ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾದ ಚೆನ್ನೈನ ಅಪ್ಪ, ಅಮ್ಮ, ಮಗಳು

|
Google Oneindia Kannada News

ತ್ರಿಶೂರ್, ಜೂನ್. 08: ಚೆನ್ನೈನಲ್ಲಿ ನೆಲೆಸಿರುವ ಮೂವರು ಸದಸ್ಯರ ಕುಟುಂಬವೊಂದು ಈ ಮಧ್ಯ ಕೇರಳ ಜಿಲ್ಲೆಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಒಬ್ಬ ವ್ಯಕ್ತಿ, ಆತನ ಹೆಂಡತಿ ಮತ್ತು ಅವರ ಮಗಳು ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮೂವರು ಸದಸ್ಯರ ಕುಟುಂಬವು ಕೆಲವು ದಿನಗಳ ಹಿಂದೆ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು ಎಂದು ಪೊಲೀಸರು ಹೋಟೆಲ್ ಸಿಬ್ಬಂದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ಹಿಂದಿನ ರಾತ್ರಿ ಕೊಠಡಿಯಿಂದ ಚೆಕ್ ಔಟ್ ಮಾಡುವುದಾಗಿ ಮನೆಯವರು ಹೋಟೆಲ್ ಸಿಬ್ಬಂದಿಗೆ ಮೊದಲೇ ಹೇಳಿದ್ದರು. ಅವರಿಗೆ ಕರೆ ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಹೋಟೆಲ್ ನೌಕರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

3 member family from Chennai found dead in Kerala

ಹೋಟೆಲ್‌ಗೆ ಬಂದ ಪೊಲೀಸರು ಕೊಠಡಿಯ ಬೀಗ ಒಡೆದು ಒಳ ಪ್ರವೇಶಿಸಿದ್ದಾರೆ. ಕೋಣೆಯೊಳಗೆ ಮೂವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಕೋಣೆಯಿಂದ ಪತ್ತೆಯಾದ ಗುರುತಿನ ಚೀಟಿಗಳ ಪ್ರಕಾರ, ಅವರು ಚೆನ್ನೈನಲ್ಲಿ ನೆಲೆಸಿದ್ದಾರೆ. ಆದರೆ, ಕೇರಳದಲ್ಲಿರುವ ಅವರ ಸ್ಥಳೀಯ ಜಾಗವನ್ನು ನಾವು ಇನ್ನೂ ಕಂಡುಹಿಡಿದಿಲ್ಲ" ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐಗೆ ವರದಿ ಮಾಡಿದೆ.

ಕೋಲಾರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ; ಕಿರುಕುಳದ ಆರೋಪ ಮಾಡಿದ ಕುಟುಂಬಕೋಲಾರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ; ಕಿರುಕುಳದ ಆರೋಪ ಮಾಡಿದ ಕುಟುಂಬ

ಇನ್ನು, ಮೂವರ ಮೃತದೇಹದ ಬಳಿ ಸಿಕ್ಕಿರುವ ಸೂಸೈಡ್ ನೋಟ್ ಪ್ರಕಾರ ಆರ್ಥಿಕ ಸಮಸ್ಯೆಗಳು ಅವರನ್ನು ಆತ್ಮಹತ್ಯೆಯಂತಹ ಹೆಜ್ಜೆ ಇಡಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

3 member family from Chennai found dead in Kerala

(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಮಾನಸಿಕ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )

English summary
A three member family settled in Chennai, was found dead in a hotel room in this central Kerala district says police . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X