ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಕುಡಿದು ಮಲಗಿದ 24 ಆನೆಗಳ ಹಿಂಡು: ಅರಣ್ಯದೊಳಗೆ ಗಂಟೆಗಟ್ಟಲೆ ನಿದ್ದೆ

|
Google Oneindia Kannada News

ಭುವನೇಶ್ವರ್, ನವೆಂಬರ್ 10: 24 ಆನೆಗಳ ಹಿಂಡು ಮದ್ಯ ಕುಡಿದು ಗಂಟೆಗಟ್ಟಲೆ ನಿದ್ರಿಸಿದ ಘಟನೆ ಒಡಿಶಾದ ಅರಣ್ಯದೊಳಗೆ ನಡೆದಿದೆ. ಹಳ್ಳಿಗಾಡಿನಲ್ಲಿ ಮದ್ಯ ಬೆರೆತ ನೀರನ್ನು ಕುಡಿದು ಗಾಢ ನಿದ್ರೆಯಲ್ಲಿದ್ದ 24 ಆನೆಗಳ ಹಿಂಡನ್ನು ಕಂಡು ಒಡಿಶಾದ ಕಿಯೋಂಜಾರ್ ಜಿಲ್ಲೆಯ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಕಾಡಿನ ಬಳಿ ವಾಸಿಸುವ ಗ್ರಾಮಸ್ಥರು 'ಮಹುವಾ' ಎಂಬ ಹಳ್ಳಿಗಾಡಿನ ಮದ್ಯವನ್ನು ತಯಾರಿಸಲು ಕಾಡಿನೊಳಗೆ ಹೋಗಿದ್ದರು. ಆದರೆ ಆನೆಗಳ ಹಿಂಡು ಈಗಾಗಲೇ ಅಮಲೇರಿದ ಹೂವುಗಳಿಂದ ಹುದುಗಿಸಿದ ನೀರನ್ನು ಕುಡಿದು ಗಾಢ ನಿದ್ರೆಯಲ್ಲಿದ್ದವು. ಕುಡಿತದ ಅಮಲಿನಲ್ಲಿದ್ದ 24 ಆನೆಗಳು, ನೀರಿನಲ್ಲಿ ಮಹುವಾ ಹೂಗಳನ್ನು ಇಡುವ ದೊಡ್ಡ ಕುಂಡಗಳ ಬಳಿ ಮಲಗಿದ್ದವು. ಒಂಬತ್ತು ಆನೆಗಳು, ಆರು ಹೆಣ್ಣು ಮತ್ತು ಒಂಬತ್ತು ಕರುಗಳು ಇದ್ದವು.

ಆನೆ-ಹುಲಿಗೆ ಹೆದರದವರನ್ನು ಕಂಗೆಡಿಸಿದ ಕೋತಿಗಳುಆನೆ-ಹುಲಿಗೆ ಹೆದರದವರನ್ನು ಕಂಗೆಡಿಸಿದ ಕೋತಿಗಳು

ಹಳ್ಳಿಗರ ಪ್ರತಿಕ್ರಿಯೆ

"ನಾವು ಮಹುವಾ ತಯಾರಿಸಲು ಬೆಳಿಗ್ಗೆ 6 ಗಂಟೆಗೆ ಕಾಡಿನೊಳಗೆ ಹೋದೆವು. ಅಲ್ಲಿ ಎಲ್ಲಾ ಮಡಕೆಗಳು ಮುರಿದುಹೋಗಿದ್ದವು. ಹುದುಗಿಸಿದ ನೀರು ಕಾಣೆಯಾಗಿತ್ತು. ಅಲ್ಲಿಯೇ ಆನೆಗಳು ಮಲಗಿದ್ದನ್ನೂ ನಾವು ಕಂಡುಕೊಂಡಿದ್ದೇವೆ. ಅವರು ಹುದುಗಿಸಿದ ನೀರನ್ನು ಆನೆಗಳು ಕುಡಿದಿವೆ"ಎಂದು ಗ್ರಾಮಸ್ಥರಾದ ನಾರಿಯಾ ಸೇಥಿ ಹೇಳಿದರು. "ಆ ಮದ್ಯವನ್ನು ಸಂಸ್ಕರಿಸಲಾಗಿಲ್ಲ. ನಾವು ಪ್ರಾಣಿಗಳನ್ನು ಎಬ್ಬಿಸಲು ಪ್ರಯತ್ನಿಸಿದೆವು ಆದರೆ ವಿಫಲವಾದೆವು. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು'' ಎಂದರು.

24 elephants slept for hours after drinking alcohol in Odisha forest

ಆನೆಗಳು ಹೇಗೆ ಎಚ್ಚರವಾದವು?

ಪಟನಾ ಅರಣ್ಯ ವ್ಯಾಪ್ತಿಯ ಕಾಡಿನಲ್ಲಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳ ಹಿಂಡುಗಳನ್ನು ಎಬ್ಬಿಸಲು ಡ್ರಮ್ ಬಾರಿಸಬೇಕಾಯಿತು. ನಂತರ ಆನೆಗಳು ಕಾಡಿನೊಳಗೆ ಹೋದವು ಎಂದು ಅರಣ್ಯ ಸಂರಕ್ಷಣಾಧಿಕಾರಿ ಘಾಸಿರಾಮ್ ಪಾತ್ರ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಹಿಂಡು ಸ್ಥಳದಿಂದ ತೆರಳಿದೆ ಎಂದು ಪಾತ್ರ ತಿಳಿಸಿದ್ದಾರೆ.

ಆದರೆ ಆನೆಗಳು ಹುದುಗಿಸಿದ ಮಹುವಾ ಕುಡಿದಿವೆಯೇ ಎಂಬುದು ಅರಣ್ಯಾಧಿಕಾರಿಗೆ ಖಚಿತವಾಗಿಲ್ಲ. "ಬಹುಶಃ ಆನೆಗಳು ಅಲ್ಲಿ ವಿಶ್ರಾಂತಿ ಪಡೆಯುತ್ತಿರಬಹುದು" ಎಂದು ಪತ್ರಾ ಹೇಳಿದ್ದಾರೆ. ಮತ್ತೊಂದೆಡೆ ಒಡೆದ ಮಡಕೆಗಳ ಸಮೀಪವಿರುವ ವಿವಿಧ ಸ್ಥಳಗಳಲ್ಲಿ ಮಂಗಳವಾರ ಆನೆಗಳು ಅಮಲೇರಿದ ಸ್ಥಿತಿಯಲ್ಲಿ ಮಲಗಿದ್ದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

24 elephants slept for hours after drinking alcohol in Odisha forest

ಮಹುವಾ ಎಂಬ ಆಲ್ಕೊಹಾಲ್ ತಯಾರಿಕೆ

ಮಹುವಾ ಮರದ ಹೂವುಗಳನ್ನು (ಮಧುಕಾ ಲಾಂಗಿಫೋಲಿಯಾ) ಹುದುಗಿಸಿ, ಮಹುವಾ ಎಂದು ಕರೆಯಲ್ಪಡುವ ಆಲ್ಕೊಹಾಲ್ಯುಕ್ತ ಪಾನೀಯವನ್ನು ಉತ್ಪಾದಿಸಲಾಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಬುಡಕಟ್ಟು ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕವಾಗಿ ಈ ಮದ್ಯವನ್ನು ತಯಾರಿಸುತ್ತಾರೆ.

English summary
A group of villagers in Odisha's Keonjhar district were taken aback when they saw a herd of 24 elephants were in deep sleep after devouring the fermented water of a traditional country liquor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X