Gold Rate: 2026ರಲ್ಲಿ ಚಿನ್ನದ ಬೆಲೆ ಶೇ 15%ರಿಂದ ಇಷ್ಟು ಪ್ರಮಾಣ ಹೆಚ್ಚಳ: ಡಬ್ಲ್ಯುಜಿಸಿ ವರದಿ!
2026 Gold Rate Forecast: ಚಿನ್ನದ ಬೆಲೆಯು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ 2025ನೇ ಸಾಲಿನಲ್ಲಿ ಚಿನ್ನದ ಬೆಲೆಯು ಹಲವು ಪಟ್ಟು ಹೆಚ್ಚಳವಾಗಿದೆ. ಈ ವರ್ಷ ಪ್ರಾರಂಭದಲ್ಲಿದ್ದ ಚಿನ್ನದ ಬೆಲೆಗೂ ಇಂದಿನ ಚಿನ್ನದ ಬೆಲೆಗೂ ಸಾಕಷ್ಟು ವ್ಯತ್ಯಾಸವಿದೆ.
ಇನ್ನು ಅಪರೂಪ ಎನ್ನುವಂತೆ ಈ ವರ್ಷ ಬೆಳ್ಳಿ ಬೆಲೆಯೂ ಸಹ ನಿರಂತರವಾಗಿ ಹೆಚ್ಚಳವಾಗಿದೆ. ಆದರೆ 2026ನೇ ವರ್ಷದಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಳವಾಗಬಹುದು ಎನ್ನುವ ಬಗ್ಗೆ ವರದಿಯೊಂದು ಪ್ರಕಟವಾಗಿದ್ದು, ಇದು ಚಿನ್ನ ಪ್ರಿಯರಲ್ಲಿ ಭಾರೀ ಆತಂಕವನ್ನು ಸೃಷ್ಟಿ ಮಾಡಿದೆ. ಮುಂದಿನ ದಿನಗಳಲ್ಲಿ ಚಿನ್ನದ ಖರೀದಿ ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಇಷ್ಟುಕ್ಕೂ ಆ ವರದಿ ಏನು, 2026ರಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಳವಾಗಲಿದೆ ಎನ್ನುವ ವಿವರ ನೋಡೋಣ.

ಚಿನ್ನದ ಮೇಲೆ ಹೂಡಿಕೆ ಮಾಡುವವರು ಹಾಗೂ ಚಿನ್ನದ ಖರೀದಿ ಮಾಡುವವರ ಸಂಖ್ಯೆ ಹೆಚ್ಚಳವಾಗಿದ್ದು, ಇದೀಗ ಚಿನ್ನದ ಬೆಲೆಯು ನಿರಂತರವಾಗಿ ಏರಿಕೆಯ ಹಾದಿಯಲ್ಲಿದೆ. ಜಾಗತಿಕವಾಗಿ ಹಲವು ಬದಲಾವಣೆಗಳು ಹಾಗೂ ಆರ್ಥಿಕ ಅನಿಶ್ಚಿತತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಚಿನ್ನದ ಬೇಡಿಕೆ ನಿರಂತರವಾಗಿ ಹೆಚ್ಚಳವಾಗುತ್ತಿರುವುದು ಹಾಗೂ ಚಿನ್ನ ಸುರಕ್ಷಿತ ಹೂಡಿಕೆ ಎನ್ನುವ ಕಾರಣಕ್ಕೆ ಚಿನ್ನದ ಬೆಲೆ ಗಗನಮುಖಿಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ 2026ನೇ ಸಾಲಿನಲ್ಲಿ ಬಂಗಾರದ ಬೆಲೆ ಏನಾಗಬಹುದು ಎನ್ನುವುದನ್ನು ವರದಿಯೊಂದು ಪ್ರಕಟಿಸಿದ್ದು, ಇದು ಬಂಗಾರ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಆದರೆ ಇದೇ ಸಂದರ್ಭದಲ್ಲಿ ಈಗಾಗಲೇ ಚಿನ್ನವನ್ನು ಖರೀದಿ ಮಾಡಿರುವವರು ಸಂತೋಷಪಡು ವಾತಾವರಣ ನಿರ್ಮಾಣವಾಗಿದೆ.
ಅಮೇರಿಕಾದ ದುಬಾರಿ ಟ್ಯಾಕ್ಸ್ , ಮುಂದುವರಿದ ರಷ್ಯಾ - ಉಕ್ರೇನ್ ಯುದ್ಧ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಸೇರಿದಂತೆ ಹಲವು ಕಾರಣಗಳಿಗೆ 2025ನೇ ಸಾಲಿನಲ್ಲಿ ಹಲವು ಬಾರಿ ಚಿನ್ನದ ಬೆಲೆಯು ಹೆಚ್ಚಳವಾಗಿದೆ. ಇದೀಗ ಡಬ್ಲ್ಯುಜಿಸಿ ವರದಿಯ ಪ್ರಕಾರ 2026ನೇ ಸಾಲಿನಲ್ಲಿ ಚಿನ್ನದ ಮುನ್ನೋಟ ಎನ್ನುವ ವರದಿಯಲ್ಲಿ ಬಂಗಾರದ ಬೆಲೆ ಬರೋಬ್ಬರಿ ಶೇ 30% ರಷ್ಟು ಹೆಚ್ಚಳವಾಗಲಿದೆ ಎಂದು ಉಲ್ಲೇಖಿಸಲಾಗಿದೆ.
ರಾಜಕೀಯ, ಭೌಗೋಳಿಕ ಬಿಕ್ಕಟ್ಟುಗಳು ಅಥವಾ ಹೊಸ ಸಮಸ್ಯೆಗಳಿಂದ ವಿಶ್ವಾಸ ಕುಗ್ಗುವ ಸಾಧ್ಯತೆ ಇದೆ. ಈ ರೀತಿಯ ಪರಿಸ್ಥಿತಿ ಸೃಷ್ಟಿಯಾದರೆ ಉದ್ದಿಮೆಗಳು ಹೂಡಿಕೆಯನ್ನು ಕಡಿಮೆ ಮಾಡಲಿವೆ. ಕುಟುಂಬಗಳು ಸಹ ಖರ್ಚನ್ನು ಸೀಮಿತಗೊಳಿಸಲಿವೆ ಎಂದು ಡಬ್ಲ್ಯುಜಿಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಈಗ ಇರುವ ಬೆಲೆಯಿಂದ ಶೇ. 15ರಿಂದ ಶೇ 20ರವರೆಗೆ ಏರಿಕೆ ಕಾಣಬಹುದು ಎಂದು ವರದಿ ಅಂದಾಜಿಸಿದೆ.
ಅಮೇರಿಕಾದಲ್ಲಿ ಹಣದುಬ್ಬರದ ಪರಿಣಾಮದಿಂದಾಗಿ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದೆಲ್ಲವೂ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಹೆಚ್ಚಳವಾಗುವುದಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
-
Gold: ಅಮೆರಿಕಕ್ಕೆ ವೆನೆಜುವೆಲಾದಿಂದ 1,000 ಕೆ.ಜಿ ಚಿನ್ನ ರಫ್ತು: ಬಹುಕೋಟಿ ಡಾಲರ್ ಒಪ್ಪಂದಕ್ಕೆ ಸಹಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications