24 ವರ್ಷದಲ್ಲಿ ಯಾರೂ ಮಾಡದ ಸಾಧನೆ ಮಾಡಿದ ತಾನ್ಯಾ ನಾಥನ್: ಕೇರಳದ ಪ್ರಪ್ರಥಮ ಅಂಧ ನ್ಯಾಯಾಧೀಶೆ, ಪಯಣವೇ ರೋಚಕ!
ಸಾಧನೆ ಮಾಡುವವರಿಗೆ ಯಾವ ವಿಷಯವೂ ಅಡ್ಡಿ ಆಗುವುದಿಲ್ಲ ಎನ್ನುವ ವಿಚಾರವು ಮತ್ತೊಮ್ಮೆ ಸಾಬೀತಾಗಿದೆ. ಬಡತನವಿರುವವರು, ವಿಶೇಷ ಚೇತನರು ಸವಾಲುಗಳನ್ನು ದಾಟಿ ಪ್ರೇರಣೆ ಆಗುತ್ತಿದ್ದಾರೆ. ಅದರಲ್ಲೂ ನಿನ್ನಿಂದ ಸಾಧ್ಯವಿಲ್ಲ, ನಿನಗೆ ಇದೆಲ್ಲ ಬೇಕಾ ಎನ್ನುವವರ ನಡುವೆ ಸಾಧನೆ ಮಾಡಿ ತೋರಿಸುವುದರಲ್ಲಿ ಇರುವ ಸಂತೋಷವೇ ಬೇರೆ. ಹೌದು ನೆರೆಯ ಕೇರಳ ಮೂಲದ 24 ವಯಸ್ಸಿನ ಯುವತಿಯೊಬ್ಬರು ಈ ರೀತಿಯ ಸಾಧನೆಗೆ ಕಾರಣರಾಗಿದ್ದಾರೆ. ಥಾನ್ಯಾ ನಾಥನ್ ಎನ್ನುವ ಯುವತಿ ಕೇರಳದಲ್ಲಿಯೇ ಅಲ್ಲದೆ ಭಾರತದಲ್ಲೇ ಬೆರಳೆಣಿಕೆಯ ಯುವಕರು ಮಾತ್ರ ಮಾಡಿರುವ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಅದೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
24 ವಯಸ್ಸಿ ಕೇರಳದ ಯುವತಿ ಥಾನ್ಯಾ ನಾಥನ್ ಅವರು ಕೇರಳದ ನ್ಯಾಯಾಂಗದಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಹುಟ್ಟಿನಿಂದಲೇ ದೃಷ್ಟಿ ಸಮಸ್ಯೆ (ಅಂಧತ್ವ) ಎದುರಿಸುತ್ತಿರುವ ಥ್ಯಾನ್ ಅವರು, ಕೇರಳ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅಲ್ಲದೆ ರಾಜ್ಯದ ಮೊದಲ ದೃಷ್ಟಿಹೀನ ನ್ಯಾಯಾಧೀಶೆ ಆಗಿದ್ದಾರೆ. ನಾನು ಈ ಹಂತವನ್ನು ತಲುಪುವುದಕ್ಕೆ ತುಂಬಾನೇ ಕಷ್ಟಪಟ್ಟಿದ್ದೇನೆ ಅಂತ ಅವರು ಹೇಳಿಕೊಂಡಿದ್ದಾರೆ.

ಈ ವಿಷಯವು ತೀರ ಇತ್ತೀಚಿನವರೆಗೂ ಸಾಧ್ಯವಿರಲಿಲ್ಲ. 2025ರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುವೊಂದನ್ನು ನೀಡಿತ್ತು. ಆ ತೀರ್ಪಿನಲ್ಲಿ ದೃಷ್ಟಿಹೀನ ಅಭ್ಯರ್ಥಿಗಳನ್ನು ಕೇವಲ ಅಂಗವೈಕಲ್ಯದ ಕಾರಣದಿಂದಾಗಿ ನ್ಯಾಯಾಂಗ ಸೇವೆಗೆ "ಅನರ್ಹರು" ಎಂದು ಪರಿಗಣಿಸಲಾಗುವುದಿಲ್ಲ ಎಂದು ದೃಢಪಡಿಸಿತ್ತು. ಥಾನ್ಯಾ ಅವರು ಈ ತೀರ್ಪಿನಿಂದ ಪ್ರೇರೇಪಿತರಾದರು. ಇಲ್ಲಿಂದಲೇ ಅವರ ಪಯಣ ಪ್ರಾರಂಭವಾಯಿತು.
ಥಾನ್ಯಾ ನಾಥನ್ ಅವರು ಬ್ರೈಲ್ ನೋಟ್ಸ್ ಮತ್ತು ಸ್ಕ್ರೀನ್-ರೀಡಿಂಗ್ ಸಾಫ್ಟ್‌ವೇರ್ ಬಳಸಿ ಪರೀಕ್ಷೆಗೆ ತಯಾರಿ ನಡೆಸಿದರು. ಕೇರಳದ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ತಮ್ಮ ಎಲ್‌ಎಲ್‌ಬಿ ಬ್ಯಾಚ್‌ನಲ್ಲಿ ಅಗ್ರಸ್ಥಾನ ಪಡೆದರು ಮತ್ತು ಕಳೆದ ಒಂದೂವರೆ ವರ್ಷ ಅವರು ಥಲಿಪರಂಬದಲ್ಲಿ (ಕೇರಳದ ಪಟ್ಟಣ) ಮಾರ್ಗದರ್ಶಕರಿಂದ ಕಾನೂನು ಅಭ್ಯಾಸ ಮಾಡಿದ್ದಾರೆ. ಅಲ್ಲದೆ ಅವರು ನಾಗರಿಕ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ.
Inspiring Journey: ಈ ಪಯಣ ತಲುಪುವುದು ತುಂಬಾ ಕಷ್ಟವಾಗಿತ್ತು: ಥಾನ್ಯಾ ನಾಥನ್
ಇನ್ನು ಈ ಪಯಣವು ತಲುಪುವುದು ತುಂಬಾ ಸವಾಲಿನ ಕೆಲಸವಾಗಿತ್ತು ಎಂದು ಥಾನ್ಯಾ ನಾಥನ್ ಅವರು ಹೇಳಿದ್ದಾರೆ. ಈ ಕೆಲಸವನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವ ಪ್ರಶ್ನೆಗೆ ಅವರ ಉತ್ತರ ಸರಳವಾಗಿತ್ತು. ಈಗ ತಂತ್ರಜ್ಞಾನವು ಸಾಕಷ್ಟು ಮುಂದುವರೆದಿದೆ, ಹೆಚ್ಚಿನ ನ್ಯಾಯಾಂಗ ಕೆಲಸವನ್ನು ಸ್ಕ್ರೀನ್ ರೀಡರ್‌ಗಳು ಮತ್ತು ಡಿಕ್ಟೇಷನ್ ಸಾಫ್ಟ್‌ವೇರ್‌ನಂತಹ ಸಹಾಯಕ ಸಾಧನಗಳೊಂದಿಗೆ ನಿರ್ವಹಿಸಬಹುದು. ಆದರೆ, ಇಲ್ಲಿಗೆ ತಲುಪಲು ನಾನು ತುಂಬಾ ಕಷ್ಟಪಟ್ಟಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೆ ಈ ವರ್ಷ ಥಾನ್ಯಾ ನಾಥನ್ ಅವರು ಮಾತ್ರ ಈ ಮಾದರಿಯ ಸಾಧನೆ ಮಾಡಿಲ್ಲ. ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಜಾಯ್ಸನ್ ಸಜನ್, ಅದೇ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಒಂದು ಕಾಲದಲ್ಲಿ ವಿಶೇಷ ಚೇತನರು ಈ ಪರೀಕ್ಷೆಗಳನ್ನು ಬರೆಯುವುದು ಕಷ್ಟವಾಗಿತ್ತು. ಇದೀಗ ಅಸಾಧ್ಯ ಎನ್ನುವುದನ್ನು ಈ ಇಬ್ಬರು ವ್ಯಕ್ತಿಗಳು ಮಾಡಿ ತೋರಿಸಿದ್ದಾರೆ. ನ್ಯಾಯವು ಎಂದಿಗೂ ದೃಷ್ಟಿಯ ಬಗ್ಗೆಯಾಗಿರಲಿಲ್ಲ. ಅದು ಯಾವಾಗಲೂ ತೀರ್ಪು, ಸಮಗ್ರತೆ ಮತ್ತು ನಿಮ್ಮನ್ನು ಅನುಮಾನಿಸುವವರಿಗಿಂತ ಹೆಚ್ಚು ಸಿದ್ಧರಾಗುವ ಇಚ್ಛೆಯ ಬಗ್ಗೆಯಾಗಿತ್ತು ಎಂದು ಹೇಳಲಾಗಿದೆ.
This is genuinely heartening news.
— Deadly Law (@DeadlyLaw) February 9, 2026
For the first time, a visually challenged woman, Thanya Nathan C., has qualified for the Kerala Judicial Service and will now become a Civil Judge. Completely visually impaired, Continued courtroom practice alongside preparation.
Practising in… pic.twitter.com/EpuhTme9O4


Click it and Unblock the Notifications
