವಿಮಾನ ಅಪಘಾತ ಪ್ರಕರಣಗಳು ನಡೆದಿವೆ. 2016-17ರಲ್ಲಿ ಹೆಚ್ಚು ಎಂದರೆ 29 ಪೈಲೆಟ್‌ಗಳು ವಿಮಾನ ಅಪಘಾತದಲ್ಲಿ ಮರಣಹೊಂದಿದ್ದಾರೆ.
2019ರ ಎರಡು ತಿಂಗಳಿನಲ್ಲಿ ಮೂರು ವಿಮಾನಗಳು ಪತನಗೊಂಡಿವೆ. ಫೆ.1ರಂದು ಬೆಂಗಳೂರಿನಲ್ಲಿ ಮೀರಾಜ್ ವಿಮಾನ ಪತನಗೊಂಡು ಇಬ್ಬರು ಪೈಲೆಟ್ ಮೃತಪಟ್ಟಿದ್ದರು. ಜನವರಿ 28 ಮತ್ತು ಫೆಬ್ರವರಿ 20 ರಂದು ಎರಡು ವಿಮಾನ ಪತನದ ಪ್ರಕರಣದ ನಡೆದಿದೆ.












Click it and Unblock the Notifications