Breaking : ಭಾರತದಲ್ಲಿ 21,880 ಹೊಸ ಕೋವಿಡ್ ಪ್ರಕರಣ ದಾಖಲು
ನವದೆಹಲಿ, ಜುಲೈ 22: ಭಾರತದಲ್ಲಿ 24 ಗಂಟೆಯಲ್ಲಿ 21,880 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 43,847,065ಕ್ಕೆ ಏರಿಕೆಯಾಗಿದೆ. ಗುರುವಾರ 21,566 ಪ್ರಕರಣಗಳು ವರದಿಯಾಗಿದ್ದವು.
ಕೊರೊನಾ ಸೋಂಕಿನಿಂದ ಒಟ್ಟು 60 ಮಂದಿ ಬಲಿಯಾಗಿದ್ದಾರೆ. ಬುಧವಾರದ ಅಂಕಿ ಅಂಶಗಳಿಗೆ ಹೊಲಿಸಿದರೇ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಕೋವಿಡ್ ಸಂಬಂಧಿತ ಸಾವುಗಳ ಸಂಖ್ಯೆಯನ್ನು 525,930ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.
ಇನ್ನೂ 21,219 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ. ಒಟ್ಟು ಚೇತರಿಕೆಯ ಸಂಖ್ಯೆ 43,171,653ಕ್ಕೆ ಏರಿಕೆಯಾಗಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 149,482ಕ್ಕೆ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ 3.7 ಮಿಲಿಯನ್‌ಗಿಂತಲೂ ಹೆಚ್ಚು ವಾಕ್ಸಿನ್ ಡೋಸ್‌ಗಳನ್ನು ನೀಡಲಾಗಿದೆ. ಇದು ರಾಷ್ಟ್ರೀಯ ವ್ಯಾಕ್ಸಿನೇಷನ್ ಪ್ರಮಾಣವನ್ನು 2.01 ಶತಕೋಟಿಗಿಂತ ಹೆಚ್ಚಿಸಿದೆ.
India records 21,880 new Covid19 cases and 60 deaths in the last 24 hours; Active cases at 1,49,482 pic.twitter.com/HCE6x3uNiW
— ANI (@ANI) July 22, 2022
ಜುಲೈ 21 ರಂದು, ಕೇಂದ್ರ ಸರ್ಕಾರವು ಕೋವಿಡ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಒಂಬತ್ತು ರಾಜ್ಯಗಳಿಗೆ ಪ್ರತಿದಿನವೂ ತೀವ್ರತರವಾದ ಉಸಿರಾಟದ ಕಾಯಿಲೆ (SARI) ಮತ್ತು ಇನ್ಫ್ಲುಯೆನ್ಸ ರೀತಿಯ ಅನಾರೋಗ್ಯದ (ILI) ಕುರಿತ ಜಿಲ್ಲಾವಾರು ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವರದಿ ಮಾಡಲು ನಿರ್ದೇಶಿಸಿದೆ.
ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ, ಆಂಧ್ರ ಪ್ರದೇಶ, ಹಿಮಾಚಲ ಪ್ರದೇಶ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಹೆಚ್ಚು ಕೊರೊನಾ ಪ್ರಕರಗಳು ವರದಿಯಾಗುತ್ತಿವೆ. ಈ ರಾಜ್ಯಗಳಿಗೆ ಆರೋಗ್ಯ ಇಲಾಖೆ ಸೂಚನೆಗಳನ್ನು ನೀಡಿದೆ.

ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಏರಿಕೆ ಆಗುತ್ತಿರುವುದರ ಹಿನ್ನೆಲೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ದೇಶದಲ್ಲಿ ಕೋವಿಡ್-19 ಬೂಸ್ಟರ್ ಡೋಸ್ ಲಸಿಕೆ ಅನ್ನು ಸಹ ಉಚಿತವಾಗಿ ನೀಡುವುದಕ್ಕೆ ನಿರ್ಧರಿಸಿದೆ. ಜುಲೈ 15 ರಿಂದ ಮುಂದಿನ 75 ದಿನಗಳವರೆಗೂ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಬೂಸ್ಟರ್ ಡೋಸ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದರು.












Click it and Unblock the Notifications