ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ, ಏಮ್ಸ್‌ನ 3 ವೈದ್ಯರ ದುರ್ಮರಣ

ನವದೆಹಲಿ, ಮಾರ್ಚ್ 18 : ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ವೈದ್ಯರು ಮೃತಪಟ್ಟಿದ್ದಾರೆ. ಮೂವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ವೈದ್ಯರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭಾನುವಾರ ಮುಂಜಾನೆ 2.30ರ ಸುಮಾರಿಗೆ ಈ ಅಪಘಾತ ನಡೆದಿದೆ.

ವೈದ್ಯರು ಪ್ರಯಾಣಿಸುತ್ತಿದ್ದ ಕಾರು ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಾರಿನಲ್ಲಿದ್ದ ಎಲ್ಲರೂ ವೈದ್ಯರಾಗಿದ್ದರು. ದೆಹಲಿಯಿಂದ ಎಲ್ಲರೂ ಆಗ್ರಾಕ್ಕೆ ತೆರಳುತ್ತಿದ್ದರು.

3 AIIMS doctors killed in accident on Yamuna Expressway

ಇನ್ನೋವಾ ಕಾರಿನಲ್ಲಿ ಎಲ್ಲರೂ ಪ್ರಯಾಣಿಸುತ್ತಿದ್ದರು. ಡಾ.ಯಶ್‌ಪಾಲ್, ಡಾ.ಹರ್ಷದ್ ಮತ್ತು ಡಾ.ಹಂಬಾಳ ಮೃತಪಟ್ಟವರು. ಅಪಘಾತದಲ್ಲಿ ಗಾಯಗೊಂಡ ಡಾ.ಮಹೇಶ್, ಡಾ.ಅಭಿನವ್ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನೋವಾ ಕಾರಿನ ಚಾಲಕ ಸಹ ಅಪಘಾತದಲ್ಲಿ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ವರದಿಗಳ ಪ್ರಕಾರ ಡಾ.ಹರ್ಷದ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಎಲ್ಲರೂ ತೆರಳುತ್ತಿದ್ದರು.

ಮಾರ್ಚ್ 13ರಂದು ಇದೇ ಮಾರ್ಗದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು. ಆಂಬ್ಯುಲೆನ್ಸ್ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿತ್ತು. ಮುಂಜಾನೆ 5 ಗಂಟೆಗೆ ಈ ಅಪಘಾತ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+