30 ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರಷ್ಟೆ: ಕಮಲ್ ನಾಥ್
ಭೋಪಾಲ್, ಸೆಪ್ಟೆಂಬರ್ 17: '30 ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರಷ್ಟೆ' ಎನ್ನುವ ಮೂಲಕ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್ ಯೂಟರ್ನ್ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಕಮಲ್ ನಾಥ್, ಮೂವತ್ತು ಶಾಸಕರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದರು.
ಅವರ ಈ ಹೇಳಿಕೆ ಬಿಜೆಪಿ ವಲಯದಲ್ಲಿ ಸಾಕಷ್ಟು ವಿವಾದ ಎಬ್ಬಿಸಿದ ಬೆನ್ನಲ್ಲೇ ತಮ್ಮ ಮಾತನ್ನು ಬದಲಾಯಿಸಿ, 'ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರಷ್ಟೆ. ಆದರೆ ಯಾಕಾಗಿ ಸಂಪರ್ಕದಲ್ಲಿದ್ದಾರೆ ಎಂಬುದನ್ನು ನಾನು ಈಗಲೇ ಹೇಳಲು ಇಷ್ಟಪಡುವುದಿಲ್ಲ. ಅದು ಕ್ರಮೇಣ ಗೊತ್ತಾಗುತ್ತದೆ' ಎಂದಿದ್ದಾರೆ.

ಇದೇ ಡಿಸೆಂಬರ್ ತಿಂಗಳಿನಲ್ಲಿ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಟಿಕೆಟ್ ರಾಜಕಾರಣ ಆರಂಭವಾಗಿದೆ. ಇದುವರೆಗೂ 2000 ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 30 ಬಿಜೆಪಿ ಶಾಸಕರೂ ಇದ್ದಾರೆ ಎಂದು ಕಮಲ್ ನಾಥ್ ಹೇಳಿದ್ದರು.












Click it and Unblock the Notifications