ಪಾಂಪೋರ್‌ನಲ್ಲಿ ಉಗ್ರರ ದಾಳಿ, ಹುತಾತ್ಮರಾದ 3 ಯೋಧರು

Posted By:
Subscribe to Oneindia Kannada

ಶ್ರೀನಗರ, ಡಿಸೆಂಬರ್ 17: ಇಲ್ಲಿನ ಪಾಂಪೋರ್‌ನ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಉಗ್ರರು ದಾಳಿ ನಡೆಸಿದ ಘಟನೆ ನಡೆದಿದೆ.ಭಾರತೀಯ ಸೇನಾ ಯೋಧರ ಮೇಲೆ ನಡೆದ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಪಾಂಪೋರ್ ನ ಹೆದ್ದಾರಿಯಲ್ಲಿ ಬೈಕಿನಲ್ಲಿ ಬಂದ ಉಗ್ರರು ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ.ಉಗ್ರರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಲಾಗಿದೆ.

3 jawans martyred in Pampore ambush

ಪುಲ್ವಾನಾ ಜಿಲ್ಲೆಯ ಪಾಂಪೋರ್ ನಲ್ಲಿ ಸೇನಾ ವಾಹನವೊಂದರ ಮೇಲೆ ಉಗ್ರರು ಹಠಾತ್ ಆಗಿ ದಾಳಿ ನಡೆಸಿದ್ದು, ಶ್ರೀನಗರ ಹಾಗೂ ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಈಗ ಪರಿಸ್ಥಿತಿ ತಿಳಿಗೊಂಡಿದೆ.

ಈ ಗುಂಡಿನ ಚಕಮಕಿಯಲ್ಲಿ ಮೂವರು ಭಾರತೀಯ ಯೋಧರು ಮೃತಪಟ್ಟಿದ್ದು, ಉಗ್ರರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸೇನೆ ಹಾಗೂ ಉಗ್ರರ ನಡುವೆ ಎನ್ ಕೌಂಟರ್ ನಡೆದಿತ್ತು. ಸರ್ಜಿಕಲ್ ಸ್ತ್ರೈಕ್ ನಂತರ ಈ ರೀತಿ ಹಠಾತ್ ದಾಳಿಗಳು ಹೆಚ್ಚಾಗುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three soldiers of the Indian Army were killed in a terrorist attack along Pampore highway in Jammu and Kashmir on Saturday. Search operations are underway to hunt down militants who opened fire at an army convoy late Saturday afternoon.
Please Wait while comments are loading...