ಪ್ರಿಯಕರನ ಮರ್ಮಾಂಗವನ್ನು ಕತ್ತರಿಸಿದ ಪ್ರೇಯಸಿ ಅಂದರ್
ಕುಟ್ಟಿಪುರಂ (ಕೇರಳ), ಸೆಪ್ಟೆಂಬರ್ 22 : ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಮರ್ಮಾಂಗವನ್ನು ಕತ್ತರಿಸಿದ ಘಟನೆ ಕೇರಳದ ಕುಟ್ಟಿಪುರಂ ಜಿಲ್ಲೆಯ ಲಾಡ್ಜ್ ವೊಂದರಲ್ಲಿ ಗುರುವಾರ ನಡೆದಿದ್ದು, ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಯುವಕನ್ನು 26 ವರ್ಷದ ಇರ್ಶಾದ್ ಎಂದು ಗುರುತಿಸಲಾಗಿದೆ. ಇರ್ಶಾದ್ ಮತ್ತೊಂದು ಹುಡುಗಿಯ ಜತೆ ಸಂಬಂಧ ಬೆಳೆಸಲು ಮುಂದಾಗಿದ್ದ. ಈ ವಿಚಾರ ತಿಳಿದು ರೊಚ್ಚಿಗೆದ್ದ ಮಹಿಳೆ, ಇರ್ಶಾದ್ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿದ್ದಾಳೆ.

ಇರ್ಶಾದ್ ತನ್ನ ಕೊಠಡಿಯಿಂದ ಓಡಿಬರುವುದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ಯುವಕನ ತುರ್ತು ಅಪರೇಷನ್ ನಡೆಸಿ ಮರ್ಮಾಂಗವನ್ನು ಯಶಸ್ವಿಯಾಗಿ ಜೋಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರೇಮಿಯ ಮರ್ಮಾಂಗವನ್ನು ತಾನೇ ಚಾಕುವಿನಿಂದ ಕತ್ತರಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.
ಮಹಿಳೆಗೆ ಈ ಹಿಂದೆ ಮದುವೆಯಾಗಿದ್ದು ಪತಿಗೆ ವಿಚ್ಛೇದನ ನೀಡಿದ್ದಳು. ಕಳೆದ 2 ವರ್ಷಗಳಿಂದ ಇರ್ಷಾದ್ ಜತೆ ಮಹಿಳೆ ಸಂಬಂಧ ಹೊಂದಿದ್ದು, ಇವರಿಬ್ಬರು ರಹಸ್ಯವಾಗಿ ಮದುವೆಯಾಗಿದ್ದರು.












Click it and Unblock the Notifications