ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಶೇ. 28ರಷ್ಟು ರೈಲುಗಳು ಸರಿಯಾದ ಟೈಂಗೆ ನಿರ್ದಿಷ್ಟ ನಿಲ್ದಾಣ ಮುಟ್ಟುತ್ತಿಲ್ಲ

|
Google Oneindia Kannada News

ಬೆಂಗಳೂರು, ನವೆಂಬರ್‌ 15: ಭಾರತೀಯ ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕಳೆದ ಆರು ವರ್ಷಗಳಿಂದ ರಾಜಧಾನಿ ಎಕ್ಸ್‌ಪ್ರೆಸ್‌, ದುರಂತೋ ಹಾಗೂ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ಬಹುತೇಕ ರೈಲುಗಳು ನಿಗದಿತ ಸಮಯಕ್ಕೆ ತಲುಪುತ್ತಿಲ್ಲ ಎಂದು ತಿಳಿದು ಬಂದಿದೆ.

2016ರಿಂದ 2022ರ ವರೆಗಿನ ಒಟ್ಟು 76,89,535 ಪ್ರಯಾಣ ಟ್ರಿಪ್‌ಗಳಲ್ಲಿ ಸುಮಾರು 18,29,904 ಬಾರಿ ರೈಲುಗಳು ವಿಳಂಬವಾಗಿ ನಿರ್ದಿಷ್ಟ ನಿಲ್ದಾಣ ಮುಟ್ಟುತ್ತಿವೆ. ಆದರೆ 58,59,631 ರೈಲುಗಳು ಸಮಯಕ್ಕೆ ಸರಿಯಾಗಿ ಗಮ್ಯಸ್ಥಾನವನ್ನು ನಿಗದಿತ ವೇಳೆಯಲ್ಲಿ ತಲುಪುವಲ್ಲಿ ಯಶಸ್ವಿಯಾಗಿವೆ. ವಿಜಯವಾಡ ಮೂಲದ ಐ ರವಿಕುಮಾರ್ ಎಂಬ ಮಾಹಿತಿ ಹಕ್ಕು ಕಾರ್ಯಕರ್ತರು ಆರ್‌ಟಿಐ ಅಡಿಯಲ್ಲಿ ಕೇಳಿರುವ ಮಾಹಿತಿಯ ಆಧಾರದ ಮೇಲೆ ರೈಲ್ವೆ ಸಚಿವಾಲಯವು ಈ ಮಾಹಿತಿಯನ್ನು ನೀಡಿದೆ.

ಗುಜರಾತ್‌: ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟಗುಜರಾತ್‌: ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ

ಆರ್‌ಟಿಐ ನೀಡಿರುವ ಮಾಹಿತಿಯ ಪ್ರಕಾರ 2016ರಿಂದ 2022ರ ಸೆಪ್ಟೆಂಬರ್‌ ನಡುವಿನ ಒಟ್ಟು 43,859 ಟ್ರಿಪ್‌ಗಳಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಬರೋಬ್ಬರಿ 11,251 ಟ್ರಿಪ್‌ಗಳಲ್ಲಿ ಸಮಯಕ್ಕೆ ನಿಗದಿತ ಸ್ಥಳಕ್ಕೆ ತಲುಪುವಲ್ಲಿ ವಿಫಲವಾಗಿದೆ ಎಂದು ತಿಳಿದು ಬಂದಿದೆ. ಅಂತೆಯೇ ಒಟ್ಟು 34,390 ಡರೊಂಟೊ ಟ್ರಿಪ್‌ಗಳಲ್ಲಿ 9,662 ಬಾರಿ ವಿಳಂಬವಾಗಿದೆ.

ಅಲ್ಲದೆ 24,728 ಟ್ರಿಪ್‌ಗಳು ಸಮಯಕ್ಕೆ ಸರಿಯಾಗಿ ಬಂದಿವೆ. ಶತಾಬ್ದಿ ಎಕ್ಸ್‌ಪ್ರೆಸ್‌ ಸಮಯ ಪಾಲನೆ ಕೂಡಾ ಭಿನ್ನವಾಗೇನು ಇರಲಿಲ್ಲ. ಇದು ಒಟ್ಟು 63,879 ಟ್ರಿಪ್‌ಗಳಲ್ಲಿ 9,416 ಬಾರಿ ವಿಳಂಬವಾಗಿ ನಿಗದಿತ ಸ್ಥಳವನ್ನು ತಲುಪಿದೆ. ಅಲ್ಲದೆ 54,463 ಟ್ರಿಪ್‌ಗಳನ್ನು ನಿಗದಿತ ಸಮಯದಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

ಮೈಸೂರು- ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ವೇಗ ಹೆಚ್ಚಳ ಸಾಧ್ಯತೆಮೈಸೂರು- ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ವೇಗ ಹೆಚ್ಚಳ ಸಾಧ್ಯತೆ

ಮೇಲ್‌ ಎಕ್ಸ್‌ಪ್ರೆಸ್‌ ತನ್ನ ಒಟ್ಟು 20,12,241 ಟ್ರಿಪ್‌ಗಳಲ್ಲಿ ಸರಿಯಾದ ಸಮಯ ಪಾಲಿಸದೇ ವಿಳಂಬವಾಗಿ ನಿಗದಿತ ಸ್ಥಳವನ್ನು ಮುಟ್ಟಿದೆ. ಇದು 3,38,254 ಬಾರಿ ವಿಳಂಬವಾಗಿ ಸ್ಥಳಕ್ಕೆ ಆಗಮಿಸಿದೆ. ಅಲ್ಲದೆ 16,28,987 ಬಾರಿ ನಿಗದಿತ ಸ್ಥಳಕ್ಕೆ ಸರಿಯಾಗಿ ಬಂದು ತಲುಪಿದೆ.

ಇನ್ನು ಪ್ಯಾಸೆಂಜರ್‌ ರೈಲುಗಳ ಪ್ರಯಾಣ ಮಟ್ಟವು ಕಳಪೆಯಾಗಿದೆ. ಇವು 54,65,085 ಟ್ರಿಪ್‌ಗಳಲ್ಲಿ 14,07,596 ಟ್ರಿಪ್‌ಗಳು ವಿಳಂಬವಾಗಿ ನಿರ್ದಿಷ್ಟ ನಿಲ್ದಾಣಕ್ಕೆ ಬಂದು ತಲುಪಿದ್ದು, ಕೇವಲ 40,57,489 ಟ್ರಿಪ್‌ಗಳನ್ನು ಸಮಯಕ್ಕೆ ಸರಿಯಾಗಿ ಬಂದು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

 ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತಿದೆ

ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತಿದೆ

ಐ ರವಿಕುಮಾರ್‌ ಅವರು ಹೇಳುವಂತೆ ಈ ರೈಲುಗಳು ಸಕಾಲದಲ್ಲಿ ಅಂತಿಮ ಸ್ಥಳಗಳನ್ನು ತಲುಪುವಲ್ಲಿ ಯಶಸ್ವಿಯಾದರೂ ಮಾರ್ಗದ ನಿಲ್ದಾಣಗಳ ಆಗಮನ ಮತ್ತು ನಿರ್ಗಮನ ಸಮಯವನ್ನು ನಿರ್ವಹಿಸಲು ಅವರಿಗೆ ಸಾಧ್ಯವಾಗಿಲ್ಲ. ರೈಲ್ವೆ ಸೇವೆಗಳ ನೆಪದಲ್ಲಿ ಪ್ರಯಾಣಿಕರ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿದೆ ಎಂದು ಹೇಳಿದ್ದಾರೆ.

 76,89,535 ಟ್ರಿಪ್‌ಗಳಲ್ಲಿ 18,29,904 ವಿಳಂಬ

76,89,535 ಟ್ರಿಪ್‌ಗಳಲ್ಲಿ 18,29,904 ವಿಳಂಬ

ಶೇ. 25.76 ರಷ್ಟು ರೈಲುಗಳನ್ನು ಬಳಸುವ ಪ್ರಯಾಣಿಕರು ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರು. ಒಟ್ಟು 76,89,535 ಟ್ರಿಪ್‌ಗಳ ಸಂಖ್ಯೆಯಲ್ಲಿ ಸರಿಯಾದ ಸಮಯಕ್ಕೆ ಶೇ. 76.20ರಷ್ಟು 58,59,631 ರೈಲುಗಳು ಸರಿಯಾಗಿ ಬಂದರೆ 18,29,904 ರೈಲುಗಳು ವಿಳಂಬವಾಗಿದೆ. ಇದೇ ರಾಜಧಾನಿ ಎಕ್ಸ್‌ಪ್ರೆಸ್‌ ಒಟ್ಟು 43,859 ಟ್ರಿಪ್‌ಗಳಲ್ಲಿ 32,608 ಟ್ರಿಪ್‌ಗಳು ಅಂದರೆ ಶೇ. 74.35ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಬಂದರೆ 11,251 ಟ್ರಿಪ್‌ಗಳು ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

 ಶೇ. 71.90ರಷ್ಟು ರೈಲುಗಳು ಸಮಯಕ್ಕೆ ಬಂದಿವೆ

ಶೇ. 71.90ರಷ್ಟು ರೈಲುಗಳು ಸಮಯಕ್ಕೆ ಬಂದಿವೆ

ಇನ್ನೂ ದುರೊಂತೋ ರೈಲು ತನ್ನ ಒಟ್ಟು 39,390 ಟ್ರಿಪ್‌ಗಳಲ್ಲಿ ಸಮಯಕ್ಕೆ ಸರಿಯಾಗಿ 24,728 ಅಂದರೆ ಶೇ. 71.90ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಬಂದಿವೆ. ಇದರಲ್ಲಿ 9,662 ಅಂದರೆ ಶೇ. 28.10ರಷ್ಟು ಟ್ರಿಪ್‌ಗಳು ವಿಳಂಬವಾಗಿವೆ. ಇನ್ನೂ ಶತಾಬ್ದಿ ರೈಲುಗಳ ಒಟ್ಟು 70,081 ಟ್ರಿಪ್‌ಗಳಲ್ಲಿ ಸಮಯಕ್ಕೆ 61,356 ಅಂದರೆ ಶೇ. 87.55ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಬಂದರೆ 8,725 ಅಂದರೆ ಶೇ. 12.45ರಷ್ಟು ವಿಳಂಬವಾಗಿದೆ.

 ಪ್ಯಾಸೆಂಜರ್ ರೈಲು 54,65,085 ಟ್ರಿಪ್‌ಗಳಲ್ಲಿ 14,07,596 ಬಾರಿ ವಿಳಂಬ

ಪ್ಯಾಸೆಂಜರ್ ರೈಲು 54,65,085 ಟ್ರಿಪ್‌ಗಳಲ್ಲಿ 14,07,596 ಬಾರಿ ವಿಳಂಬ

ಇನ್ನು ಜನ ಶತಾಬ್ದಿ ರೈಲುಗಳ ಒಟ್ಟು 63,879 ಟ್ರಿಪ್‌ಗಳಲ್ಲಿ ಸಮಯಕ್ಕೆ 54,463 ಅಂದರೆ ಶೇ. 85.26ರಷ್ಟು ಸಮಯಕ್ಕೆ ಸರಿಯಾಗಿ ಬಂದರೆ 9,146 ಶೇ. 14.74ರಷ್ಟು ರೈಲಿಗಳು ವಿಳಂಬವಾಗಿ ನಿಗದಿತ ಸ್ಥಳಕ್ಕೆ ವಿಳಂಬವಾಗಿ ಬಂದಿದೆ. ಇನ್ನೂ ಮೇಲ್‌ ಎಕ್ಸ್‌ಪ್ರೆಸ್‌ ರೈಲುಗಳು ಒಟ್ಟು 20,12,241 ಟ್ರಿಪ್‌ಗಳಲ್ಲಿ ಸಮಯಕ್ಕೆ 16,28,987 ರೈಲಿಗಳು ಸಮಯಕ್ಕೆ ಸರಿಯಾಗಿ ನಿರ್ದಿಷ್ಟ ಸ್ಥಳ ತಲುಪಿದರೆ 3,83,254 ಅಂದರೆ 19.05ರಷ್ಟು ರೈಲುಗಳು ವಿಳಂಬವಾಗಿ ನಿಗದಿತ ಸ್ಥಳಕ್ಕೆ ವಿಳಂಬವಾಗಿ ಬಂದು ಸೇರಿವೆ.

ಇನ್ನು ಪ್ಯಾಸೆಂಜರ್ ರೈಲುಗಳು ಒಟ್ಟು 54,65,085 ಟ್ರಿಪ್‌ಗಳಲ್ಲಿ ಸಮಯಕ್ಕೆ ಸರಿಯಾಗಿ 40,57,489 ಅಂದರೆ ಶೇ. 74.24ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಬಂದರೆ ಬರೋಬ್ಬರಿ 14,07,596 ಅಂದರೆ 25.76ರಷ್ಟು ರೈಲುಗಳು ನಿಗದಿತ ಸ್ಥಳಕ್ಕೆ ವಿಳಂಬವಾಗಿ ತಲುಪಿವೆ ಎಂದು ರವಿಕುಮಾರ್‌ ತಿಳಿಸಿದ್ದಾರೆ.

English summary
According to the statistics released by the Indian Railway Department, it has been known that most of the trains, including the Rajdhani Express and the Shatabdi Express train, are not arriving on time for the last six years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X