ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ವಿಐಪಿ ಭದ್ರತೆ ಪಡೆಯುತ್ತಿರುವ ಮಂದಿ ಎಷ್ಟು?

|
Google Oneindia Kannada News

ನವದೆಹಲಿ, ಮಾರ್ಚ್ 09: ಕೇಂದ್ರ ಸರ್ಕಾರವು 230 ಮಂದಿಗೆಗೆ ವಿಐಪಿ ಭದ್ರತೆ ನೀಡಿದೆ. 230 ಮಂದಿ ಭದ್ರತೆಗೆ ಆಗುತ್ತಿರುವ ವೆಚ್ಚದ ಮಾಹಿತಿಯನ್ನು ತಿಳಿಸಿಲ್ಲ, ಹಲವು ರಾಜ್ಯ ಸರ್ಕಾರಗಳು ಹಾಗೂ ಸಂಸ್ಥೆಗಳು ಭದ್ರತೆಯ ವ್ಯವಸ್ಥೆ ಕಲ್ಪಿಸುವುದರಲ್ಲಿ ಭಾಗಿಯಾಗಿರುವುದರಿಂದ ವೆಚ್ಚ ಅಂದಾಜಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸಿಆರ್‌ಪಿಎಫ್ ಮತ್ತು ಸಿಐಎಸ್‌ಎಫ್ ರೀತಿಯ ಭದ್ರತಾ ಪಡೆಗಳು ಝಡ್ ಪ್ಲಸ್, ಝಡ್ ಹಾಗೂ ವೈ ಶ್ರೇಣಿಯಭದ್ರತೆಗಳನ್ನು ನೀಡುತ್ತಿವೆ. ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಸಚಿವ ಜಿ. ಕಿಶನ್ ರೆಡ್ಡಿ ಲಿಖಿತ ಉತ್ತರ ನೀಡಿದ್ದಾರೆ.

ಟಿಎಂಸಿ ತೊರೆದ ಸುವೇಂದುಗೆ ಕೇಂದ್ರದಿಂದ 'ಝಡ್' ಶ್ರೇಣಿಯ ಭದ್ರತೆ ಟಿಎಂಸಿ ತೊರೆದ ಸುವೇಂದುಗೆ ಕೇಂದ್ರದಿಂದ 'ಝಡ್' ಶ್ರೇಣಿಯ ಭದ್ರತೆ

ಝಡ್ ಪ್ಲಸ್ ಭದ್ರತೆಯು ಉನ್ನತ ಶ್ರೇಣಿಯ ಭದ್ರತಾ ವ್ಯವಸ್ಥೆಯಾಗಿದ್ದು, 22 ರಿಂದ 30 ಕಮಾಂಡೊಗಳು ವ್ಯಕ್ತಿಯ ಭದ್ರತೆಗೆ ನಿಯೋಜನೆಯಾಗಿರುತ್ತಾರೆ. ಝಡ್ ಶ್ರೇಣಿಯಲ್ಲಿ 15 ರಿಂದ 18 ಮಂದಿ ಸಿಬ್ಬಂದಿ ಭದ್ರತೆ ಕಲ್ಪಿಸುತ್ತಾರೆ.

230 People Get VIP Security From Central Govt: Kishan Reddy

ಕೇಂದ್ರದ ಭದ್ರತಾ ಸಂಸ್ಥೆಯು ಭದ್ರತೆಗೆ ಒಳಪಡುವ ವ್ಯಕ್ತಿಗಿರುವ ಅಪಾಯದ ಮಟ್ಟವನ್ನು ಆಧರಿಸಿ ಕೇಂದ್ರದಿಂದ ಪಟ್ಟಿ ಸಿದ್ಧಪಡಿಸುತ್ತಿದೆ. 230 ಜನರಿಗೆ ಕೇಂದ್ರದಿಂ ಭದ್ರತೆ ನೀಡಲಾಗಿದೆ, ವಿಐಪಿ ಭದ್ರತೆಯ ಪೈಕಿ ಕೊನೆಯ ಶ್ರೇಣಿಗಳಾದ ವೈ ಪ್ಲಸ್‌ನಲ್ಲಿ 8 ರಿಂದ 12 ಕಮಾಂಡೊಗಳು ಹಾಗೂ ವೈ ಶ್ರೇಣಿಯಲ್ಲಿ 6 ರಿಂದ 10 ಕಮಾಂಡೊಗಳು ಭದ್ರತೆ ನೀಡುತ್ತಾರೆ.

ಭದ್ರತೆಯನ್ನು ಮುಂದುವರೆಸುವುದು, ವಾಪಸ್ ಪಡೆಯುವುದು ಅಥವಾ ಬದಲಾವಣೆ ಮಾಡುವುದು ವ್ಯಕ್ತಿಗಿರುವ ಅಪಾಯದ ಮಟ್ಟವನ್ನು ನೋಡಿ ನಿರ್ಧರಿಸಲಾಗುತ್ತದೆ.
ಹಾಗೆಯೇ ವ್ಯಕ್ತಿಯ ಭದ್ರತಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

ಪ್ರಾಥಮಿಕವಾಗಿ ವ್ಯಕ್ತಿಯ ಭದ್ರತೆಯು ರಾಜ್ಯ ಸರ್ಕಾರದ ಹೊಣೆಯಾಗಿರುತ್ತದೆ ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ಪಟ್ಟಿಯನ್ನು ಕೇಂದ್ರ ಸರ್ಕಾರ ನಿರ್ವಹಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

English summary
As many as 230 people are currently being provided security by the Central Armed Police Forces (CAPFs) such as the CRPF and the CISF under different categories like "Z-plus", "Z" and "Y", the government informed Parliament on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X