ಭಾರತ ಪಾಕಿಸ್ತಾನ ಗಡಿಯಲ್ಲಿ 25 ಕೆಜಿ ಹೆರಾಯಿನ್ ವಶ
ನವದೆಹಲಿ, ಡಿಸೆಂಬರ್ 21: ಬುಧವಾರ ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಸ್ಮಗ್ಲರ್‌ಗಳೊಂದಿಗೆ ನಡೆದ ಗುಂಡಿನ ಚಕಮಕಿಯ ನಂತರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಡೆಗಳು 25 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿವೆ.
ಮುಂಜಾನೆ 1.50 ರ ಸುಮಾರಿಗೆ ಗಡಿಯಲ್ಲಿ ಬಿಎಸ್‌ಎಫ್ ಪಡೆಗಳು ಫಾಜಿಲ್ಕಾ ಜಿಲ್ಲೆಯ ಗಟ್ಟಿ ಅಜೈಬ್ ಸಿಂಗ್ ಗ್ರಾಮದ ಬಳಿ ಜಾರು ಪ್ರದೇಶದಲ್ಲಿ ಗಡಿ ಬೇಲಿಯ ಎರಡೂ ಬದಿಗಳಲ್ಲಿ ಕಳ್ಳಸಾಗಣೆದಾರರ ಕೆಲವು ಅನುಮಾನಾಸ್ಪದ ಚಲನವಲನವನ್ನು ಗಮನಿಸಿದರು ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನುಸುಳುವಿಕೆ ಕಂಡು ಬಂದ ತಕ್ಷಣ ಬಿಎಸ್ಎಫ್ ಪಡೆಗಳು ಗಡಿ ಬೇಲಿಯ ಮುಂದೆ ಪಾಕಿಸ್ತಾನಿ ಕಳ್ಳಸಾಗಣೆದಾರರ ಮೇಲೆ ತಕ್ಷಣವೇ ಗುಂಡಿನ ದಾಳಿ ನಡೆಸಿತು. ಆದರೆ, ದಟ್ಟ ಮಂಜಿನ ಲಾಭ ಪಡೆದು ಕಳ್ಳಸಾಗಣೆದಾರರು ಪರಾರಿಯಾಗಿದರು. ಇಡೀ ಪ್ರದೇಶವನ್ನು ಸುತ್ತುವರಿದ ಪೊಲೀಸರು ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಇದಲ್ಲದೆ ಆರಂಭಿಕ ಶೋಧದ ಸಮಯದಲ್ಲಿ ಬಿಎಸ್‌ಎಫ್ ಪಡೆಗಳು ಹೆರಾಯಿನ್ ಎಂದು ಶಂಕಿಸಲಾದ ನಾಲ್ಕು ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡರು. ಇದು ಹಳ್ಳಿ ಗಟ್ಟಿ ಅಜೈಬ್ ಸಿಂಗ್ ಬಳಿಯ ಗಡಿ ಬೇಲಿಯಲ್ಲಿ ಹಳದಿ ಟೇಪ್‌ನಲ್ಲಿ ಸುತ್ತಲಾಗಿತ್ತು. ಪ್ರದೇಶದ ವಿವರವಾದ ಹುಡುಕಾಟದಲ್ಲಿ 12 ಅಡಿ ಉದ್ದದ ಒಂದು ಪಿವಿಸಿ ಪೈಪ್ ಮತ್ತು ಗಡಿ ಬೇಲಿಯಿಂದ ಒಂದು ಶಾಲು ಜೊತೆಗೆ ಟೇಪ್‌ನಲ್ಲಿ ಸುತ್ತಿದ ಹೆರಾಯಿನ್ ಎಂದು ಶಂಕಿಸಲಾದ 21 ಪ್ಯಾಕೆಟ್‌ಗಳನ್ನು ಪಡೆಗಳು ವಶಪಡಿಸಿಕೊಂಡವು ಎಂದು ಅವರು ಹೇಳಿದರು.

ಅಂದಾಜು 25 ಕೆಜಿ ತೂಕದ ಹೆರಾಯಿನ್ ಎಂದು ಶಂಕಿಸಲಾದ 25 ಪ್ಯಾಕೆಟ್‌ಗಳು ಒಂದು ಪಿವಿಸಿ ಪೈಪ್ ಮತ್ತು ಒಂದು ಶಾಲು ವಶಪಡಿಸಿಕೊಳ್ಳಲಾಗಿದೆ. ಎಚ್ಚೆತ್ತ ಬಿಎಸ್‌ಎಫ್ ಪಡೆಗಳು ಕಳ್ಳಸಾಗಣೆದಾರರ ಭಾರಿ ಸಂಚನ್ನು ವಿಫಲಗೊಳಿಸಿದವು ಎಂದು ಬಿಎಸ್‌ಎಫ್ ಹೇಳಿದೆ.












Click it and Unblock the Notifications