ದೇಶದಲ್ಲಿ 24,337 ಹೊಸ ಕೊರೊನಾ ವೈರಸ್ ಪ್ರಕರಣ

ನವದೆಹಲಿ, ಡಿಸೆಂಬರ್ 21: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 24,337 ಹೊಸ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ಭಾನುವಾರದಂದು 333 ಮಂದಿ ಕೋವಿಡ್ ಸೋಂಕಿತರು ಬಲಿಯಾಗಿದ್ದಾರೆ. ಇದರಿಂದ ಒಟ್ಟು ಸಾವಿನ ಸಂಖ್ಯೆ 1,45,810ಕ್ಕೆ ತಲುಪಿದೆ.

ಭಾನುವಾರ 25,709 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ವರದಿಯಾಗಿದೆ. ಈ ಮೂಲಕ ಒಟ್ಟು ಚೇತರಿಕೆಯ ಸಂಖ್ಯೆ 96,06,111 ಏರಿಕೆಯಾಗಿದೆ. ಇದುವರೆಗೂ ದೇಶದಲ್ಲಿ ಒಟ್ಟು 1,00,55,560 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳು 3,03,639ಕ್ಕೆ ತಗ್ಗಿವೆ.

ದೇಶದಲ್ಲಿ ಡಿ. 20ರವರೆಗೂ 16,20,98,329 ಮಾದರಿಗಳ ಪರೀಕ್ಷೆಗಳು ನಡೆದಿವೆ. ಇವುಗಳ ಪೈಕಿ 9,00,134 ಮಾದರಿಗಳನ್ನು ಭಾನುವಾರ ತಪಾಸಣೆ ನಡೆಸಲಾಗಿದೆ.

24,337 New Coronavirus Cases, 333 Death Reported In 24 Hours

ಜಗತ್ತಿನಾದ್ಯಂತ ಇದುವರೆಗೂ 77,171,723 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ 1,699,643 ಮಂದಿ ವೈರಸ್‌ನಿಂದ ಮೃತಪಟ್ಟಿದ್ದಾರೆ. 54,088,619 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳು 21,383,461ರಷ್ಟಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+